ಜೈಪುರ: ಜೈಪುರದಲ್ಲಿ ಶುಕ್ರವಾರ ಮುಂಜಾನೆ ಅರ್ಧ ಗಂಟೆಯ ಅವಧಿಯಲ್ಲಿ ಮೂರು ಸಲ ಭೂಕಂಪಗಳ ಅನುಭವವಾಗಿದೆ. 3.4 ರ ತೀವ್ರತೆಯ ಇತ್ತೀಚಿನ ಭೂಕಂಪನವು ಬೆಳಿಗ್ಗೆ 4:25 ರ ಸುಮಾರಿಗೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ವರದಿ ಮಾಡಿದೆ. NCS ಪ್ರಕಾರ, ಇದು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.
ರಾಜಸ್ಥಾನದ ಜೈಪುರದಲ್ಲಿ ಸುಮಾರು 10 ಕಿಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ. ಇದರ ತೀವ್ರತೆ: 3.4, 21-07-2023 ರಂದು ಬೆಳಿಗ್ಗೆ 4:25:33ರ ಸುಮಾರಿಗೆ ಇದು ಸಂಭವಿಸಿದೆ ಎಂದು ನ್ಯಾಶನಲ್ ಸೆಂಟರ್ ಫಾರ್ ಸಿಸ್ಮಾಲಜಿ (NCS) ಟ್ವೀಟ್ ಮಾಡಿದೆ. ಮುಂಜಾನೆ 4:22ಕ್ಕೆ 5 ಕಿಲೋಮೀಟರ್ ಆಳದಲ್ಲಿ 3.1 ತೀವ್ರತೆಯ ಭೂಕಂಪನದ ಅನುಭವವಾಗಿತ್ತು. ಇದಕ್ಕೂ ಮುನ್ನ ಬೆಳಗ್ಗೆ 4.09ಕ್ಕೆ 10 ಕಿಲೋಮೀಟರ್ ಆಳದಲ್ಲಿ ಮೊದಲ ಭೂಕಂಪದ ಅನುಭವವಾಗಿತ್ತು.
ವಿಶೇಷವಾಗಿ ಜೈಪುರದ ಚಾಂದ್‌ಪೋಲ್ ಬಜಾರ್, ಜೊಹಾರಿ ಬಜಾರ್ ಸೇರಿದಂತೆ ವಾಲ್ಡ್ ಸಿಟಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ರಸ್ತೆಗಳಲ್ಲಿ ಕಾಣಿಸಿಕೊಂಡರು. ಅನೇಕರು ತಮ್ಮ ಮನೆಯ ಹತ್ತಿರದ ಉದ್ಯಾನವನಗಳಿಗೆ ಹೋದರು. ನಿಯಂತ್ರಣ ಕೊಠಡಿಯ ಪ್ರಕಾರ ಜೈಪುರ ಮತ್ತು ಸುತ್ತಮುತ್ತ ಯಾವುದೇ ಜೀವ ಹಾನಿ ಅಥವಾ ಹಾನಿ ವರದಿಯಾಗಿಲ್ಲ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಭೂಕಂಪದ ಬಗ್ಗೆ ಟ್ವೀಟ್ ಮಾಡಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಆಶಿಸಿದ್ದಾರೆ. ಕಂಪನದ ಬಗ್ಗೆ ಪ್ರತಿಕ್ರಿಯಿಸಿರುವ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ, “ಜೈಪುರ ಸೇರಿದಂತೆ ರಾಜ್ಯದ ಇತರ ಸ್ಥಳಗಳಲ್ಲಿ ಭೂಕಂಪನದ ಅನುಭವವಾಗಿದೆ. ನೀವೆಲ್ಲರೂ ಸುರಕ್ಷಿತವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಶುಕ್ರವಾರ ಮುಂಜಾನೆ ಮಣಿಪುರದ ಉಖ್ರುಲ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ. ಬೆಳಿಗ್ಗೆ 5.01ಕ್ಕೆ ಭೂಕಂಪ ಸಂಭವಿಸಿದೆ. NCS ಪ್ರಕಾರ, ಭೂಕಂಪವು 20 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ