ಬೆಂಗಳೂರು: ವಿಧಾನಸಭೆಯಲ್ಲಿ ಬುಧವಾರ 10 ಬಿಜೆಪಿ ಶಾಸಕರನ್ನು ಅಮಾನನು ಮಾಡಿದ ಬಳಿಕ, ಬಿಜೆಪಿ ಶಾಸಕರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅಸ್ವಸ್ಥರಾಗಿ ಕುಸಿದಿದ್ದಾರೆ.
ಸದನದಲ್ಲಿ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಹಿನ್ನೆಲೆಯಲ್ಲಿ ಸ್ಪೀಕರ್ ಯುಟಿ ಖಾದರ್, 10 ಬಿಜೆಪಿ ಶಾಸಕರನ್ನು ಅಮಾನತು ಮಾಡಿದರು. ಅಮಾನತಾದ ಬಳಿಕವೂ ಬಿಜೆಪಿ ಸದಸ್ಯರು ಸದನದೊಳಗೆ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾರ್ಷಲ್‌ಗಳು ಅಮಾನತಾದ ಶಾಸಕರನ್ನು ಸದನದಿಂದ ಎತ್ತಿಕೊಂಡು ಹೋಗಿ ಹೊರಹಾಕುವ ಕೆಲಸ ಮಾಡಿದರು.
ಸ್ಪೀಕರ್ ನಿಲುವು ಖಂಡಿಸಿ ಬಿಜೆಪಿ ಸದ್ಯಸರು ವಿಧಾನಸಭೆಯ ಬಾಗಿಲ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು, ಈ ವೇಳೆ ಉಂಟಾದ ತಳ್ಳಾಟದಲ್ಲಿ ಯತ್ನಾಳ್ ಅಸ್ವಸ್ಥಗೊಂಡು ಅಲ್ಲೇ ಕುಸಿದರು. ತಕ್ಷಣವೇ ವಿಧಾನ ಸೌಧದ ಸಿಬ್ಬಂದಿ ಆರೈಕೆ ಮಾಡಿ ಅವರನ್ನು ಚಿಕಿತ್ಸೆಗೆ ಅಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈಗ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಯತ್ನಾಳ್ ಅವರಿಗೆ ಬಿಪಿ ಏರಿಕೆ ಹಾಗೂ ಶುಗರ್‌ನಲ್ಲಿ ಏರುಪೇರಾಗಿದೆ ಎನ್ನಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ