ಚಿತ್ರದುರ್ಗ: ತಾಲೂಕಿನ ಬೈರಾಪುರ ಸಮೀಪದ ಹಳೆಯ ಬ್ರಿಡ್ಜ್ ಬಳಿ ಛತ್ರಪತಿ ಶಿವಾಜಿ ಮಹಾರಾಜರ (Chhatrapati Shivaji Maharaj) ಕಾಲದ ಹಳೆಯ ನಾಣ್ಯಗಳು ಪತ್ತೆಯಾಗಿವೆ. ಇವು 1674ನೇ ಇಸವಿಯ ನಾಣ್ಯಗಳಾಗಿದ್ದು, ಒಂದು ನಾಣ್ಯದ ಮುಖದಲ್ಲಿ ಛತ್ರಪತಿ ಶಿವಾಜಿ ಮತ್ತು ಇನ್ನೊಂದು ಮುಖದಲ್ಲಿ ಕತ್ತಿ ಗುರಾಣಿಯ ಚಿತ್ರಗಳಿವೆ.
ಸೇತುವೆಯ ಬಳಿ ಕುರಿ ಕಾಯುತ್ತಿದ್ದ ಕುರಗಾಹಿಗಳಿಗೆ (Shepherds) ಶಿವಾಜಿ ಕಾಲದಲ್ಲಿ ಚಲಾವಣೆಯಲ್ಲಿದ್ದ ಒಂದಷ್ಟು ನಾಣ್ಯಗಳು ಸಿಕ್ಕಿವೆ. ಹದಿನೈದು ವರ್ಷದ ಹಿಂದೆ ಸೇತುವೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಅರಣ್ಯ ಭಾಗದಿಂದ ಮಣ್ಣು ತರಲಾಗಿತ್ತು. ಕುರಿಗಾಹಿಗಳು ಮೇಯಿಸಲು ಹೋಗಿದ್ದಾಗ ಸೇತುವೆ ಕೆಳಭಾಗದಲ್ಲಿ ನಾಣ್ಯಗಳು ಸಿಕ್ಕಿವೆ. ತಾಮ್ರದ ಮಾದರಿಯ ಐವತ್ತಕ್ಕೂ ಹೆಚ್ಚು ನಾಣ್ಯಗಳು ಪತ್ತೆಯಾಗಿದೆ. ಸಂಶೋಧಕರು ಈ ಸ್ಥಳದಲ್ಲಿ ಇನ್ನು ಹೆಚ್ಚಿನ ಉತ್ಕನನ ನಡೆಸಿದರೆ ಇನ್ನಷ್ಟು ಐತಿಹಾಸಿಕ ಕುರುಹುಗಳನ್ನು ಸಿಗಬಹುದು.
ನಿಮ್ಮ ಕಾಮೆಂಟ್ ಬರೆಯಿರಿ