ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕದಿದ್ದರೆ ಉಚಿತ ವಿದ್ಯುತ್‌ ಸಿಗಲ್ಲ : ಇಂಧನ ಸಚಿವ ಕೆ.ಜೆ ಜಾರ್ಜ್

ಚಿಕ್ಕಮಗಳೂರು: ಇಂದಿನಿಂದ (ಜುಲೈ 1) ಗೃಹಜ್ಯೋತಿ ಯೋಜನೆ ಜಾರಿಯಾಗಿದೆ. ಏತನ್ಮಧ್ಯೆ ಗೃಹಜ್ಯೋತಿ ಉಚಿತ ವಿದ್ಯುತ್‌ ಯೋಜನೆಗೆ ಅರ್ಜಿ ಹಾಕದಿದ್ದರೆ ಮುಂದಿನ ತಿಂಗಳು ಬಿಲ್ ಬರಲಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.
ಈ ಕುರಿತು ಶನಿವಾರ ಮಾತನಾಡಿದ ಅವರು, ಈ ತಿಂಗಳಿಂದಲೇ ಉಚಿತ ವಿದ್ಯುತ್ ಯೋಜನೆ ಜಾರಿಯಾಗಲಿದೆ. ಆದರೆ ಜೂನ್ ತಿಂಗಳ ಬಿಲ್ ಜುಲೈ ತಿಂಗಳಲ್ಲಿ ಬರಲಿದೆ. ಅದಕ್ಕೆ ವಿದ್ಯುತ್‌ ಪಾವತಿಸಬೇಕಾಗುತ್ತದೆ. ಜುಲೈ ತಿಂಗಳಿಂದ ಉಚಿತ ವಿದ್ಯುತ್‌ ಯೋಜನೆ ಜಾರಿಯಾಗುತ್ತಿದೆ. ಈ ತಿಂಗಳು ಉಚಿತ ವಿದ್ಯುತ್ ಸಿಗಬೇಕೆಂದರೆ ಜುಲೈ 25ರೊಳಗೆ ಅರ್ಜಿ ಸಲ್ಲಿಸಬೇಕು. ಗೃಹಜ್ಯೋತಿ ಯೋಜನೆ  ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಜುಲೈ 25ರ ವರೆಗೂ ಸಮಯವಿದೆ. ಆದರೆ ಅರ್ಜಿ ಹಾಕದಿರುವವರಿಗೆ ಮುಂದಿನ ತಿಂಗಳು ಬಿಲ್ ಬರುತ್ತದೆ ಎಂದರು.ಆದರೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಡೆಡ್‌ಲೈನ್‌ ಘೋಷಿಸಿಲ್ಲ ಎಂದು ತಿಳಿಸಿದರು.
ಗೃಹಜ್ಯೋತಿಗೆ 86.5 ಲಕ್ಷ ಜನರು ಅರ್ಜಿ ಹಾಕಿದ್ದಾರೆ. ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಅರ್ಜಿ ಹಾಕಬೇಕು. ಹೆಚ್ಚಿನ ಜನರು ಅರ್ಜಿ ಹಾಕುತ್ತಿರುವುದರಿಂದ ಸರ್ವರಿನಲ್ಲಿ ಸಮಸ್ಯೆ ಉಂಟಾದರೆ ಕೆಇಬಿಗೆ ಹೋಗಿ ಅರ್ಜಿ ಕೊಡಿ ಎಂದು ಸಚಿವ ಕೆಜೆ ಜಾರ್ಜ್ ತಿಳಿಸಿದರು. ಮೊದಲಿನಂತೆ ಈಗ ಸರ್ವರ್‌ ಸಮಸ್ಯೆಯಿಲ್ಲ. ಒಂದು ವೇಳೆ ಅರ್ಜಿ ಸಲ್ಲಿಸದಿದ್ದರೆ ಉಚಿತ ಕರೆಂಟ್‌ ಸೌಲಭ್ಯ ಸಿಗುವುದಿಲ್ಲ. ಅರ್ಜಿ ಹಾಕಲು ತಡ ಮಾಡಿದರೆ ಸೌಲಭ್ಯ ಸಿಗುವುದು ಕೂಡ ತಡವಾಗಲಿದೆ. ಆದ್ದರಿಂದ ಎಲ್ಲರೂ ಆದಷ್ಟು ಬೇಗ ಅರ್ಜಿ ಹಾಕಿ ಎಂದು ಸಲಹೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಮೇ 13ರಿಂದ ಎರಡ್ಮೂರು ದಿನ ಜೋರು ಮಳೆ ಸಾಧ್ಯತೆ ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement