ವಿಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲು ಜೆಡಿಎಸ್‌ಗೆ ಪ್ರತ್ಯೇಕವಾಗಿ ಆಹ್ವಾನಿಸುವ ಅಗತ್ಯವಿಲ್ಲ: ಕೆ.ಸಿ.ವೇಣುಗೋಪಾಲ

ಬೆಂಗಳೂರು: ಸರ್ವಾಧಿಕಾರಿ ಧೋರಣೆ ವಿರೋಧಿಸುವ ಯಾರು ಬೇಕಾದರೂ ನಮ್ಮ ಜೊತೆ ಕೈ ಜೋಡಿಸಬಹುದು. ಜೆಡಿಎಸ್‌ಗೆ ಪ್ರತ್ಯೇಕವಾಗಿ ಆಹ್ವಾನ ನೀಡುವ ಅಗತ್ಯತೆ ಇಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಹೇಳಿದ್ದಾರೆ.
ಇಂದಿನಿಂದ ಎರಡು ದಿನ ಬೆಂಗಳೂರಲ್ಲಿ ವಿಪಕ್ಷಗಳ ಸಭೆ ಹಿನ್ನೆಲೆಯಲ್ಲಿ ಖಾಸಗಿ ಹೊಟೇಲ್‌ನಲ್ಲಿ ಮಾತನಾಡಿರುವ ಅವರು, ಜೆಡಿಎಸ್‌ನವರು ತಮ್ಮ ನಿಲುವು ಏನು ಎಂಬುದನ್ನು ಕಳೆದ ವರ್ಷವೇ ಸಾಬೀತುಪಡಿಸಿದ್ದಾರೆ ಎಂದು ಅವರು ಹೇಳಿದರು.
ವಿಪಕ್ಷಗಳ ಒಕ್ಕೂಟಕ್ಕೆ ನಾಯಕರು ಯಾರು ಎಂಬ ಬಗ್ಗೆ ಈಗಲೇ ಚಿಂತಿಸುವುದು ಬೇಡ. ದೇಶದ ಪರಿಸ್ಥಿತಿಯ ಬಗ್ಗೆ ಯೋಚನೆ ಮೊದಲು ಯೋಜನೆ ಮಾಡೋಣ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್‌ನ ನಾಯಕ ಜೈರಾಮ ರಮೇಶ ಮಾತನಾಡಿ, ಇಂದು ಸೋಮವಾರ ರಾಷ್ಟ್ರೀಯ ನಾಯಕರಿಗೆ ಔತಣಕೂಟ ಇದೆ. ನಾಳೆ ಮಂಗಳವಾರ ಬೆಳಗ್ಗೆ ಅಧಿಕೃತ ಸಭೆ ನಡೆಯಲಿದೆ. ವಿಪಕ್ಷಗಳ ಒಗ್ಗಟ್ಟಿನಿಂದ ಪ್ರಧಾನಿ ಮೋದಿ ಹಾಗೂ ಆಡಳಿತ ಪಕ್ಷಕ್ಕೆ ಭಯ ಶುರುವಾಗಿದೆ. ನಮ್ಮ ಪಟ್ನಾ ಸಭೆ ಬಳಿಕ ಪ್ರಧಾನಿಗಳಿಗೆ ಇಷ್ಟು ದಿನ ಎನ್‌ಡಿಎ ನೆನಪಿರದ ಎನ್‌ಡಿಎ ಮೈತ್ರಿಕೂಟದ ನೆನಪಾಗಿದೆ ಎಂದು ಲೇವಡಿ ಮಾಡಿದ್ದಾರೆ.
ವಿರೋಧ ಪಕ್ಷಗಳ ಸಭೆಗೆ ಸೋನಿಯಾ ಗಾಂಧಿ ಭಾಗಿಯಾಗುತ್ತಿರುವುದು ನಮಗೆ ಮತ್ತಷ್ಟು ಶಕ್ತಿ ಬಂದಿದೆ. ಇದೊಂದು ದೊಡ್ಡ ಪ್ರಾರಂಭ. ಎಲ್ಲ ವಿರೋಧ ಪಕ್ಷಗಳು ದೇಶದ ಭವಿಷ್ಯವನ್ನು ಪುನರ್ ರೂಪಿಸುವುದು ಹೇಗೆ ಎಂಬ ಬಗ್ಗೆ ಚರ್ಚೆ ಮಾಡಲಿವೆ ಎಂದು ಡಿಸಿಎಂ ಡಿ. ಕೆ. ಶಿವಕುಮಾರ ಹೇಳಿದರು.

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement