ರೂಪಾಯಿಯಲ್ಲಿ ವ್ಯಾಪಾರ, ಅಬುಧಾಬಿಯಲ್ಲಿ ಐಐಟಿ ಕ್ಯಾಂಪಸ್ : ಯುಎಇಗೆ ಪ್ರಧಾನಿ ಮೋದಿ ‘ಉತ್ಪಾದಕ’ ಭೇಟಿ

ನವದೆಹಲಿ: ಒಂದು ದಿನದ ಭೇಟಿಗಾಗಿ ಶನಿವಾರ ಅಬುಧಾಬಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಭೇಟಿಯಾದರು. ಬಹುಮುಖಿ ದ್ವಿಪಕ್ಷೀಯ ಬಾಂಧವ್ಯವನ್ನು ಗಾಢಗೊಳಿಸುವ ಉದ್ದೇಶದಿಂದ ಉಭಯ ನಾಯಕರು ಸಮಗ್ರವಾಗಿ ಮಾತುಕತೆ ನಡೆಸಿದರು ಮತ್ತು ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರ-ವ್ಯವಹಾರ ಪ್ರಾರಂಭಿಸಲು, ಭಾರತ ಮತ್ತು ಯುಎಇಯ ತ್ವರಿತ ಪಾವತಿ ವ್ಯವಸ್ಥೆಗಳನ್ನು (Fast payment systems) ಜೋಡಣೆ ಮಾಡಲು ಮತ್ತು ಗಲ್ಫ್ ದೇಶದಲ್ಲಿ ಐಐಟಿ (IIT)-ದೆಹಲಿ ಕ್ಯಾಂಪಸ್ ತೆರೆಯಲು ಒಪ್ಪಿಕೊಂಡರು.
ಮಾತುಕತೆಯ ನಂತರ, ಪ್ರಧಾನಿ ಮೋದಿ ಅವರು “ಉತ್ಪಾದಕ ಯುಎಇ ಭೇಟಿಯನ್ನು ಮುಕ್ತಾಯಗೊಳಿಸುತ್ತಿದ್ದೇವೆ. ಜಾಗತಿಕವಾಗಿ ಉತ್ತಮಗೊಳಿಸುವ ಗುರಿಯನ್ನು ಹೊಂದಿರುವ ಹಲವಾರು ವಿಷಯಗಳಲ್ಲಿ ಎರಡು ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಉತ್ತಮ ಆತಿಥ್ಯಕ್ಕಾಗಿ ನಾನು ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್‌ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ.
ಭಾರತವು ಯುಎಇಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ, ಅದು ಡಾಲರ್ ಬದಲಿಗೆ ರೂಪಾಯಿಗಳಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡುತ್ತದೆ. ಡಾಲರ್ ವ್ಯವಹಾರವನ್ನು ತೆಗೆದುಹಾಕುವ ಮೂಲಕ ವಹಿವಾಟು ವೆಚ್ಚವನ್ನು ಕಡಿತಗೊಳಿಸುವ ಭಾರತದ ಪ್ರಯತ್ನಗಳನ್ನು ಇದು ಉತ್ತೇಜಿಸುತ್ತದೆ. ಸುಲಭವಾಗಿ ಗಡಿಯಾಚೆಗಿನ ಹಣ ವರ್ಗಾವಣೆಗೆ ಅನುಕೂಲವಾಗುವಂತೆ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (UPI) ಮತ್ತು ಯುಎಇಯ ತ್ವರಿತ ಪಾವತಿ ವೇದಿಕೆ (IPP) ಅನ್ನು ಲಿಂಕ್ ಮಾಡಲು ಎರಡೂ ದೇಶಗಳು ಒಪ್ಪಿಕೊಂಡಿವೆ.

ಪ್ರಮುಖ ಸುದ್ದಿ :-   ವೀಡಿಯೊ..| ಬಾಲಕರ ಹುಚ್ಚಾಟ : ರೀಲ್‌ ಸ್ಟಂಟ್‌ ಮಾಡಲು ವೇಗವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಮಲಗಿದ ಬಾಲಕ : ಮೂವರು ಅಪ್ರಾಪ್ತರ ಬಂಧನ

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಎರಡು ಒಪ್ಪಂದಗಳು “ತಡೆಯಿಲ್ಲದ ಗಡಿಯಾಚೆಗಿನ ವಹಿವಾಟುಗಳು ಮತ್ತು ಪಾವತಿಗಳನ್ನು ಸಕ್ರಿಯಗೊಳಿಸುತ್ತದೆ ಮತ್ತು ಹೆಚ್ಚಿನ ಆರ್ಥಿಕ ಸಹಕಾರವನ್ನು ಉತ್ತೇಜಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಅಧಿಕೃತ ಭೇಟಿಯಲ್ಲಿ ಗಲ್ಫ್ ದೇಶದಲ್ಲಿ ಐಐಟಿ ದೆಹಲಿ ಕ್ಯಾಂಪಸ್ ಸ್ಥಾಪಿಸಲು ಉಭಯ ರಾಷ್ಟ್ರಗಳ ಶಿಕ್ಷಣ ಸಚಿವಾಲಯಗಳು ಶನಿವಾರ ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿ ಹಾಕಿದವು.
ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಅಬುಧಾಬಿಯಲ್ಲಿ ಐಐಟಿ ದೆಹಲಿ ಕ್ಯಾಂಪಸ್ ಸ್ಥಾಪನೆಗೆ ತಿಳುವಳಿಕೆ ಪತ್ರ (ಎಂಒಯು) ಭಾರತದ ಶಿಕ್ಷಣದ ಅಂತಾರಾಷ್ಟ್ರೀಯೀಕರಣದಲ್ಲಿ ಹೊಸ ಅಧ್ಯಾಯ ತೆರೆದಿಡುತ್ತದೆ” ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ಸಿಒಪಿ 28 ರ ನಿಯೋಜಿತ ಅಧ್ಯಕ್ಷ ಸುಲ್ತಾನ್ ಬಿನ್ ಅಹ್ಮದ್ ಅಲ್ ಜಾಬರ್ ಅವರನ್ನು ಶನಿವಾರ ಭೇಟಿ ಮಾಡಿದರು ಮತ್ತು ಗಲ್ಫ್ ರಾಷ್ಟ್ರಕ್ಕೆ ಅಧ್ಯಕ್ಷ ಸ್ಥಾನಕ್ಕೆ ಭಾರತದ ಸಂಪೂರ್ಣ ಬೆಂಬಲದ ಭರವಸೆ ನೀಡಿದರು. ಪ್ರಧಾನಿ ಮೋದಿ ಅವರು ಸುಲ್ತಾನ್ ಬಿನ್ ಅಹ್ಮದ್ ಅಲ್ ಜಾಬರ್ ಅವರೊಂದಿಗೆ ಸುಸ್ಥಿರ ಅಭಿವೃದ್ಧಿ ಮತ್ತು ದ್ವಿಪಕ್ಷೀಯ ಇಂಧನ ಸಹಕಾರದ ಮಾರ್ಗಗಳ ಕುರಿತು ಮಾತುಕತೆ ನಡೆಸಿದರು.
ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗಿನ ಸಭೆಯ ನಂತರ ಪ್ರಧಾನಿ ಮೋದಿ, ಕಳೆದ ವರ್ಷ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಭಾರತ-ಯುಎಇ ವ್ಯಾಪಾರವು ಶೇಕಡಾ 20 ರಷ್ಟು ಏರಿಕೆ ಕಂಡಿದೆ ಎಂದು ಹೇಳಿದ್ದಾರೆ.
ಅಧ್ಯಕ್ಷೀಯ ಭವನವಾದ ಖಾಸರ್-ಅಲ್-ವತಾನ್‌ನಲ್ಲಿ ಪ್ರಧಾನಿ ಮೋದಿಯವರಿಗೆ ವಿಧ್ಯುಕ್ತ ಸ್ವಾಗತವನ್ನು ನೀಡಲಾಯಿತು – ಅಲ್ಲಿ ಅವರನ್ನು ಯುಎಇ ಅಧ್ಯಕ್ಷರು ಸ್ವಾಗತಿಸಿದರು. ಯುಎಇ ಅಧ್ಯಕ್ಷರು ಪ್ರಧಾನಿ ನರೇಂದ್ರ ಮೋದಿಯವರ ಗೌರವಾರ್ಥ ಆಯೋಜಿಸಿದ್ದ ಔತಣಕೂಟದಲ್ಲಿ ಸಂಪೂರ್ಣ ಸಸ್ಯಾಹಾರಿ ಊಟವನ್ನು ನೀಡಿದರು.

ಪ್ರಮುಖ ಸುದ್ದಿ :-   ಕುಟುಂಬದಲ್ಲಿ ದುರಂತ ; ಪಾಪ ಪ್ರಜ್ಞೆಯಿಂದ ನರಳಿ ಪೊಲೀಸ್‌ ಠಾಣೆಗೆ ಬಂದು 39 ವರ್ಷಗಳ ಹಿಂದೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ ವ್ಯಕ್ತಿ....!

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement