ರಾಜ್ಯದ ಟಾಪ್‌-10 ಶ್ರೀಮಂತ ದೇವಸ್ಥಾನಗಳ ಪಟ್ಟಿ ಬಿಡುಗಡೆ : ಈ ಹತ್ತು ದೇವಾಲಯಗಳ ಆದಾಯ ಎಷ್ಟು..? ಖರ್ಚು-ವೆಚ್ಚ ಎಷ್ಟು ?

ಬೆಂಗಳೂರು: ರಾಜ್ಯದ ಶ್ರೀಮಂತ ದೇವಾಲಯಗಳ ಪಟ್ಟಿಯನ್ನು ಮುಜರಾಯಿ ಇಲಾಖೆ ಇಲಾಖೆ ವ್ಯಾಪ್ತಿಗೆ ಸೇರಿದ ಶ್ರೀಮಂತ ದೇವಾಲಯಗಳ ಪಟ್ಟಿ ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಮಣ್ಯ ದೇವಾಲಯ ರಾಜ್ಯದ ಶ್ರೀಮಂತ ದೇವಸ್ಥಾನವಾಗಿ ಈ ಸಲವೂ ಮುಂದುವರಿದಿದೆ. ಕಳೆದ ವರ್ಷವೂ ಈ ದೇಗುಲ ಮೊದಲ ಸ್ಥಾನದಲ್ಲಿತ್ತು.
2022-23ರ ಅವಧಿಯಲ್ಲಿ ದೇವಾಲಯ ಗಳಿಸಿರುವ ಒಟ್ಟು ಆದಾಯ ಮತ್ತು ಒಟ್ಟು ವೆಚ್ಚದ ಪಟ್ಟಿಯನ್ನು ಮುಜರಾಯಿ ಇಲಾಖೆ ಬಿಡುಗಡೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮೊದಲ ಸ್ಥಾನ ಉಳಿಸಿಕೊಂಡಿದೆ. ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನ ಎರಡನೇ ಸ್ಥಾನದಲ್ಲಿದೆ. ಇನ್ನು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಮೂರನೇ ಸ್ಥಾನದಲ್ಲಿದೆ.
ರಾಜ್ಯದ 10 ಶ್ರೀಮಂತ ದೇವಸ್ಥಾನಗಳ ಪಟ್ಟಿ….
ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ 
ಆದಾಯ : 123.64 ಕೋಟಿ ರೂ. – ವೆಚ್ಚ : 63.77 ಕೋಟಿ ರೂ.
ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು
ಆದಾಯ : 59.47 ಕೋಟಿ ರೂ. -ವೆಚ್ಚ: 33.32 ಕೋಟಿ ರೂ.
ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು
ಆದಾಯ: 52.40 ಕೋಟಿ ರೂ.
ವೆಚ್ಚ: 52.40 ಕೋಟಿ ರೂ.
ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನ, ಎಡೆಯೂರು
ಆದಾಯ: 36.48 ಕೋಟಿ ರೂ.
ವೆಚ್ಚ: 35.68 ಕೋಟಿ ರೂ.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಟೀಲು
ಆದಾಯ: 32.10 ಕೋಟಿ ರೂ.
ವೆಚ್ಚ: 25.97 ಕೋಟಿ ರೂ.
ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ, ನಂಜನಗೂಡು
ಆದಾಯ: 26.71 ಕೋಟಿ ರೂ.
ವೆಚ್ಚ: 18. 74 ಕೋಟಿ ರೂ.
ಶ್ರೀ ರೇಣುಕಾ ಎಲ್ಲಮ್ಮ ದೇವಸ್ಥಾನ, ಸವದತ್ತಿ
ಆದಾಯ: 22.52 ಕೋಟಿ ರೂ.
ವೆಚ್ಚ: 11.51 ಕೋಟಿ ರೂ.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮಂದಾರ್ತಿ
ಆದಾಯ: 14.55 ಕೋಟಿ ರೂ.
ವೆಚ್ಚ: 13.02ಕೋಟಿ ರೂ.
ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ದೊಡ್ಡಬಳ್ಳಾಪುರ
ಆದಾಯ: 12.25 ಕೋಟಿ ರೂ.
ವೆಚ್ಚ: 7.40 ಕೋಟಿ ರೂ.
ಶ್ರೀ ಬನಶಂಕರಿ ದೇವಸ್ಥಾನ, ಬೆಂಗಳೂರು
ಆದಾಯ: 10.58 ಕೋಟಿ ರೂ.
ವೆಚ್ಚ: 19.41 ಕೋಟಿ ರೂ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement