ಹಿಂದಿನ ಬಾಕಿ ಇದ್ದರೂ ದೊರಕಲಿದೆ ಉಚಿತ ವಿದ್ಯುತ್ ಯೋಜನೆಯ ಲಾಭ : ಬೆಸ್ಕಾಂ

ಬೆಂಗಳೂರು : ರಾಜ್ಯದಲ್ಲಿ ಜುಲೈ 1ರಿಂದ 200 ಯುನಿಟ್ ವರೆಗೆ ವಿದ್ಯುತ್ ಉಚಿತ ನೀಡುವ ‘ಗೃಹ ಜ್ಯೋತಿ’ ಯೋಜನೆ ಜಾರಿ ಆಗಿದೆ. ಈ ಯೋಜನೆಗೆ ಗ್ರಾಹಕರು ವಿದ್ಯುತ್ ಬಿಲ್‌ನ ಹಿಂಬಾಕಿ ಉಳಿಸಿಕೊಂಡಿದ್ದರೂ ಅವರಿಗೆ ಸಹ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆ ಎಂದು ಬೆಂಗಳೂರು ವಿದ್ಯುತ್ ಪ್ರಸರಣ ನಿಗಮ (BESCOM) ತಿಳಿಸಿದೆ.
ಹಿಂದಿನ ತಿಂಗಳ ಬಾಕಿ ಇರುವ ವಿದ್ಯುತ್ ಹಿಂಬಾಕಿಯನ್ನು ಗ್ರಾಹಕರು ಸೆಪ್ಟಂಬರ್ 30 ರೊಳಗೆ ಪಾವತಿಸಬೇಕು ಎಂದು ಬೆಸ್ಕಾಂ ತಿಳಿಸಿದೆ. ಅಂದರೆ ಹಿಂದಿನ ವಿದ್ಯುತ್ ಬಿಲ್ ಗಳನ್ನು ಪಾವತಿಸಲು ಮೂರು ತಿಂಗಳ ಕಾಲಾವಾಕಾಶ ಇದೆ.
‘ಗೃಹ ಜ್ಯೋತಿ’ ಯೋಜನೆಗಾಗಿ ಜುಲೈ 25 ರೊಳಗೆ ನೋಂದಾಯಿಸಿಕೊಳ್ಳಬೇಕು. ಆಗ ಆಗಸ್ಟ್ ತಿಂಗಳ ಬಿಲ್‌ನಲ್ಲಿ ಉಚಿತ ವಿದ್ಯುತ್‌ ಯೋಜನೆ ಗೃಹಜ್ಯೋತಿಯ ಪ್ರಯೋಜನ ದೊರಕಲಿದೆ.

ಹಾಗೆಯೇ, ಜುಲೈ 25 ರಿಂದ ಆಗಸ್ಟ್ 25 ರೊಳಗೆ ನೋಂದಾಯಿಸಿಕೊಂಡಲ್ಲಿ, ಸೆಪ್ಟೆಂಬರ್ ತಿಂಗಳ ಬಿಲ್‌’ನಲ್ಲಿ ಯೋಜನೆಯ ಪ್ರಯೋಜನ ದೊರೆಯಲಿದೆ. ಯೋಜನೆ ಜಾರಿಯಾದ ಬಳಿಕ ಬಿಲ್ಲಿಂಗ್ ಅವಧಿ ಪ್ರತಿಯನ್ನು ಪ್ರತಿ ತಿಂಗಳ 25 ನೇ ದಿನಾಂಕದಿಂದ ಮುಂಬರುವ ತಿಂಗಳ 25 ದಿನಾಂಕವರೆಗೆ ಕೌಂಟ್ ಮಾಡಲಾಗುತ್ತದೆ. ಈ ಪ್ರಯೋಜನ ಪಡೆಯಲು ವಿದ್ಯುತ್ ಬಳಕೆಯ ಸರಾಸರಿ 200 ಯೂನಿಟ್ ಮೀರಿರಬಾರದು ಎಂದು ಬೆಸ್ಕಾಂ ತಿಳಿಸಿದೆ.

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

ಗೃಹ ಜ್ಯೋತಿ ಯೋಜನೆಗೆ ಗ್ರಾಹಕರು ಆಗಸ್ಟ್‌ನಲ್ಲಿ ನೋಂದಣಿ ಮಾಡಿಕೊಂಡರೆ ಯೋಜನೆಯ ಪ್ರಯೋಜನವನ್ನು ಅವರು ಸೆಪ್ಟೆಂಬರ್ ತಿಂಗಳಲ್ಲಿ ಉಚಿತ ವಿದ್ಯುತ್ ಪಡೆಯುತ್ತಾರೆ. ಸಾಧ್ಯವಾದಷ್ಟು ಬೇಗವೇ ಜನರು ನೋಂದಣಿ ಪಡೆದುಕೊಳ್ಳುವ ಮೂಲಕ ಯೋಜನೆ ಫಲಾನುಭವಿಗಳಾಗಿ. ಯೋಜನೆಯ ನೋಂದಣಿಗೆ ವಿಳಂಬ ಬೇಡ ಎಂದ ಸಲಹೆ ನೀಡಿದೆ.
ಗೃಹ ಜ್ಯೋತಿ ಯೋಜನೆಯ ಲಾಭ ಪಡೆದುಕೊಳ್ಳಲು https://sevasindhugs.karnataka.gov.in/ ನಲ್ಲಿ ಇಂದೇ ನೋಂದಾಯಿಸಿಕೊಳ್ಳಿ ಎಂದು ಟ್ವೀಟ್ ಮೂಲಕ ಬೆಸ್ಕಾಂ ಹೇಳಿದೆ. ಗೃಹಜ್ಯೋತಿ ಯೋಜನೆಗೆ ಈವರೆಗೆ 92,50,157 ಗ್ರಾಹಕರು ನೋಂದಣಿಸಿಕೊಂಡಿದ್ದಾರೆ. ಜೂನ್‌ 18ರಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭವಾಗಿತ್ತು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement