ಶಿವರಾಜ್ ಸಿಂಗ್ ಚೌಹಾಣ ವಿರುದ್ಧ ಕಾಂಗ್ರೆಸ್ ಪೋಸ್ಟರ್ ಅಭಿಯಾನ : ಕಾಂಗ್ರೆಸ್ಸಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಫೋನ್ ಪೇ

ಭೋಪಾಲ: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ಭೋಪಾಲದಾದ್ಯಂತ ಕಾಂಗ್ರೆಸ್ ಪಕ್ಷವು ಪೋಸ್ಟರ್‌ಗಳನ್ನು ಅಂಟಿಸಿದ ನಂತರ, ಡಿಜಿಟಲ್ ಪಾವತಿ ಕಂಪನಿ ಫೋನ್‌ ಪೇ ಪೋಸ್ಟರ್‌ಗಳಲ್ಲಿ ತನ್ನ ಲೋಗೋ ಬಳಸುವುದಕ್ಕೆ ಆಕ್ಷೇಪಿಸಿದೆ.
ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಡುವಿನ ಪೋಸ್ಟರ್‌ಗಳ ಯುದ್ಧದ ನಡುವೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ ಹಣ ಪಡೆದು ಕೆಲಸ ಮಾಡಿದ್ದಾರೆ ಎಂದು ಆರೋಪಿಸಿ ಅವರ ಪೋಸ್ಟರ್‌ಗಳನ್ನು ರಾಜಧಾನಿ ಭೋಪಾಲದಾದ್ಯಂತ ಕಾಂಗ್ರೆಸ್ ಅಂಟಿಸಿದೆ.
ಚೌಹಾಣ ಅವರ ಮುಖ ಇರುವ ಕ್ಯೂಆರ್ ಕೋಡ್ ಹೊಂದಿರುವ ಪೋಸ್ಟರ್‌ಗಳು 50% ಲಾವೋ, ಫೋನ್‌ಪೇ ಕಾಮ್ ಕರಾವೋ (ನಿಮ್ಮ ಕೆಲಸವನ್ನು ಪೂರ್ಣವಾಗಲು 50% ಕಮಿಷನ್ ಪಾವತಿಸಿ) ಎಂದು ಬರೆಯಲಾಗಿದೆ.
ಸೋಮವಾರ ಪೋಸ್ಟರ್‌ಗಳಿಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ PhonePe, ಪೋಸ್ಟರ್‌ಗಳಿಂದ ಅದರ ಲೋಗೋವನ್ನು ತೆಗೆದುಹಾಕಬೇಕು ಮತ್ತು “ರಾಜಕೀಯ ಅಥವಾ ರಾಜಕೀಯೇತರ ಯಾವುದೇ ಮೂರನೇ ವ್ಯಕ್ತಿಯಿಂದ ತನ್ನ ಬ್ರ್ಯಾಂಡ್ ಲೋಗೋವನ್ನು ಅನಧಿಕೃತವಾಗಿ ಬಳಸುವುದಕ್ಕೆ ತನ್ನ ವಿರೋಧವಿದೆ” ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಉದ್ಯಮಿ, ಬಿಜೆಪಿ ನಾಯಕ ಗೋಪಾಲ ಖೇಮ್ಕಾ ಹತ್ಯೆ ಪ್ರಕರಣ ; ಅವರ ಅಂತ್ಯಕ್ರಿಯೆಗೆ ಹಾರ ಹಿಡಿದುಕೊಂಡು ಬಂದ ಆರೋಪಿ...!

ಲೋಗೋದ ಯಾವುದೇ ಅನಧಿಕೃತವಾಗಿ ಬಳಸಿದರೆ ಬಳಕೆಯು “ಕಾನೂನು ಕ್ರಮ” ಎದುರಿಸಬೇಕಾಗುತ್ತದೆ ಎಂದು ಕಂಪನಿಯು ಹೇಳಿದೆ, ಹಾಗೂ ಫೋನ್‌ಪೇ ಬ್ರಾಂಡ್ ಮತ್ತು ಲೋಗೋ ಹೊಂದಿರುವ ಪೋಸ್ಟರ್‌ಗಳನ್ನು ತೆಗೆದುಹಾಕಲು ಕಾಂಗ್ರೆಸ್ ಪಕ್ಷಕ್ಕೆ ಸೂಚಿಸಿದೆ.

“PhonePe ತನ್ನ ಬ್ರ್ಯಾಂಡ್ ಲೋಗೋವನ್ನು ರಾಜಕೀಯ ಅಥವಾ ರಾಜಕೀಯೇತರ ಯಾವುದೇ ಮೂರನೇ ವ್ಯಕ್ತಿಯಿಂದ ಅನಧಿಕೃತವಾಗಿ ಬಳಸುವುದನ್ನು ವಿರೋಧಿಸುತ್ತದೆ. ನಾವು ಯಾವುದೇ ರಾಜಕೀಯ ಪ್ರಚಾರ ಅಥವಾ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ. PhonePe ಲೋಗೋ ನಮ್ಮ ಕಂಪನಿಯ ನೋಂದಾಯಿತ ಟ್ರೇಡ್‌ಮಾರ್ಕ್ ಆಗಿದೆ. ಬೌದ್ಧಿಕ ಆಸ್ತಿಯ ಅನಧಿಕೃತ ಬಳಕೆ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ನಮ್ಮ ಬ್ರ್ಯಾಂಡ್ ಮತ್ತು ಲೋಗೋ ಇರುವಪೋಸ್ಟರ್‌ಗಳನ್ನು ತೆಗೆದುಹಾಕಲು ಕಾಂಗ್ರೆಸ್‌ ಪಕ್ಷವನ್ನು ವಿನಂತಿಸುತ್ತೇವೆ” ಎಂದು ಕಂಪನಿಯು ಟ್ವೀಟ್ ಮಾಡಿದೆ.
ಮಧ್ಯಪ್ರದೇಶದ ಪೋಸ್ಟರ್ ವಾರ್ ಇತ್ತೀಚೆಗಷ್ಟೇ ಮುಗಿದ ಕರ್ನಾಟಕ ಚುನಾವಣೆ ಜೊತೆ ಸಾಮ್ಯತೆ ಹೊಂದಿದೆ. ದಕ್ಷಿಣ ರಾಜ್ಯದಲ್ಲಿ ಚುನಾವಣೆಗೆ ಮುನ್ನ ಕಾಂಗ್ರೆಸ್ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ‘ಪೇಸಿ ಎಂ’ ಪೋಸ್ಟರ್ ಪ್ರಚಾರ ನಡೆಸಿತ್ತು.

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement