ಇಂದಿನಿಂದ ದೆಹಲಿ-ಇತರ ನಗರಗಳಲ್ಲಿ ಕೆಜಿಗೆ 80 ರೂ.ನಂತೆ ಟೊಮೆಟೊ ಮಾರಾಟ : ಕೇಂದ್ರ ಸರ್ಕಾರ

ನವದೆಹಲಿ: ಟೊಮ್ಯಾಟೊ ಬೆಲೆಗಳು ಗಗನಕ್ಕೇರುತ್ತಿರುವ ಮಧ್ಯೆ, ಕೇಂದ್ರ ಸರ್ಕಾರವು ಭಾನುವಾರ ದೆಹಲಿ-ಎನ್‌ಸಿಆರ್ ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿನ ಇತರ ಸ್ಥಳಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಟೊಮೆಟೊಗಳ 80 ರೂ.ಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿದೆ. ದೇಶದ 500ಕ್ಕೂ ಹೆಚ್ಚು ಅಧಿಕ ಕಡೆಗಳಲ್ಲಿ ಪರಿಸ್ಥಿತಿಯ ಮರು ಮೌಲ್ಯಮಾಪನದ ನಂತರ ಟೊಮೆಟೊ ಬೆಲೆಯನ್ನು ಕಡಿಮೆ ಮಾಡುವ ನಿರ್ಧಾರಕ್ಕೆ ಬಂದಿತು.
ಗ್ರಾಹಕರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರವು ಭಾನುವಾರದಿಂದ ರಾಷ್ಟ್ರ ರಾಜಧಾನಿ ಮತ್ತು ಇತರ ಕೆಲವು ನಗರಗಳಲ್ಲಿನ ಚಿಲ್ಲರೆ ಮಾರುಕಟ್ಟೆಗಳಲ್ಲಿ ರಿಯಾಯಿತಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ.
“ದೇಶದ ಹಲವಾರು ಸ್ಥಳಗಳಲ್ಲಿ ಬೆಲೆಗಳು ಅಸಾಧಾರಣವಾಗಿ ಹೆಚ್ಚಾಗಿರುವ ಕಾರಣ ಪ್ರತಿ ಕೆಜಿಗೆ 90 ರೂಪಾಯಿಗಳ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಸರ್ಕಾರದ ಮಧ್ಯಸ್ಥಿಕೆ ವಹಿಸಿದ್ದರಿಂದ ಟೊಮೆಟೊಗಳ ಸಗಟು ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ” ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಎಂದರು.
ದೆಹಲಿ, ನೋಯ್ಡಾ, ಲಕ್ನೋ, ಕಾನ್ಪುರ, ವಾರಾಣಸಿ, ಪಾಟ್ನಾ, ಮುಜಾಫರ್‌ಪುರ ಮತ್ತು ಅರಾಹ್‌ನಲ್ಲಿ ರಾಷ್ಟ್ರೀಯ ಮಟ್ಟದ ರೈತರ ಸಹಕಾರ ಮಾರುಕಟ್ಟೆ ಸಂಸ್ಥೆ (NAFED) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕ ಒಕ್ಕೂಟ (NCCF) ಮೂಲಕ ಟೊಮೆಟೊ ಮಾರಾಟ ಇಂದು, ಭಾನುವಾರ ಪ್ರಾರಂಭವಾಯಿತು.
“ದೇಶದಲ್ಲಿ 500 ಪ್ಲಸ್ ಕಡೆಗಳಲ್ಲಿ ಪರಿಸ್ಥಿತಿಯ ಮರು ಮೌಲ್ಯಮಾಪನದ ನಂತರ, ಇಂದಿನಿಂದ (ಜುಲೈ 16) ಕೆಜಿಗೆ 80 ರೂಪಾಯಿಗಳಿಗೆ (80) ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇಂದು ಹಲವಾರು ಪಾಯಿಂಟ್‌ಗಳಲ್ಲಿ ಮಾರಾಟ ಪ್ರಾರಂಭವಾಗಿದೆ. ದೆಹಲಿ, ನೋಯ್ಡಾ, ಲಕ್ನೋ, ಕಾನ್ಪುರ್, ವಾರಣಾಸಿ, ಪಾಟ್ನಾ, ಮುಜಾಫರ್‌ಪುರ ಮತ್ತು ಅರ್ರಾಹ್ ನಗರಗಳಲ್ಲಿ NAFED ಮತ್ತು NCCF ಮೂಲಕ ಆರಂಭಿಸಲಾಗಿದೆ. ನಾಳೆಯಿಂದ ಹೆಚ್ಚಿನ ನಗರಗಳಿಗೆ ಅಂತಹ ಸ್ಥಳಗಳಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳನ್ನು ಅವಲಂಬಿಸಿ ವಿಸ್ತರಿಸಲಾಗುವುದು ಎಂದು ಸರ್ಕಾರದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಟೊಮೆಟೊ ಬೆಲೆಯಲ್ಲಿನ ತೀವ್ರ ಏರಿಕೆಯು ದೇಶಾದ್ಯಂತ ಲಕ್ಷಾಂತರ ಕುಟುಂಬಗಳ ಮೇಲೆ ತೀವ್ರ ಪ್ರಭಾವವನ್ನು ಬೀರಿದೆ. ಮಾನ್ಸೂನ್ ಮಳೆ ಮತ್ತು ಹಿಂಗಾರು ಹಂಗಾಮಿನ ಕಾರಣ ಚಿಲ್ಲರೆ ಮಾರುಕಟ್ಟೆಗಳಲ್ಲಿ ಶನಿವಾರದಂದು ಪ್ರಮುಖ ನಗರಗಳಾದ್ಯಂತ ಟೊಮೆಟೊ ಬೆಲೆಗಳು ಕಿಲೋಗ್ರಾಂಗೆ 250 ರೂ.ಗಳಿಗೆ ಏರಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಅಖಿಲ ಭಾರತ ಸರಾಸರಿ ಬೆಲೆ ಪ್ರತಿ ಕೆಜಿಗೆ ಸುಮಾರು 117 ರೂ.ಗಳು.
ಚಿಲ್ಲರೆ ಗ್ರಾಹಕರಿಗೆ ಪರಿಹಾರ ನೀಡಲು, ದೆಹಲಿ-ಎನ್‌ಸಿಆರ್, ಪಾಟ್ನಾ ಮತ್ತು ಲಕ್ನೋದಂತಹ ಆಯ್ದ ನಗರಗಳಲ್ಲಿ ಕೇಂದ್ರವು ಪ್ರತಿ ಕೆಜಿಗೆ 80 ರೂ.ಗೆ ರಿಯಾಯಿತಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡುತ್ತಿದೆ. ಮೊಬೈಲ್ ವ್ಯಾನ್‌ಗಳ ಮೂಲಕ ಶನಿವಾರ ದೆಹಲಿ-ಎನ್‌ಸಿಆರ್‌ನಲ್ಲಿ ಸುಮಾರು 18,000 ಕೆಜಿ ಮಾರಾಟವಾಗಿದೆ.
ದೆಹಲಿ ಮತ್ತು ನೋಯ್ಡಾದ ವಿವಿಧ ಭಾಗಗಳ ಜೊತೆಗೆ, ಇಂದು, ಭಾನುವಾರ ಲಕ್ನೋ, ಪಾಟ್ನಾ ಮತ್ತು ಮುಜಾಫರ್‌ಪುರದಲ್ಲಿ ರಿಯಾಯಿತಿ ದರದಲ್ಲಿ ಟೊಮ್ಯಾಟೊ ಮಾರಾಟ ಪ್ರಾರಂಭವಾಯಿತು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ದೆಹಲಿ-ಎನ್‌ಸಿಆರ್‌ನಾದ್ಯಂತ ಸುಮಾರು 18,000 ಕೆಜಿ ಟೊಮೆಟೊವನ್ನು ಚಿಲ್ಲರೆ ಗ್ರಾಹಕರಿಗೆ ಮಾರಾಟ ಮಾಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ವಾಟ್ಸಾಪ್ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement