ಪ್ರವೀಣ​ ನೆಟ್ಟಾರು ಹತ್ಯೆ ಆರೋಪಿಗಳ ಶರಣಾಗತಿಗೆ ಗಡುವು ಮುಕ್ತಾಯ: ಮುಂದಿನ ಕಾರ್ಯಾಚರಣೆಗೆ ಎನ್‌ಐಎ ರೆಡಿ

ಮಂಗಳೂರು: ಬಿಜೆಪಿ ಯುವ ನಾಯಕ ಪ್ರವೀಣ ನೆಟ್ಟಾರು ಭೀಕರವಾಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್.ಐ.ಎ. ಆರೋಪಿಗಳ ಶರಣಾಗತಿಗೆ ನೀಡಿದ್ದ ಗಡುವು ಜೂನ್ 30ರಂದು ಕೊನೆಗೊಂಡಿದೆ. ಮನೆಗೆ ಪೋಸ್ಟರ್, ಮೈಕ್ ನಲ್ಲಿ ಘೋಷಣೆ ಮಾಡಿದರೂ ಆರೋಪಿಗಳು ಕೋರ್ಟಿಗೆ ಹಾಜರಾಗದ ಕಾರಣ ಎನ್.ಐ.ಎ. ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳು ಜೂನ್​ 30ರೊಳಗೆ ಶರಣಾಗಬೇಕು, ಇಲ್ಲವೇ ಆರೋಪಿಗಳ ಮನೆ, ಆಸ್ತಿ ಮುಟ್ಟುಗೋಲು ಹಾಕುವುದಾಗಿ ಸೂಚನೆ ನೀಡಲಾಗಿತ್ತು. ಈ ಬಗ್ಗೆ ನೋಟಿಸ್‌ ಅಂಟಿಸಿ ಧ್ವನಿವರ್ಧಕದ ಮೂಲಕ ಉದ್ಘೋಷಣೆ ಮಾಡಲಾಗಿತ್ತು. ಆದರೆ ಆರೋಪಿಗಳು ಶರಣಾಗಿಲ್ಲ. ಹೀಗಾಗಿ ಆರೋಪಿಗಳ ಹೆಸರಿನಲ್ಲಿರುವ ಆಸ್ತಿಗಳ ಬಗ್ಗೆ ಎನ್‌ಐಎ ಅಧಿಕಾರಿಗಳು ಕಂದಾಯ ಇಲಾಖೆ, ಬ್ಯಾಂಕ್‌ಗಳು ಮತ್ತಿತರ ಕಡೆಗಳಿಂದ ಮಾಹಿತಿ ಸಂಗ್ರಹಿಸಿ, ಆರೋಪಿಗಳ ಹೆಸರಿನಲ್ಲಿರುವ ಆಸ್ತಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ ಈ ಆಸ್ತಿಗಳು ಆರೋಪಿಗಳದ್ದೇ ಎಂದು ದೃಢೀಕರಣಗೊಂಡ ನಂತರ ಮುಟ್ಟುಗೋಲು ಹಾಕಿಕೊಂಡು ಸರ್ಕಾರದ ವಶಕ್ಕೆ ಪಡೆಯಬಹುದಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement