ಚಿತ್ರದುರ್ಗ: ನವಜಾತ ಶಿಶುವಿನ ಮೇಲೆ ಕೋತಿ ದಾಳಿ

ಚಿತ್ರದುರ್ಗ: ಮನೆಯಲ್ಲಿ ಮಲಗಿದ್ದ ನವಜಾತ ಶಿಶುವಿನ ಮೇಲೆ ಕೋತಿಯೊಂದು ದಾಳಿ ನಡೆಸಿ ಗಾಯಗೊಳಿಸಿದ ಆಘಾತಕಾರಿ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ನಡೆದಿದೆ.
ಜಿಲ್ಲೆಯ ಚಳ್ಳಕೆರೆ ತಾಲೂಕಿನ ತೊರೆಕೋಲಮ್ಮನಹಳ್ಳಿ ಗ್ರಾಮದ ಮಂಜುಳಾ ಹಾಗೂ ಸಿದ್ದೇಶ ದಂಪತಿಯ 13 ದಿನದ ಹೆಣ್ಣು ಮಗುವನ್ನು ಮನೆಯಲ್ಲಿ ಮಲಗಿಸಿದ್ದ ವೇಳೆ ಕೋತಿ ಏಕಾಏಕಿ ಮನೆಗೆ ನುಗ್ಗಿ ದಾಳಿ ನಡೆಸಿದ್ದು, ಮಗುವಿನ ಹಣೆ, ತಲೆ ಭಾಗಕ್ಕೆ ಗಾಯವಾಗಿದೆ. ಗಾಯಗೊಂಡ ಮಗುವನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕೋತಿ ಮನೆಗೆ ನುಗ್ಗುತ್ತಿದ್ದಂತೆ ಶಿಶುವಿನ ತಾಯಿ ಮಂಜುಳ ಗಾಬರಿಗೊಂಡು ಕೂಗಿದಾಗ ಅಕ್ಕ ಪಕ್ಕದ ಮನೆಯವರು ನೆರವಿಗೆ ಬಂದಿದ್ದಾರೆ. ಕೂಡಲೇ ಗಾಬರಿಗೊಂಡು ಕೋತಿ ಅಲ್ಲಿಂದ ಪರಾರಿಯಾಗಿದೆ. ಕೋತಿಯನ್ನು ಹಿಡಿಯಲು ಪ್ರಯತ್ನಿಸಿದರೂ ಅದು ಸಿಕ್ಕಿಲ್ಲ.
ಕಳೆದ ಒಂದು ವಾರದಿಂದ ಗ್ರಾಮದಲ್ಲಿ ಕೋತಿ ಹಾವಳಿ ಹೆಚ್ಚಾಗಿದ್ದು, ಗ್ರಾಮದ ಜನರು ಆತಂಕಕ್ಕೀಡಾಗಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement