ನವದೆಹಲಿ: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು 2023-24ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆಗೆ ಶೇಕಡಾ 8.15 ರಷ್ಟು ಬಡ್ಡಿಯನ್ನು ಕ್ರೆಡಿಟ್ ಮಾಡಲು ಅನುಮೋದಿಸಿದೆ.
ಜುಲೈ 24 ರಂದು ಹೊರಡಿಸಲಾದ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಕಚೇರಿ ಆದೇಶದ ಪ್ರಕಾರ, ಕಾರ್ಮಿಕ ಸಚಿವಾಲಯವು ಇಪಿಎಫ್ ಯೋಜನೆಯ ಪ್ರತಿಯೊಬ್ಬ ಸದಸ್ಯರಿಗೆ 2021-22 ಕ್ಕೆ ವಾರ್ಷಿಕ ಶೇಕಡಾ 8.15 ರಷ್ಟು ಬಡ್ಡಿಯನ್ನು ಕ್ರೆಡಿಟ್ ಮಾಡಲು ಕೇಂದ್ರ ಸರ್ಕಾರದ ಅನುಮೋದನೆ ನೀಡಿದೆ. ಇಪಿಎಫ್ ಸದಸ್ಯರ ಖಾತೆಗಳಲ್ಲಿ ಬಡ್ಡಿಯನ್ನು ಜಮಾ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ಸುತ್ತೋಲೆಯಲ್ಲಿ ಹೇಳಲಾಗಿದೆ.
ಮಾರ್ಚ್ 28 ರಂದು ಇಪಿಎಫ್‌ಒ (EPFO)ಯ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ಈ ಹಣಕಾಸು ವರ್ಷಕ್ಕೆ ಭವಿಷ್ಯ ನಿಧಿಯ ಮೇಲೆ 8.15 ಶೇಕಡಾ ಬಡ್ಡಿ ದರವನ್ನು ನಿಗದಿಪಡಿಸಿದೆ. ಈ ಬಡ್ಡಿ ದರಕ್ಕೆ ಹಣಕಾಸು ಸಚಿವಾಲಯದ ಒಪ್ಪಿಗೆಯ ನಂತರ ಈ ಆದೇಶ ಬಂದಿದೆ. EPFO ಕ್ಷೇತ್ರ ಕಚೇರಿಗಳು ಚಂದಾದಾರರ ಖಾತೆಗಳಿಗೆ ಬಡ್ಡಿಯನ್ನು ಜಮಾ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತವೆ ಎಂದು ಸುತ್ತೋಲೆ ಸೂಚಿಸುತ್ತದೆ.
ಮಾರ್ಚ್ 2022 ರಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2021-22 ರ ಆರ್ಥಿಕ ವರ್ಷಕ್ಕೆ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 8.10 ಕ್ಕೆ ಇಳಿಸಿತು, ಇದು ನಾಲ್ಕು ದಶಕಗಳಲ್ಲಿ ಕಡಿಮೆ ದರವಾಗಿತ್ತು,. 2020-21 ರಲ್ಲಿ ಶೇಕಡಾ 8.5ರಷ್ಟು ಇದ್ದಿದ್ದನ್ನು ಕಡಿಮೆ ಮಾಡಲಾಗಿತ್ತು.
1977-78 ರಿಂದ ಇಪಿಎಫ್ ಬಡ್ಡಿ ದರವು ಶೇ 8 ರಷ್ಟಿತ್ತು. ಇದು ಅತ್ಯಂತ ಕಡಿಮೆ ಬಡ್ಡಿ ದರವಾಗಿ ದಾಖಲಾಗಿದೆ. EPFO ನಿಂದ ನಿರ್ವಹಿಸಲ್ಪಡುವ EPF ಯೋಜನೆಯು ಅತ್ಯಗತ್ಯ ಸಾಮಾಜಿಕ ಭದ್ರತೆ ಮತ್ತು ನಿವೃತ್ತಿ ಪ್ರಯೋಜನ ಕಾರ್ಯಕ್ರಮವಾಗಿದ್ದು, ಉದ್ಯೋಗಿಗಳಿಗೆ ಅವರ ನಿವೃತ್ತಿಯ ನಂತರ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಪ್ರತಿ ತಿಂಗಳು, ಉದ್ಯೋಗಿಯು ತಮ್ಮ ಇಪಿಎಫ್ ಖಾತೆಗೆ ತಮ್ಮ ಗಳಿಕೆಯ ಶೇಕಡಾ 12 ರಷ್ಟು ಕೊಡುಗೆ ನೀಡುತ್ತಾರೆ, ಸಂಪೂರ್ಣ ಕೊಡುಗೆಯನ್ನು ಇಪಿಎಫ್ ಖಾತೆಗೆ ನಿರ್ದೇಶಿಸಲಾಗುತ್ತದೆ. ಉದ್ಯೋಗದಾತರ ಕಡೆಯಿಂದ, ಕೇವಲ 3.67 ಪ್ರತಿಶತವನ್ನು ಇಪಿಎಫ್ ಖಾತೆಗೆ ಠೇವಣಿ ಮಾಡಲಾಗುತ್ತದೆ, ಉಳಿದ 8.33 ಶೇಕಡಾವನ್ನು ನೌಕರರ ಪಿಂಚಣಿ ಯೋಜನೆಗೆ (ಇಪಿಎಸ್) ಹಂಚಲಾಗುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ