ಕರ್ನಾಟಕದಲ್ಲಿ ಶೇ 23 ರಷ್ಟು ಮಾನ್ಸೂನ್‌ ಮಳೆ ಕೊರತೆ : ವರದಿ

ಬೆಂಗಳೂರು: ಕರ್ನಾಟಕದಲ್ಲಿ ಜೂನ್ 1 ರಿಂದ ಜುಲೈ 19 ರವರೆಗೆ 27.3 ಸೆಂ.ಮೀ ಮಳೆಯಾಗಿದ್ದು, ಇದು ವಾಡಿಕೆ ಮಳೆಗಿಂತ ಸುಮಾರು 23%ರಷ್ಟು ಕಡಿಮೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.
ಈ ಅವಧಿಯಲ್ಲಿ ವಾಡಿಕೆಯಂತೆ 35.35 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ 27.3 ಸೆಂ.ಮೀ ಮಾತ್ರ ಮಳೆಯಾಗಿದ್ದು, 23%ರಷ್ಟು ಮಳೆ ಕೊರತೆಯಾಗಿದೆ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.
ಐಎಂಡಿ (IMD) ಪ್ರಕಾರ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದರೆ ಕೊಡಗಿನಲ್ಲಿ ಅತಿ ಹೆಚ್ಚು ಕೊರತೆ ವರದಿಯಾಗಿದೆ. ನಂತರದ ಸ್ಥಾನದಲ್ಲಿ ಹಾಸನ, ರಾಮನಗರ ಮತ್ತು ಶಿವಮೊಗ್ಗ ಮತ್ತು ಬಾಗಲಕೋಟೆ ಇದೆ. ಇದೇ ಅವಧಿಯಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ 7% ಮತ್ತು ಬೆಂಗಳೂರು ನಗರದಲ್ಲಿ 17% ಅಧಿಕ ಮಳೆ ದಾಖಲಾಗಿದೆ. 13 ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಿದೆ ಮತ್ತು 16 ಜಿಲ್ಲೆಗಳಲ್ಲಿ ಕೊರತೆ ಮಳೆಯಾಗಿದೆ ಎಂದು ವರದಿ ಹೇಳಿದೆ.
ಕಳೆದ ವರ್ಷ ಈ ಬಾರಿ ಕಾವೇರಿ ಜಲಾನಯನ ಪ್ರದೇಶಗಳು ಮತ್ತು ಘಟ್ಟ ಪ್ರದೇಶಗಳು ಅತಿ ಹೆಚ್ಚು ಮಳೆ ಮತ್ತು ಪ್ರವಾಹವನ್ನು ಕಂಡಿತ್ತು.
ಕಳೆದ ವರ್ಷ, ಸಮುದ್ರಗಳಲ್ಲಿ ಅನೇಕ ವ್ಯವಸ್ಥೆಗಳು ರೂಪುಗೊಂಡವು. ಅಲ್ಲದೆ, ಮುಂಗಾರು ಪ್ರಾರಂಭವು ಮೇ 29 ರಂದು ಅಂದರೆ ವಾಡಿಕೆಗಿಂತ ಮುಂಚೆಯೇ ಆಗಮಿಸಿತ್ತು. ಆದರೆ, ಈ ವರ್ಷ ವ್ಯವಸ್ಥೆಯ ರಚನೆಯು ಕಡಿಮೆಯಾಗಿದೆ, ಮುಂಗಾರು ಪ್ರಾರಂಭವೂ ತಡವಾಗಿದೆ ಎಂದು ವರದಿ ಅಧಿಕಾರಿಯನ್ನು ಉಲ್ಲೇಖಿಸಿದೆ.

ಪ್ರಮುಖ ಸುದ್ದಿ :-   ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್​ ಉಚ್ಚಾಟನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement