ಬೆಂಗಳೂರಲ್ಲಿ ವಿಪಕ್ಷಗಳ ಸಭೆ : ಪ್ರಧಾನಿ ಹುದ್ದೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು..?

ಬೆಂಗಳೂರು: ಪ್ರಧಾನ ಮಂತ್ರಿ ಹುದ್ದೆಯ ವಿಚಾರದಲ್ಲಿ ತಮ್ಮ ಪಕ್ಷಕ್ಕೆ ಆಸಕ್ತಿ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ಪ್ರಬಲ ವಿರೋಧ ಪಕ್ಷಗಳ ಮೈತ್ರಿಕೂಟ ರಚನೆಗೆ ಬೆಂಗಳೂರಿನಲ್ಲಿ ಮಂಗಳವಾರ ನಡೆದ ಸಭೆಯ ನಡುವೆ ಖರ್ಗೆ ಈ ಹೇಳಿಕೆ ಬಂದಿದೆ.
26 ವಿರೋಧ ಪಕ್ಷಗಳು ಭಾಗವಹಿಸಿದ್ದ ಸಭೆಯಲ್ಲಿ, ಮೈತ್ರಿಕೂಟವನ್ನು ಯಾರು ಮುನ್ನಡೆಸುತ್ತಾರೆ ಎಂಬ ಚರ್ಚೆಯ ನಡುವೆ ಪ್ರಧಾನಿ ಸ್ಥಾನದ ಕುರಿತಾದ ಖರ್ಗೆ ಈ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಅಧಿಕಾರ ಅಥವಾ ಪ್ರಧಾನಿ ಹುದ್ದೆಯ ಮೇಲೆ ಕಾಂಗ್ರೆಸ್ಸಿಗೆ ಆಸಕ್ತಿ ಇಲ್ಲ. ನಮಗಾಗಿ ಅಧಿಕಾರ ಪಡೆದುಕೊಳ್ಳುವುದು ನಮ್ಮ ಈ ಸಭೆಯ ಉದ್ದೇಶವಲ್ಲ. ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತತೆ ಹಾಗೂ ಸಾಮಾಜಿಕ ನ್ಯಾಯವನ್ನು ರಕ್ಷಿಸುವ ಸಲುವಾಗಿ ಈ ಸಭೆ ನಡೆಯುತ್ತಿದೆ ಎಂದು ಖರ್ಗೆ ತಿಳಿಸಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾವು 26 ಪಕ್ಷಗಳು ಜೊತೆಗಿದ್ದೇವೆ. 11 ರಾಜ್ಯಗಳಲ್ಲಿ ಸರ್ಕಾರಗಳಿವೆ. ಬಿಜೆಪಿ 303 ಸೀಟುಗಳನ್ನು ಸ್ವಂತ ಬಲದಿಂದ ಪಡೆದಿರುವುದಲ್ಲ. ಅದು ತನ್ನ ಮಿತ್ರ ಪಕ್ಷಗಳ ಮತಗಳನ್ನು ಬಳಸಿಕೊಂಡಿತು. ಬಳಿಕ ಅವರನ್ನು ಕೈಬಿಟ್ಟಿತು ಎಂದು ಹರಿಹಾಯ್ದರು.
ರಾಜ್ಯ ಮಟ್ಟದಲ್ಲಿ ನಮ್ಮಲ್ಲಿ ಕೆಲವರ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನುವುದರ ಅರಿವಿದೆ. ಈ ಭಿನ್ನಾಭಿಪ್ರಾಯಗಳು ಸೈದ್ಧಾಂತಿಕವಾಗಿ ಇಲ್ಲ. ಸಾಮಾನ್ಯ ಜನರು ಮತ್ತು ಮಧ್ಯಮ ವರ್ಗಗಳಿಗಾಗಿ, ಯುವಜನರಿಗಾಗಿ, ಬಡವರಿಗಾಗಿ, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ಒಳಿತಿನ ಸಲುವಾಗಿ ಇವುಗಳನ್ನು ನಾವು ಕಡೆಗಣಿಸಲಾಗದಷ್ಟು ದೊಡ್ಡದಲ್ಲ ಎಂದು ಖರ್ಗೆ ಹೇಳಿದರು.

ಪ್ರಮುಖ ಸುದ್ದಿ :-   18 ಬಿಜೆಪಿ ಶಾಸಕರ ಅಮಾನತು ಹಿಂಪಡೆಯುವೆ ; ಸ್ಪೀಕರ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement