ಟೋಲ್ ನಲ್ಲಿ ಮಹಿಳೆಯ ದಾದಾಗಿರಿ..: ಟೋಲ್ ಪಾವತಿಸಿ ಎಂದಿದ್ದಕ್ಕೆ ಸಿಬ್ಬಂದಿ ಕೂದಲು ಜಗ್ಗಾಡಿ, ಕುರ್ಚಿಯಿಂದ ನೆಲಕ್ಕೆ ಕೆಡಹಿದ ಮಹಿಳೆ | ದೃಶ್ಯ ಸೆರೆ

ನೋಯ್ಡಾ: ಗ್ರೇಟರ್ ನೋಯ್ಡಾದಲ್ಲಿ ಮಹಿಳೆಯೊಬ್ಬರು ಟೋಲ್ ಪ್ಲಾಜಾ ಉದ್ಯೋಗಿಯ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ ದಾದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಲುಹರ್ಲಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಟೋಲ್ ಪಾವತಿ ಮಾಡುವಂತೆ ಟೋಲ್‌ ಸಿಬ್ಬಂದಿ ಹೇಳಿದ್ದಕ್ಕಾಗಿ ಮಹಿಳೆಯು ಟೋಲ್ ಪ್ಲಾಜಾ ಉದ್ಯೋಗಿ ಮಹಿಳೆಯ ಕೂದಲನ್ನುಹಿಡಿದು ಜಗ್ಗಿದ್ದಾಳೆ, ಎಳೆದಾಡಿದ್ದಾಳೆ ಮತ್ತು ಕುರ್ಚಿಯಿಂದ ಎಳೆದು ನೆಲಕ್ಕೆ ಕೆಡಹಿದ್ದಾಳೆ. ಈ ದೃಶ್ಯಾವಳಿ ಟೋಲ್ ಪ್ಲಾಜಾದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಹಿಳೆ ಟೋಲ್ ಬೂತ್‌ಗೆ ಪ್ರವೇಶಿಸಿ ಮಹಿಳಾ ಉದ್ಯೋಗಿಯನ್ನು ಬೆದರಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಮಹಿಳೆಯು ಒಂದು ಕೈಯಿಂದ ಕುರ್ಚಿಯ ಮೇಲೆ ಕುಳಿತಿರುವ ನೌಕರಳ ಮುಖವನ್ನು ಮತ್ತು ಅವಳ ಕೂದಲನ್ನು ಇನ್ನೊಂದು ಕೈಯಿಂದ ಹಿಡಿಯುತ್ತಾಳೆ. ಮಹಿಳೆಯ ಅಟ್ಟಹಾಸ ಇಷ್ಟಕ್ಕೇ ನಿಲ್ಲುವುದಿಲ್ಲ. ತನ್ನ ಕರ್ತವ್ಯ ಮಾಡಿದ ಉದ್ಯೋಗಿಗೆ ಅವಳು ಬೆದರಿಕೆ ಹಾಕುತ್ತಾಳೆ.

ಟೋಲ್ ಪ್ಲಾಜಾ ಉದ್ಯೋಗಿ ಮುಕ್ತಗೊಳಿಸಲು ಪ್ರಯತ್ನಿಸುತ್ತಾಳೆ. ಆದರೆ ಮಹಿಳೆ ಬಲವಾಗಿ ಹಿಡಿದಿದ್ದರಿಂದ ಅದು ಸಾಧ್ಯವಾಗುವುದಿಲ್ಲ. ಸಿಬ್ಬಂದಿ ಕುರ್ಚಿಯಿಂದ ಬೀಳುತ್ತಾಳೆ. ಇದು ವೀಡಿಯೊದಲ್ಲಿ ಕಂಡುಬರುತ್ತದೆ. ನಂತರ ಇಬ್ಬರು ಪುರುಷರು ಟೋಲ್ ಬೂತ್‌ಗೆ ಪ್ರವೇಶಿಸಿ ಮಹಿಳೆಯನ್ನು ಹೊರಹೋಗುವಂತೆ ಸೂಚಿಸುತ್ತಾರೆ.
ಬೇರೆ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವ ವಿಡಿಯೋದ ಎರಡನೇ ಭಾಗದಲ್ಲಿ ಮಹಿಳೆ ಟೋಲ್ ಬೂತ್‌ನಿಂದ ಹೊರಗೆ ಬಂದು ಅವಳ ವಾಹನಕ್ಕೆ ಇದ್ದ ತಡೆಯನ್ನು ಬಲವಂತವಾಗಿ ತೆಗೆದಿರುವುದು ಕಂಡುಬಂದಿದೆ. ಟೋಲ್ ಪ್ಲಾಜಾದ ಇತರ ಉದ್ಯೋಗಿಗಳು ಮಹಿಳೆ ಮತ್ತು ಆಕೆಯ ಜೊತೆಗೆ ಇದ್ದವರೊಂದಿಗೆ ತರ್ಕಿಸಲು ಪ್ರಯತ್ನಿಸುತ್ತಾರೆ. ಆದರೆ ಅವರು ಕೇಳಲು ನಿರಾಕರಿಸುತ್ತಾರೆ.

ಪ್ರಮುಖ ಸುದ್ದಿ :-   ಉತ್ತರ ಪತ್ರಿಕೆಗಳಲ್ಲಿ ಜೈ ಶ್ರೀ ರಾಮ, ಕ್ರಿಕೆಟ್‌ ಆಟಗಾರರ ಹೆಸರು ಬರೆದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣ ; ಇಬ್ಬರು ಪ್ರಾಧ್ಯಾಪಕರು ಅಮಾನತು

https://twitter.com/i/status/1680844151775023104

ಆಗ ಬಸ್ಸುಗಳು, ದ್ವಿಚಕ್ರ ವಾಹನ ಸವಾರರು ಮತ್ತು ಇತರ ಪ್ರಯಾಣಿಕರು ಹತ್ತಿರದ ಲೇನ್‌ಗಳಿಂದ ಹಾದು ಹೋಗುವುದನ್ನು ಕಾಣಬಹುದು.
ರಾಷ್ಟ್ರೀಯ ಹೆದ್ದಾರಿ 91 ರಲ್ಲಿ ಟೋಲ್ ಪ್ಲಾಜಾ ನಿರ್ವಹಿಸುವ ಕಂಪನಿ ಈ ಬಗ್ಗೆ ದೂರು ನೀಡಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೂರಿನ ಪ್ರಕಾರ, ಮಹಿಳೆ ಮತ್ತು ಆಕೆಯ ಸಹಾಯಕರು ಹತ್ತಿರದ ಹಳ್ಳಿಯಲ್ಲಿ ವಾಸಿಸುತ್ತೇವೆ ಎಂದು ಹೇಳಿಕೊಂಡು ತಮ್ಮ ಕಾರಿನಲ್ಲಿ ಟೋಲ್ ಪ್ಲಾಜಾ ದಾಟಲು ಪ್ರಯತ್ನಿಸಿದರು. ಮಹಿಳಾ ಉದ್ಯೋಗಿ ಅವರ ಬಳಿ ಗುರುತಿನ ಚೀಟಿ ಕೇಳಿದ ನಂತರ ತೊಂದರೆ ಪ್ರಾರಂಭವಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement