ಕೋಳಿ ರಕ್ತ ಬಳಸಿ ಉದ್ಯಮಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿ 3 ಕೋಟಿ ರೂ. ವಸೂಲಿ ಮಾಡಿದ ಮಹಿಳೆ

ಮುಂಬೈ : ಮಹಿಳೆಯೊಬ್ಬರು ಕೋಳಿ ರಕ್ತವನ್ನು ಬಳಸಿ 64 ವರ್ಷದ ಉದ್ಯಮಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಅವರಿಂದ 3.26 ಕೋಟಿ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಮುಂಬೈ ಪೊಲೀಸರು 2021ರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಆರೋಪಪಟ್ಟಿ ಸಲ್ಲಿಸಿದ್ದಾರೆ.
ಮಹಿಳೆ ಮೋನಿಕಾ ಭಗವಾನ್ ಅಲಿಯಾಸ್ ದೇವ್ ಚೌಧರಿ ಮತ್ತು ಆಕೆಯ ಸಹಚರರಾದ ಅನಿಲ ಚೌಧರಿ ಅಲಿಯಾಸ್ ಆಕಾಶ, ಫ್ಯಾಶನ್ ಡಿಸೈನರ್ ಲುಬ್ನಾ ವಜೀರ್ ಅಲಿಯಾಸ್ ಸಪ್ನಾ ಮತ್ತು ಆಭರಣ ವ್ಯಾಪಾರಿ ಮನೀಶ್ ಸೋದಿ ವಿರುದ್ಧ ಕಳೆದ ವಾರ ಆರೋಪಪಟ್ಟಿ ಸಲ್ಲಿಸಲಾಗಿದೆ.
ಏನಿದು ಪ್ರಕರಣ?
2021 ರಲ್ಲಿ, ಮೋನಿಕಾ ಮತ್ತು ಆಕೆಯ ಸಹಚರರು ತನ್ನನ್ನು ಬಲೆಗೆ ಬೀಳಿಸಿ 3.26 ಕೋಟಿ ರೂ. ವಸೂಲಿ ಮಾಡಿದ್ದಾರೆ ಎಂದು ಕೊಲ್ಲಾಪುರದ ಉದ್ಯಮಿಯೊಬ್ಬರು ಸಹರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳು 2019 ರಲ್ಲಿ ಉದ್ಯಮಿಯ ವೀಡಿಯೊವನ್ನು ರೆಕಾರ್ಡ್ ಮಾಡಿದ್ದರು, ಆರೋಪಿಗಳು ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ವೀಡಿಯೋವನ್ನು ಬಳಸಿಕೊಂಡು ಎರಡು ವರ್ಷಗಳ ಕಾಲ ಅವರಿಂದ ಹಣ ಸುಲಿಗೆ ಮಾಡಿದ್ದಾರೆ.

ಹೇಳಿಕೆಯ ಪ್ರಕಾರ, 64 ವರ್ಷದ ಉದ್ಯಮಿ 2016 ರಲ್ಲಿ ಗೋವಾದಲ್ಲಿ ಅನಿಲ್ ಚೌಧರಿ ಎಂಬವರನ್ನು ಭೇಟಿಯಾದರು, ಅಲ್ಲಿ ಅವರು ಪರಸ್ಪರ ಫೋನ್‌ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡರು. ಅವರು ಸಂಪರ್ಕ ಮುಂದುವರೆಸಿದರು ಮತ್ತು 2018 ರಲ್ಲಿ ಅನಿಲ್ ಅವರನ್ನು ಫ್ಯಾಶನ್ ಡಿಸೈನರ್ ಲುಬ್ನಾ ವಜೀರ್ ಎಂಬವರಿಗೆ ಪರಿಚಯಿಸಿದರು.
ಮಾರ್ಚ್ 2019 ರಲ್ಲಿ, ಉದ್ಯಮಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದರು, ಸಪ್ನಾ ಮತ್ತು ಮೋನಿಕಾ ಅವರೊಂದಿಗೆ ಭೋಜನಕ್ಕೆ ಸೇರಬಹುದೇ ಎಂದು ಅವರನ್ನು ಅನಿಲ್‌ ಚೌಧರಿ ಕೇಳಿದಾಗ ಅವರು ಒಪ್ಪಿದರು. ಸಪ್ನಾ ಮತ್ತು ಮೋನಿಕಾ ಹೋಟೆಲ್ ತಲುಪಿ ಉದ್ಯಮಿಯನ್ನು ಅವರ ಕೋಣೆಯಲ್ಲಿ ಭೇಟಿಯಾದರು.
ಸ್ವಲ್ಪ ಸಮಯದ ನಂತರ, ಸಪ್ನಾ ಕೆಲವು ದಾಖಲೆಗಳನ್ನು ಹೋಟೆಲ್‌ನ ಲಾಬಿಯಲ್ಲಿ ಯಾರಿಗೋ ಹಸ್ತಾಂತರಿಸಬೇಕೆಂದು ಹೇಳಿಕೊಂಡು ಕೊಠಡಿಯಿಂದ ಹೊರಬಂದರು. ಅದೇ ಸಮಯಕ್ಕೆ ಮೋನಿಕಾ ಹೋಟೆಲ್ ರೂಮಿನ ವಾಶ್ ರೂಮ್ ಒಳಗೆ ಹೋದಳು.
ಸ್ವಲ್ಪ ಸಮಯದ ನಂತರ, ಯಾರೋ ಕೋಣೆಯ ಡೋರ್‌ಬೆಲ್ ಅನ್ನು ಬಾರಿಸಿದರು, ಮತ್ತು ಉದ್ಯಮಿ ಬಾಗಿಲು ತೆರೆದಾಗ, ಸಪ್ನಾ ಕೂಗಲು ಮತ್ತು ತನ್ನ ಫೋನ್‌ನಲ್ಲಿ ವೀಡಿಯೊ ರೆಕಾರ್ಡ್ ಮಾಡಲು ಪ್ರಾರಂಭಿಸಿದಳು. ತನ್ನನ್ನು ವಿವಸ್ತ್ರಗೊಳಿಸಿ ಬೆಡ್‌ಶೀಟ್‌ನಿಂದ ಮುಚ್ಚಿಕೊಂಡಿದ್ದ ಮೋನಿಕಾ ತನ್ನ ಮೇಲೆ ಉದ್ಯಮಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದಳು. ಮೋನಿಕಾ ಬಟ್ಟೆಗಳು ಮತ್ತು ಅವಳು ತನ್ನನ್ನು ಮುಚ್ಚಿಕೊಳ್ಳಲು ಬಳಸುತ್ತಿದ್ದ ಬೆಡ್‌ಶೀಟ್‌ನಲ್ಲಿ ರಕ್ತದ ಕಲೆಗಳಿದ್ದವು, ಅದು ಲೈಂಗಿಕ ದೌರ್ಜನ್ಯದ ಪರಿಣಾಮವಾಗಿದೆ ಎಂದು ಅವರು ಆರೋಪಿಸಿದರು.

ಪ್ರಮುಖ ಸುದ್ದಿ :-   ಪರೀಕ್ಷೆಯಲ್ಲಿ ಫೇಲ್‌ ಆದ್ರೂ 2 ವರ್ಷ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಮಹಿಳೆ..! ಸಬ್-ಇನ್ಸ್‌ಪೆಕ್ಟರ್ ಆಗಿ‌ ಪೋಸ್‌...!!

ಇದರಿಂದ ಗಾಬರಿಗೊಂಡ ಉದ್ಯಮಿ ಅನಿಲ್‌ಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದರು. ಬಳಿಕ ಅನಿಲ್ ಆಗಮಿಸಿದ್ದು, ಆ ಹೇಳಿದಷ್ಟು ಹಣ ನೀಡದಿದ್ದರೆ ಆತನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಬಿಡುಗಡೆ ಮಾಡುವುದಾಗಿ ಹೇಳಿ 10 ಕೋಟಿ ರೂ.ಗಳ ಬೇಡಿಕೆ ಇಟ್ಟರು.
ಅಂತಿಮವಾಗಿ, ಉದ್ಯಮಿ 75 ಲಕ್ಷ ರೂ. ಕೊಡಲು ಒಪ್ಪಿದರು. ಆದರೆ ಅಂದಿನಿಂದ, ಅವರು ಉದ್ಯಮಿಯಿಂದ ಎರಡು ವರ್ಷಗಳ ಅವಧಿಯಲ್ಲಿ 3.26 ಕೋಟಿ ರೂ.ಗಳನ್ನು ವಸೂಲು ಮಾಡಿದರು. ಅದೇ ವರ್ಷ ಅಕ್ಟೋಬರ್‌ನಲ್ಲಿ ಆರೋಪಿಗಳು ಸಂತ್ರಸ್ತ ಉದ್ಯಮಿಯನ್ನು ಅಪಹರಿಸಿ 27,000 ರೂಪಾಯಿ ಮತ್ತು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿದ್ದರು. ನಿರಂತರ ಸುಲಿಗೆ ಮತ್ತು ಬ್ಲ್ಯಾಕ್‌ಮೇಲ್‌ನಿಂದ ಬೇಸತ್ತ ಸಂತ್ರಸ್ತ ನವೆಂಬರ್ 17, 2021 ರಂದು ಸಹರ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಿಸಿದ್ದರು.
ದೂರನ್ನು ಸ್ವೀಕರಿಸಿದ ಪೊಲೀಸರು ಸುಲಿಗೆ ಹಣ ಸ್ವೀಕರಿಸುತ್ತಿದ್ದಾಗ ಸಪ್ನಾ ಮತ್ತು ಅನಿಲ್ ಇಬ್ಬರನ್ನು ಬಲೆ ಬೀಸಿ ಬಂಧಿಸಿದ್ದಾರೆ. ಆದಾಗ್ಯೂ, ಮೋನಿಕಾ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಮತ್ತು ನಂತರ ಜೂನ್ 2022 ರಲ್ಲಿ ಬಂಧಿಸಲಾಯಿತು.
ತನಿಖೆಯ ವೇಳೆ ಆರೋಪಿ ಗ್ಯಾಂಗ್ ಬ್ಲ್ಯಾಕ್‌ಮೇಲ್‌ನಲ್ಲಿ ಭಾಗಿಯಾಗಿರುವುದು ಮತ್ತು ಇತರ ಹಲವರನ್ನು ಸುಲಿಗೆ ಮಾಡಿರುವುದು ಪತ್ತೆಯಾಗಿದೆ. ಅವರು ಕೆಲವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದಾರೆ. ತನಿಖಾ ತಂಡ ಶೋಧದ ವೇಳೆ ಆರೋಪಿಗಳಿಂದ 49.35 ಲಕ್ಷ ರೂ.ವಶಕ್ಕೆ ಪಡೆಯಿತು. ಈ ಪ್ರಕರಣದಲ್ಲಿ ದೂರುದಾರರನ್ನು ಬಂಧಿಸುವಂತೆ ಮಾಡಲು ಕೋಳಿ ರಕ್ತ ಬಳಸಿರುವುದು ಪತ್ತೆಯಾಗಿದೆ.

ಪ್ರಮುಖ ಸುದ್ದಿ :-   ಕುಟುಂಬದಲ್ಲಿ ದುರಂತ ; ಪಾಪ ಪ್ರಜ್ಞೆಯಿಂದ ನರಳಿ ಪೊಲೀಸ್‌ ಠಾಣೆಗೆ ಬಂದು 39 ವರ್ಷಗಳ ಹಿಂದೆ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ ವ್ಯಕ್ತಿ....!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement