ಬಜೆಟ್ ಮಂಡನೆ ವೇಳೆ ಸದನಕ್ಕೆ ಬಂದು ಶಾಸಕರ ಸೀಟಿನಲ್ಲಿ 15 ನಿಮಿಷ ಕುಳಿತಿದ್ದ ಅನಾಮಿಕ : ಭದ್ರತಾ ಲೋಪ..?

ಬೆಂಗಳೂರು : ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ಮಾಡುವಾಗ ಶಾಸಕರಲ್ಲದೇ ಇದ್ದರೂ ಓರ್ವ ಅನಾಮಿಕ ವ್ಯಕ್ತಿ ಸದನದಲ್ಲಿ ಬಂದು ಕುಳಿತಿದ್ದ ಪ್ರಸಂಗ ವರದಿಯಾಗಿದೆ.
ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ಸುಮಾರು 15 ನಿಮಿಷಗಳ ಕಾಲ ಈ ಅನಾಮಿಕ ವ್ಯಕ್ತಿ ದೇವದುರ್ಗ‌ ಕ್ಷೇತ್ರದ ಜೆಡಿಎಸ್ ಶಾಸಕಿ ಕರಿಯಮ್ಮ ಆಸನದಲ್ಲಿ ಕುಳಿತಿದ್ದ. ಅವರ ಆಸನದಲ್ಲಿ ಕೆಲಹೊತ್ತು ಕುಳಿತ ಈ ವ್ಯಕ್ತಿ ಕುಳಿತು ಬಳಿಕ ಆಸನ ಬಿಟ್ಟು ತೆರಳಿದ್ದಾನೆ.
ಇದನ್ನು ಗಮನಿಸಿದ ಜೆಡಿಎಸ್​ ಶಾಸಕ ಶರಣಗೌಡ ಕಂದಕೂರು ಅವರಿಗೆ ವ್ಯಕ್ತಿ ಬಗ್ಗೆ ಅನುಮಾನ ಬಂದಿದೆ. ಪ್ರಶ್ನಿಸಿದಾಗ ನಾನು ಮೊಳಕಾಲ್ಮೂರು ಶಾಸಕ ಎಂದು ಅನಾಮಿಕ ಹೇಳಿದ್ದಾನೆ. ಅಲ್ಲದೇ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಬಳಿ ತೆರಳಿ ಶೇಕ್​ ಹ್ಯಾಂಡ್​ ಕೂಡ ಮಾಡಿದ್ದಾನೆ
ಶಾಸಕ ಶರುಣುಗೌಡ ಕಂದಕೂರು ಪಕ್ಕದಲ್ಲಿದ್ದ ಜಿ ಟಿ ದೇವೇಗೌಡ ಅವರ ಬಳಿ ಕೇಳಿದ್ದಾರೆ. ಅವರು ತನಗೆ ಯಾರೆಂದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಅವರು ಸುಮಾರು ಹದಿನೈದು ನಿಮಿಷಗಳ ಕಾಲ ಸದನದಲ್ಲಿ ಕುಳಿತಿದ್ದ. ಶರಣುಗೌಡ ಕಂದಕೂರು ಅವರು ಮಾರ್ಷಲ್ಸ್ ಗಮನಕ್ಕೆ ತಂದಿದ್ದಾರೆ, ಈ ಬಗ್ಗೆ ಸ್ಪೀಕರ್ ಗಮನಕ್ಕೆ ನಾನು ತಂದಿದ್ದಾರೆ. ಇಷ್ಟೊಂದು ಭದ್ರತೆ ನಡುವೆಯೂ ಅನಾಮಿಕ ವ್ಯಕ್ತಿ ಸದನದೊಳಗೆ ಪ್ರವೇಶಿಸಿದ್ದ ಹೇಗೆ ಎಂಬೆಲ್ಲ ಪ್ರಶ್ನೆಗಳು ಉದ್ಭವಿಸಿವೆ.
ಸದ್ಯ ಈ ವ್ಯಕ್ತಿಯನ್ನು ವಿಧಾನಸೌಧದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರಮುಖ ಸುದ್ದಿ :-   ಪ್ರಧಾನಿಯವರು ಪತ್ರಿಕಾಗೋಷ್ಠಿಗಳನ್ನು ಏಕೆ ನಡೆಸುವುದಿಲ್ಲ? : ಹೆಚ್ಚು ಸಲ ಕೇಳಿದ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ನರೇಂದ್ರ ಮೋದಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement