ಇದು ʼತಮಾಷೆʼ ಮಾಡುವ ವಿಷಯವಲ್ಲ..: ‘ತಮಾಷೆಗಾಗಿ’ ಶಾಲೆಯಲ್ಲಿ ಬಾಲಕಿಯರಿಗೆ ವಿದ್ಯುತ್‌ ಶಾಕ್‌ ; ಇಬ್ಬರು ಎಲೆಕ್ಟ್ರಿಷಿಯನ್‌ಗಳ ಬಂಧನ…!

ಅಮರಾವತಿ : ಆಂಧ್ರಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹುಡುಗಾಟ ಮಾಡಲು ಹೋಗಿ ಅದು ವಿದ್ಯಾರ್ಥಿನಿಯರ ಜೀವಕ್ಕೇ ಆಪತ್ತು ತಂದೊಡ್ಡುವಂತಹ ಸನ್ನಿವೇಶ ನಿರ್ಮಾಣವಾದ ಕಾರಣಕ್ಕೆ ವಿಜಯವಾಡದಲ್ಲಿ ಇಬ್ಬರು ಎಲೆಕ್ಟ್ರಿಷಿಯನ್‌ಗಳನ್ನು ಬಂಧಿಸಲಾಗಿದೆ.
ಬೆಂಚ್‌ ಮೇಲೆ ಕುಳಿತಾಕ್ಷಣ ವಿದ್ಯಾರ್ಥಿನಿಯರಿಗೆ ವಿದ್ಯುತ್‌ ಶಾಕ್‌ ಹೊಡೆಯುವ ನಿಗೂಢವನ್ನು ಬಯಲೆಗಳೆಯಲು ಪೊಲೀಸರೇ ಬರಬೇಕಾಯಿತು.
ಆಂಧ್ರಪ್ರದೇಶದ ಈಡುಪುಗಲ್ಲು ಗ್ರಾಮದ ಜಿಲ್ಲಾ ಪರಿಷತ್‌ ಶಾಲೆಯಲ್ಲಿ ಈ ಘಟನೆ ನಡೆದಿದೆ. ತರಗತಿಯ ಕೊಠಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಬೆಂಚ್‌ ಮೇಲೆ ಕುಳಿತ ತಕ್ಷಣ ಪದೇ ಪದೇ ವಿದ್ಯುತ್‌ ಶಾಕ್‌ ಹೊಡೆಯುತ್ತಿತ್ತು. ಬೆಂಚ್‌ ಮೇಲೆ ಕುಳಿತಾಕ್ಷಣ ವಿದ್ಯುತ್‌ ಶಾಕ್‌ ಹೊಡೆದ ನಡೆದ ಘಟನೆ ವೇಳೆ ಬಳಿಕ ಓರ್ವ ಬಾಲಕಿ ಪ್ರಜ್ಞೆ ತಪ್ಪಿ, ಇನ್ನಿಬ್ಬರು ಅಸ್ವಸ್ಥಗೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ. ಇದು ಪಾಲಕರ ಆಕ್ರೋಶಕ್ಕೂ ಕಾರಣವಾಯಿತು.
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಟೀಲ್‌ ಬೆಂಚ್‌ ಅಳವಡಿಸಲಾಗಿದೆ. ಕೆಲ ವಿದ್ಯಾರ್ಥಿನಿಯರು ಬೆಂಚ್‌ ಮೇಲೆ ಕುಳಿತ ಕೂಡಲೇ ಅವರಿಗೆ ಎಲೆಕ್ಟ್ರಿಕ್‌ ಶಾಕ್‌ ಹೊಡೆಯುತ್ತಿತ್ತು. ಎಲೆಕ್ಟ್ರಿಕ್‌ ಶಾಕ್‌ನಿಂದ ನಂತರ ಶಾಲೆಯ ಆವರಣದಲ್ಲಿಯೇ ಬಾಲಕಿಯೊಬ್ಬಳು ಕುಸಿದು ಬಿದ್ದಿದ್ದಾಳೆ. ಒಬ್ಬಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಕಾರಣ ಮಾತ್ರ ನಿಗೂಢವಾಗಿತ್ತು. ಹೀಗಾಗಿ ಬಾಲಕಿಯರು ಈ ವಿಚಾರವನ್ನು ಮನೆಯಲ್ಲಿ ಪೋಷಕರಿಗೆ ತಿಳಿಸಿದ್ದಾರೆ. ಅವರು ಶಾಲೆಗೆ ಬಂದು ಪ್ರಾಂಶುಪಾಲರಲ್ಲಿ ಈ ಬಗ್ಗೆ ಗಲಾಟೆ ಮಾಡಿದ್ದಾರೆ. ಆದರೆ ಅವರಿಗೂ ಏನಾಗುತ್ತಿದೆ ಎಂದು ಗೊತ್ತಾಗದೇ ಹೋಯಿತು. ಹೀಗಾಗಿ ಪ್ರಾಂಶುಪಾಲರು ಈ ಬಗ್ಗೆ ಪೊಲೀಸ್‌ ದೂರು ದಾಖಲಿಸಿದ್ದಾರೆ. ಶಿಕ್ಷಣ ಇಲಾಖೆಗೂ ದೂರು ನೀಡಲಾಯಿತು. ಆಗ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಇದು ಇಬ್ಬರು ಎಲೆಕ್ಟ್ರಿಷಿಯನ್‌ ಮಾಡುತ್ತಿದ್ದ ಕಿತಾಪತಿ ಎಂಬುದು ಬಯಲಾಗಿದೆ.

ಪ್ರಮುಖ ಸುದ್ದಿ :-   ಕುಟುಂಬದಲ್ಲಿ ದುರಂತ ; ಪಾಪ ಪ್ರಜ್ಞೆಯಿಂದ ನರಳಿ ಪೊಲೀಸ್‌ ಠಾಣೆಗೆ ಬಂದು 39 ವರ್ಷಗಳ ಹಿಂದೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ ವ್ಯಕ್ತಿ....!

ಈ ಪ್ರದೇಶದಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ಸೂರಿಬಾಬು ಮತ್ತು ಶೇಖರ ಎಂಬವರನ್ನು ಶಾಲೆಯಲ್ಲಿ ಹಳೆಯದಾಗಿದ್ದ ವಿದ್ಯುತ್ ಸಾಕೆಟ್‌ಗಳನ್ನು ಹಾಗೂ ವೈರ್‌ಗಳನ್ನು ಬದಲಿಸಲು ಗುರುವಾರ ನೇಮಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತರಗತಿಯೊಂದರಲ್ಲಿ ಬಾಲಕಿಯರ ಬೆಂಚ್ ಬಳಿಯೇ ಸಾಕೆಟ್‌ ಇತ್ತು. ಸಾಕೆಟ್ ಸರಿಪಡಿಸುತ್ತಿದ್ದಾಗ ಸೂರಿಬಾಬು ಎಂಬಾತ ಉದ್ದೇಶಪೂರ್ವಕವಾಗಿ ಸ್ಟೀಲ್ ಬೆಂಚ್‌ಗೆ ವಿದ್ಯುತ್ ತಂತಿಯನ್ನು ಜೋಡಿಸಿ ವಿದ್ಯುತ್‌ ಪ್ರವಹಿಸಿ ಸ್ಟೀಲ್‌ ಬೆಂಚ್ ಮೇಲೆ ಕುಳಿತಿದ್ದ ಮೂವರು ವಿದ್ಯಾರ್ಥಿನಿಯರಿಗೆ ಶಾಕ್ ಹೊಡೆಯುವಂತೆ ಮಾಡಿದ್ದಾನೆ. ಆತ ಈ ಕೃತ್ಯವನ್ನು ಹಲವು ಬಾರಿ ಪುನರಾವರ್ತಿಸಿದ್ದಾನೆ. ಬಾಲಕಿಯರು ಕಿರುಚಿಕೊಂಡ ಬಳಿಕ ಅದನ್ನು ತಕ್ಷಣವೇ ನಿಲ್ಲಿಸುತ್ತಿದ್ದ ಎನ್ನಲಾಗಿದೆ.
ವಿದ್ಯಾರ್ಥಿನಿಯೊಬ್ಬಳು ಶಾಕ್‌ ನಂತರ ವಾಶ್ ರೂಮ್‌ಗೆ ಹೋಗಿ ಮುಖ ತೊಳೆದ ಕೂಡಲೇ ಪ್ರಜ್ಞೆ ತಪ್ಪಿದ್ದಾಳೆ. ಶಾಲೆಯ ಪ್ರಾಂಶುಪಾಲರು ತಕ್ಷಣ ವೈದ್ಯರನ್ನು ಕರೆಸಿ ಬಾಲಕಿಗೆ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರು ಆಕೆ ದುರ್ಬಲಳಾಗಿದ್ದಾಳೆ ಎಂದು ಹೇಳಿದ್ದರಿಂದ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ಕೆಲವು ಗಂಟೆಗಳ ನಂತರ ಬಾಲಕಿಯನ್ನು ಡಿಸ್ಚಾರ್ಜ್‌ ಮಾಡಲಾಯಿತು.

ನಂತರ ಘಟನೆಯ ಬಗ್ಗೆ 15 ವರ್ಷದ ವಿದ್ಯಾರ್ಥಿನಿ ತನ್ನ ಪೋಷಕರಿಗೆ ತಿಳಿಸಿದ್ದಾಳೆ. ತಕ್ಷಣ ಶಾಲೆಗೆ ಧಾವಿಸಿದ ಪೋಷಕರು ಶಾಲೆಯ ಆಡಳಿತ ಮಂಡಳಿಯನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ ಹಾಗೂ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಪೊಲೀಸರಿಗೆ ದೂರು ನೀಡಲಾಯಿತು ಹಾಗೂ ಮಂಡಲ ಶಿಕ್ಷಣಾಧಿಕಾರಿಗಳ ಗಮನಕ್ಕೂ ತರಲಾಯಿತು.
ಪೊಲೀಸ್‌ ತನಿಖೆ ವೇಳೆ ವಿದ್ಯುತ್‌ ಶಾಕ್‌ ವಿಷಯದ ಗುಟ್ಟು ರಟ್ಟಾಯಿತು. ಶಾಲೆಗೆ ಹಳೆಯ ವಿದ್ಯುತ್‌ ಸಾಕೆಟ್‌ ಹಾಗೂ ವೈರ್‌ಗಳನ್ನು ಬದಲಿಸಲು ಬಂದಿದ್ದ ಇಬ್ಬರು ಎಲೆಕ್ಟ್ರಿಷಯನ್‌ಗಳೇ “ಮೋಜಿಗಾಗಿ” ಉದ್ದೇಶಪೂರ್ವಕವಾಗಿ ಪದೇ ಪದೇ ವಿದ್ಯುತ್ ಶಾಕ್ ನೀಡುತ್ತಿದ್ದರು. ಇಬ್ಬರನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಕಂಕಿಪಾಡು ನಿವಾಸಿಗಳಾದ ಮರಿವಾಡ ಸೂರಿಬಾಬು (30) ಮತ್ತು ವಿಜಯ ಶೇಖರ(45) ಎಂದು ಗುರುತಿಸಲಾಗಿದ್ದು, ಮೋಜಿಗಾಗಿ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಸೂರಿಬಾಬು ಸಾಕೆಟ್ ಬದಲಾಯಿಸುವಾಗ ಸ್ಟೀಲ್ ಬೆಂಚ್ ಗಳಿಗೆ ವಿದ್ಯುತ್ ತಂತಿ ಜೋಡಿಸಿ ಬೆಂಚ್ ಮೇಲೆ ಕುಳಿತಿದ್ದ ಮೂವರು ಹುಡುಗಿಯರಿಗೆ ವಿದ್ಯುತ್ ಶಾಕ್ ತಗಲುವಂತೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ತನಿಖೆ ಮುಂದುವರಿದಿದೆ.

ಪ್ರಮುಖ ಸುದ್ದಿ :-   ಇದೆಂಥ ಪವಾಡ...| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ...! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement