ನಾಳೆಯಿಂದಲೇ ಅನ್ನಭಾಗ್ಯ ಯೋಜನೆ ಜಾರಿ : ಸಚಿವ ಮುನಿಯಪ್ಪ

ಬೆಂಗಳೂರು: ಅನ್ನಭಾಗ್ಯ ಯೋಜನೆ ನಾಳೆಯಿಂದಲೇ ಜಾರಿಯಾಗಲಿದೆ. 5 ಕೆಜಿ ಅಕ್ಕಿ ನೀಡಲಾಗುವುದು, ಉಳಿದ 5 ಕೆಜಿ ಅಕ್ಕಿ ಬದಲಿಗೆ ಜನರ ಬ್ಯಾಂಕ್‌ ಖಾತೆಗೆ ಹಾಕಲು ಹಣ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ (ಜುಲೈ 1)ಯಿಂದಲೇ ಅನ್ನಭಾಗ್ಯ ಯೋಜನೆ ಆರಂಭವಾಗುತ್ತಿದೆ. ಎಲ್ಲ ಪಡಿತರ ಚೀಟಿದಾರರ ಖಾತೆಗೆ ಹಣ ಹೋಗುತ್ತದೆ. ಶೇ.90% ಪಡಿತರದಾರರು ಬ್ಯಾಂಕ್‌ ಖಾತೆ ಹೊಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಕೌಂಟ್ ಇಲ್ಲದವರು ಅಕೌಂಟ್ ಮಾಡಿಸಬೇಕು. ಅಕ್ಕಿ ಸಿಗುವರೆಗೆ ಮಾತ್ರ ಒಬ್ಬರಿಗೆ 170 ರೂಪಾಯಿ ನೀಡಲಾಗುತ್ತದೆ. ಒಂದು ಮನೆಯಲ್ಲಿ 5 ಸದಸ್ಯರು ಇದ್ದರೆ, ಪ್ರತಿ ಕೆಜಿಗೆ 34 ರೂ.ಗಳಂತೆ 25 ಕೆಜಿಗೆ 850 ರೂ. ಸಿಗುತ್ತದೆ. ಅಕ್ಕಿ ಕೊಡುವವರೆಗೆ ಹಣ ನೀಡುವ ವ್ಯವಸ್ಥೆ ಮಾಡಿದ್ದೇವೆ. ಮುಂದೆ ಅಕ್ಕಿ ಸಿಕ್ಕ ಕೂಡಲೇ ಕೊಡುವ ವ್ಯವಸ್ಥೆ ಮಾಡುತ್ತೇವೆ. ರೇಷನ್ ಕಾರ್ಡ್ ಪ್ರಕಾರ ಯಾರು ಮುಖ್ಯಸ್ಥರಿದ್ದಾರೋ ಅವರ ಖಾತೆಗೆ ಹಣ ಹಾಕುತ್ತೇವೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಧಾನ್ಯ ಕೊಡುತ್ತೇವೆ ಎಂದು ಹೇಳಿದ್ದಾರೆ. ಎಂಎಸ್‌ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ, ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ. 8 ಕೆಜಿ ಅಕ್ಕಿ ಕೊಡುತ್ತೇವೆ. .ದಕ್ಷಿಣ ಕರ್ನಾಟಕದವರಿಗೆ ರಾಗಿ ಕೊಡುತ್ತೇವೆ. ಉತ್ತರ ಕರ್ನಾಟಕದಲ್ಲಿ ಜೋಳ ಕೊಡುತ್ತೇವೆ. ರಾಗಿ ದಾಸ್ತಾನು ಇದೆ, ಜೋಳ ದಾಸ್ತಾನು ಇಲ್ಲ. ದಾಸ್ತಾನು ಆದ ಬಳಿಕ ಧಾನ್ಯಗಳ ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಬೆಳಗಾವಿ; ಟಿಕೆಟ್​ ತೋರಿಸು ಎಂದಿದ್ದಕ್ಕೆ ರೈಲಿನಲ್ಲಿ ಟಿಸಿ ಸೇರಿ ಐವರ ಮೇಲೆ ಮುಸುಕುಧಾರಿಯಿಂದ ಹಲ್ಲೆ, ಓರ್ವ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement