ಏಷ್ಯಾ ಕಪ್ ಕ್ರಿಕೆಟ್ 2023 ವೇಳಾಪಟ್ಟಿ ಪ್ರಕಟ : ಸೆಪ್ಟೆಂಬರ್‌ 2ಕ್ಕೆ ಭಾರತ-ಪಾಕಿಸ್ತಾನ ಪಂದ್ಯ

ನವದೆಹಲಿ : ಶ್ರೀಲಂಕಾದ ಕ್ಯಾಂಡಿಯಲ್ಲಿ ಸೆಪ್ಟೆಂಬರ್ 2 ರಂದು ನಡೆಯಲಿರುವ ಏಷ್ಯಾ ಕಪ್ 2023 ರಲ್ಲಿ ತನ್ನ ಮೊದಲ ಪಂದ್ಯದಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬುಧವಾರ ದೃಢಪಡಿಸಿದ್ದಾರೆ.
ಆರು ರಾಷ್ಟ್ರಗಳ ಏಷ್ಯನ್ ಪಂದ್ಯಾವಳಿಯನ್ನು ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಆಡಲಾಗುತ್ತದೆ. ಪಂದ್ಯಾವಳಿಯು ಆಗಸ್ಟ್ 30 ರಂದು ಮುಲ್ತಾನ್‌ನಲ್ಲಿ ಪ್ರಾರಂಭವಾಗುತ್ತದೆ. ಅಂತಿಮ ಪಂದ್ಯ ಸೆಪ್ಟೆಂಬರ್ 17 ರಂದು ಕೊಲಂಬೊದಲ್ಲಿ ನಡೆಯಲಿದೆ.
ಏಷ್ಯಾ ಕಪ್ 2023 ಪುರುಷರ ವಿಶ್ವಕಪ್‌ಗೆ ಮುಂಚಿತವಾಗಿ 50 ಓವರ್‌ಗಳ ಸ್ವರೂಪದಲ್ಲಿ ಆಡಲಾಗುತ್ತದೆ, ವಿಶ್ವಕಪ್‌ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಭಾರತದಲ್ಲಿ ನಡೆಯಲಿದೆ.
ಏಷ್ಯಾ ಕಪ್‌ನಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಪಾಲ್ಗೊಳ್ಳಲಿವೆ. ಭಾರತ ಮತ್ತು ಪಾಕಿಸ್ತಾನ ನೇಪಾಳದ ಜೊತೆಗೆ ಗುಂಪು A ಯಲ್ಲಿ ಇದೆ,, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವು B ಗುಂಪಿನಲ್ಲಿರುವ ತಂಡಗಳಾಗಿವೆ. ಭಾರತವು ಕೊನೆಯ ಬಾರಿ 2018 ರಲ್ಲಿ ಯುಎಇಯಲ್ಲಿ 50-ಓವರ್ ಏಶಿಯಾ ಕಂಪ್‌ ಪಂದ್ಯಾವಳಿಯನ್ನು ಗೆದ್ದಿದೆ. ಮತ್ತೊಂದೆಡೆ, ಕಳೆದ ವರ್ಷ ಯುಎಇಯಲ್ಲಿ ನಡೆದ 20-ಓವರ್ ಮಾದರಿಯಲ್ಲಿ ನಡೆದ ಏಷ್ಯಾ ಕಪ್‌ನ ಹಾಲಿ ಚಾಂಪಿಯನ್ ಶ್ರೀಲಂಕಾ ಆಗಿದೆ.
ನೇಪಾಳವನ್ನು ಹೊರತುಪಡಿಸಿ, ಏಷ್ಯಾ ಕಪ್ ಹಾಗೂ ವಿಶ್ವಕಪ್‌ಗಾಗಿ ಉಳಿದ ಐದು ತಂಡಗಳಿಗೆ ಪ್ರಮುಖ ತಯಾರಿಯಾಗಿ ಆಡಲಿವೆ. ಎರಡು ಗುಂಪನಲ್ಲಿ ಪ್ರತಿ ಗುಂಪಿನಿಂದ ಎರಡು ತಂಡಗಳು ಸೂಪರ್ ನಾಲ್ಕರ ಹಂತಕ್ಕೆ ಅರ್ಹತೆ ಪಡೆಯುತ್ತವೆ. ನಾಲ್ಕರ ಹಂತದಿಂದ ಅಗ್ರ ಎರಡು ತಂಡಗಳು ನಂತರ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಮುಲ್ತಾನ್ ಪಂದ್ಯಾವಳಿಯ ಆರಂಭಿಕ ಪಂದ್ಯವನ್ನು ಆಯೋಜಿಸಿದ ನಂತರ, ಲಾಹೋರ್ ಸೆಪ್ಟೆಂಬರ್ 3 ಮತ್ತು 5 ರಂದು ಕ್ರಮವಾಗಿ ಬಾಂಗ್ಲಾದೇಶ vs ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ vs ಅಫ್ಘಾನಿಸ್ತಾನ – ಎರಡು ಗುಂಪು ಹಂತದ ಪಂದ್ಯಗಳನ್ನು ಆಯೋಜಿಸುತ್ತದೆ, ಹಾಗೆಯೇ ಸೆಪ್ಟೆಂಬರ್ 6 ರಂದು A1 ಮತ್ತು B2 ತಂಡಗಳ ನಡುವೆ ಒಂದು ಸೂಪರ್ ಫೋರ್ಸ್ ಪಂದ್ಯವನ್ನು ಆಯೋಜಿಸುತ್ತದೆ. ಶ್ರೀಲಂಕಾದಲ್ಲಿ, ಕ್ಯಾಂಡಿಯು ಗುಂಪು ಪಂದ್ಯಗಳನ್ನು ಆಯೋಜಿಸುತ್ತದೆ, ಸೆಪ್ಟೆಂಬರ್ 4 ರಂದು ಭಾರತ ವಿರುದ್ಧ ನೇಪಾಳದೊಂದಿಗೆ ಕೊನೆಗೊಳ್ಳುತ್ತದೆ. ರಾಜಧಾನಿ ಕೊಲಂಬೊ ನಂತರ ಐದು ಸೂಪರ್ ನಾಲ್ಕರ ಪಂದ್ಯ ಮತ್ತು ಫೈನಲ್‌ಗೆ ಆತಿಥ್ಯ ವಹಿಸುತ್ತದೆ. ಮೊದಲ ಸುತ್ತಿನಲ್ಲಿ ತಂಡಗಳು ಎಲ್ಲಿ ಮುಗಿಸಿದರೂ, ಪಾಕಿಸ್ತಾನ A1 ಮತ್ತು ಭಾರತ A2 ಆಗಿರುತ್ತದೆ, ಶ್ರೀಲಂಕಾ B1 ಮತ್ತು ಬಾಂಗ್ಲಾದೇಶ B2 ಆಗಿರುತ್ತದೆ ಎಂದು ವೇಳಾಪಟ್ಟಿ ಹೇಳಿದೆ. ನೇಪಾಳ ಮತ್ತು ಅಫ್ಘಾನಿಸ್ತಾನಗಳು ಸೂಪರ್ ನಾಲ್ಕರ ಹಂತಕ್ಕೆ ಅರ್ಹತೆ ಪಡೆದರೆ, ಅವರು ತಮ್ಮ ಗುಂಪಿನಿಂದ ಹೊರಬಿದ್ದ ತಂಡದ ಸ್ಥಾನವನ್ನು ತೆಗೆದುಕೊಳ್ಳುತ್ತಾರೆ.
ಏಷ್ಯಾ ಕಪ್ 2023 ವೇಳಾಪಟ್ಟಿ:
ಪಾಕಿಸ್ತಾನ Vs ನೇಪಾಳ – ಮುಲ್ತಾನ್, ಆಗಸ್ಟ್ 30
ಬಾಂಗ್ಲಾದೇಶ Vs ಶ್ರೀಲಂಕಾ – ಕ್ಯಾಂಡಿ, ಸೆಪ್ಟೆಂಬರ್ 2
ಪಾಕಿಸ್ತಾನ Vs ಭಾರತ – ಕ್ಯಾಂಡಿ, ಸೆಪ್ಟೆಂಬರ್ 3
ಬಾಂಗ್ಲಾದೇಶ Vs ಅಫ್ಘಾನಿಸ್ತಾನ – ಲಾಹೋರ್, ಸೆಪ್ಟೆಂಬರ್ 4
ಭಾರತ Vs ನೇಪಾಳ – ಕ್ಯಾಂಡಿ, ಸೆಪ್ಟೆಂಬರ್ 5
ಅಫ್ಘಾನಿಸ್ತಾನ Vs ಶ್ರೀಲಂಕಾ – ಲಾಹೋರ್, ಸೆಪ್ಟೆಂಬರ್ 6
A1 Vs B2 – ಲಾಹೋರ್, ಸೆಪ್ಟೆಂಬರ್ 9
B1 Vs B2 – ಕೊಲಂಬೊ, ಸೆಪ್ಟೆಂಬರ್ 10
A1 Vs A2 – ಕೊಲಂಬೊ, ಸೆಪ್ಟೆಂಬರ್ 12
A2 Vs B1 – ಕೊಲಂಬೊ, ಸೆಪ್ಟೆಂಬರ್ 14
A1 Vs B1 – ಕೊಲಂಬೊ, ಸೆಪ್ಟೆಂಬರ್ 15
A2 Vs B2 – ಕೊಲಂಬೊ, ಫೈನಲ್ – ಸೆಪ್ಟೆಂಬರ್ 17

ಪ್ರಮುಖ ಸುದ್ದಿ :-   ಪುತ್ತೂರು | ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ ; ಬಿಜೆಪಿ ಮುಖಂಡನ ಪುತ್ರ ಅರೆಸ್ಟ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement