ಸರ್ಕಾರದ ವರ್ಗಾವಣೆ ದಂಧೆಯ ದಾಖಲೆ ಪೆನ್ ಡ್ರೈವ್ ನಲ್ಲಿದೆ : ಸಮಯ ಬಂದಾಗ ಬಿಡುಗಡೆ ಮಾಡ್ತೇನೆ ; ಮತ್ತೊಂದು ಬಾಂಬ್‌ ಸಿಡಿಸಿದ ಕುಮಾರಸ್ವಾಮಿ

ಬೆಂಗಳೂರು : ರಾಜ್ಯ ಸರ್ಕಾರದ ವರ್ಗಾವಣೆ ದಂಧೆ ದಾಖಲೆ ಇರುವ ಪೆನ್ ಡ್ರೈವ್ ನನ್ನ ಬಳಿ ಇದೆ. ಸಮಯ ಬಂದಾಗ ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಾಂಬ್‌ ಸಿಡಿಸಿದ್ದಾರೆ.
ಈ ಕುರಿತು ಇಂದು, ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ವರ್ಗಾವಣೆ ದಂಧೆ ಮಾಡುತ್ತಿರುವ ಬಗ್ಗೆ ನನ್ನ ಬಳಿ ಸಾಕ್ಷ್ಯ ಇದೆ. ಸಮಯ ಬಂದಾಗ ಪೆನ್ ಡ್ರೈವ್ ನಲ್ಲಿ ಇರುವ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇಂಧನ ಇಲಾಖೆಯಲ್ಲಿ ನಿನ್ನೆ ವರ್ಗಾವಣೆಯಾಗಿದೆ. 10 ಕೋಟಿಗೆ ಅದು ಬಿಕರಿಯಾಗಿದೆ. ಅವರ ಒಂದು ದಿನದ ದಿಡಿಮೆ ೫೦ ಲಕ್ಷ ರೂ. ಎಂದು ಅವರು ಆರೋಪಿಸಿದರು. ತಾಜ್ ವೆಸ್ಟೆಂಡ್ ಹೋಟೆಲ್ ವಾಸ್ತವ್ಯ ಕುರಿತು ಲೇವಡಿ ಮಾಡಿದ್ದ ರಾಜ್ಯ ಕಾಂಗ್ರೆಸ್ ಗೆ ಉತ್ತರ ನೀಡಿದ ಕುಮಾರಸ್ವಾಮಿ, ನಾನೇನು ಕೆಎಸ್ ಟಿ ಟ್ಯಾಕ್ಸ್ ಇಟ್ಟುಕೊಂಡಿಲ್ಲ, ನಾನೇನು ಬೀದಿಯಲ್ಲಿ ಹೋಗುವವನಾ..? 2- 3 ಲಕ್ಷ ಖರ್ಚು ಮಾಡುವ ಯೋಗ್ಯ ನನಗೆ ಇಲ್ಲವೇ..? ನಾನು ಟೆಂಟ್ ನಲ್ಲಿ ಬ್ಲ್ಯೂ ಫಿಲಂ ತೋರಿಸಿ ಬಂದವನಲ್ಲ… ರೌಡಿಗಳಿಗೆ ಎಣ್ಣೆ ಪೂರೈಕೆ ಮಾಡಿ ಮಾಡಿ ಬಂದವನಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಚ್‌.ಡಿ.ಕುಮಾರಸ್ವಾಮಿ ಮೈ ಪರಚಿಕೊಳ್ಳುವುದು ಬೇಡ ಎಂದು ಹೇಳಿದ್ದ ಸಚಿವ ದಿನೇಶ ಗುಂಡೂರಾವ್ ಅವರ ವಿರುದ್ದ ಕಿಡಿಕಾರಿದ ಅವರು ನಾನೇಕೆ ಮೈ ಪರಚಿಕೊಳ್ಳಲಿ, ಮೈ ಪರಚಿಕೊಳ್ಳಬೇಕಾದದ್ದು ಅವರು ಎಂದರು.

ಪ್ರಮುಖ ಸುದ್ದಿ :-   ಬೆಂಗಳೂರಿನ ಸ್ಫೋಟ ಪ್ರಕರಣ ಭೇದಿಸಿದ ಪೊಲೀಸರು: ವೈಯಕ್ತಿಕ ದ್ವೇಷವೇ ಕೃತ್ಯಕ್ಕೆ ಕಾರಣ ; ಮೂವರ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement