ಮಂಗಳೂರಿನ ಶಮಾ ವಾಜಿದಗೆ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ನ್ಯಾಶನಲ್ ಯೂನಿವರ್ಸ್ ಪ್ರಶಸ್ತಿ

ಮಂಗಳೂರು: ಮಂಗಳೂರಿನ ಶಮಾ ವಾಜಿದ್ ಅವರು ಪ್ರತಿಷ್ಠಿತ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್‌ನ್ಯಾಶನಲ್ ಯೂನಿವರ್ಸ್ -2023 ಪ್ರಶಸ್ತಿ ಗೆದ್ದಿದ್ದಾರೆ ಹಾಗೂ ಗ್ಲೋಬಲ್ ಮಿಸೆಸ್ ಯೂನಿವರ್ಸ್ ಸ್ಪರ್ಧೆಗೆ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ನವದೆಹಲಿಯಲ್ಲಿ ಗ್ಲೋಬಲ್ ಇಂಡಿಯಾ ಎಂಟರ್‌ಟೈನ್‌ಮೆಂಟ್‌ ಪ್ರೊಡಕ್ಷನ್ಸ್ ನಡೆಸಿದ ಸ್ಪರ್ಧೆಯಲ್ಲಿ ಮಂಗಳೂರಿನ ಶಮಾ ವಾಜಿದ್ ಈ ಪ್ರಶಸ್ತಿ ಗೆದ್ದಿದ್ದಾರೆ. ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸ್ 2023 ಕಿರೀಟ ಮುಡಿಗೇರಿಸಿದ ಶಮಾ ವಾಜಿದ್ ಗೆ 13 ತಿಂಗಳ ಗಂಡು ಮಗು ಇದೆ. ಈ ಸ್ಪರ್ಧೆಯು ವಿವಾಹಿತ ಮಹಿಳೆಯರಿಗೆ ಮಾತ್ರ ಇದೆ. ಸ್ಪರ್ಧೆಯ ಆಡಿಷನ್‌ಗಳು ದೇಶದ 22 ಕ್ಕೂ ಹೆಚ್ಚು ರಾಜ್ಯಗಳಲ್ಲಿ ನಡೆದಿದ್ದವು. ಶಮಾ ವಾಜಿದ್ ನವದೆಹಲಿಯಲ್ಲಿ ನಡೆದ ಗ್ರಾಂಡ್ ಫಿನಾಲೆಗೆ ತಲುಪಿದ ಟಾಪ್ 40 ರಲ್ಲಿ ಒಬ್ಬರಾಗಿದ್ದರು. ಎಲ್ಲಾ ಅಂತಿಮ ಸ್ಪರ್ಧಿಗಳಿಗೆ 5 ದಿನಗಳ ಕಾಲ ಮಾರ್ಗದರ್ಶಕರು ಕ್ಯಾಟ್‌ವಾಕ್, ಗ್ರೂಮಿಂಗ್, ಕೊರಿಯೋಗ್ರಫಿ, ಇಮೇಜ್ ಕನ್ಸಲ್ಟಿಂಗ್, ಆತಂಕ ನಿರ್ವಹಣೆ, ದೈಹಿಕ ಫಿಟ್‌ನೆಸ್ ಇತ್ಯಾದಿಗಳ ಉತ್ತಮ ಅಂಶಗಳಲ್ಲಿ ಅವರಿಗೆ ತರಬೇತಿ ನೀಡಿದ್ದರು.
ಕರ್ನಾಟಕವನ್ನು ಪ್ರತಿನಿಧಿಸಿದ ಶಾಮಾ ವಾಜಿದ್ ಅವರು ಫೂಲ್ ರೌಂಡ್, ಎತ್ನಿಕ್ ರೌಂಡ್, ಟ್ಯಾಲೆಂಟ್ ರೌಂಡ್ ಮತ್ತು ಫಾರ್ಮಲ್ ಸುತ್ತುಗಳಂತಹ ವಿವಿಧ ಸುತ್ತುಗಳಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ನಂತರ ಅಗ್ರ 10 ಫೈನಲಿಸ್ಟ್ ಗಳಲ್ಲಿ ಸ್ಥಾನ ಪಡೆದರು ಮತ್ತು ಅಂತಿಮವಾಗಿ ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸ್ 2023 ರ ಕಿರೀಟವನ್ನು ಬಾಲಿವುಡ್ ಸೆಲೆಬ್ರಿಟಿ ಮಲೈಕಾ ಅರೋರಾ ಅವರಿಂದ ಸ್ವೀಕರಿಸಿದರು.
ಮಾಜಿ ಮಿಸೆಸ್ ಇಂಡಿಯಾ 2001ರ ಅದಿತಿ ಗೋವಿತ್ರಿಕ‌ರ ಸೇರಿದಂತೆ ಲೋಕೇಶ್ ಶರ್ಮಾ, ಕೀರ್ತಿ ಮಿಶ್ರಾ ನಾರಂಗ್, ಮನೀಶಾ ಸಿಂಗ್, ರೋಹಿತ್ ಜೆ ಕೆ ಸೇರಿದಂತೆ ಅನೇಕರು ತೀರ್ಪುಗಾರರಾಗಿದ್ದರು.
ಗ್ಲೋಬಲ್ ಮಿಸೆಸ್ ಇಂಡಿಯಾ ಇಂಟರ್ನ್ಯಾಷನಲ್ ಯೂನಿವರ್ಸ್ 2023 ಕಿರೀಟವನ್ನು ಮುಡಿಗೇರಿಸಿದ ಶಮಾ ವಾಜಿದ್ 2024 ರಲ್ಲಿ ಗ್ಲೋಬಲ್ ಮಿಸೆಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಪ್ರಮುಖ ಸುದ್ದಿ :-   ಬೆಳಗಾವಿ; ಟಿಕೆಟ್​ ತೋರಿಸು ಎಂದಿದ್ದಕ್ಕೆ ರೈಲಿನಲ್ಲಿ ಟಿಸಿ ಸೇರಿ ಐವರ ಮೇಲೆ ಮುಸುಕುಧಾರಿಯಿಂದ ಹಲ್ಲೆ, ಓರ್ವ ಸಾವು

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement