ಅನೇಕರು ಮದುವೆ ತಾನು ಕನಸು ಕಂಡಂತೆ ನಡೆಯಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಎಲ್ಲದರಲ್ಲಿಯೂ ವಿಶೇಷ ಹಾಗೂ ವಿಭಿನ್ನತೆಯನ್ನು ಬಯಸುತ್ತಾರೆ. ಹೀಗಿದ್ದವರಿಗಾಗಿಯೇ ಈಗ ಮಾರುಕಟ್ಟೆಯಲ್ಲಿ ಮುತ್ತು ಹಾಗೂ ರತ್ನಗಳಿಂದ ಮಾಡಿರುವ ಬೆಳ್ಳಿ ಚಪ್ಪಲಿಗಳು ಲಗ್ಗೆ ಇಟ್ಟಿವೆ..
ಬಹುತೇಕರು ಮದುವೆಗಾಗಿಯೇ ಹೊಸ ವಿನ್ಯಾಸದ ಚಪ್ಪಲಿಗಳನ್ನು ಖರೀದಿಸುತ್ತಾರೆ. ಇದೀಗ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಬೆಳ್ಳಿಯ ಚಪ್ಪಲಿಗಳು ಲಗ್ಗೆ ಇಟ್ಟಿವೆ. ಲಕ್ನೋದಲ್ಲಿ ಆಭರಣ ವ್ಯಾಪಾರಿಯೊಬ್ಬರು 300 ರಿಂದ 500 ಗ್ರಾಂ ಬೆಳ್ಳಿಯಿಂದ ಚಪ್ಪಲಿ ತಯಾರಿಸಿದ್ದಾರೆ. ಈ ಬೆಳ್ಳಿ ಚಪ್ಪಲಿಗಳ ಬೆಲೆ, ಚಪ್ಪಲಿಗಳ ವಿನ್ಯಾಸಕ್ಕೆ ಬಳಸುವ ಮುತ್ತು, ರತ್ನಗಳ ಆಧಾರದ ಮೇಲೆ ಅವುಗಳ ಬೆಲೆ ನಿಗದಿಯಾಗುತ್ತದೆ. ಈ ಚಪ್ಪಲಿಗಳ ಬೆಲೆ 25,000 ರೂ.ಗಳಿಂದ ಆರಂಭವಾಗುತ್ತದೆ ಎಂದು ವ್ಯಾಪಾರಸ್ಥರು ಹೇಳಿದ್ದಾರೆ.
ವಧು ಮತ್ತು ವರರಿಗೆ ವಿಭಿನ್ನ ವಿನ್ಯಾಸಗಳೊಂದಿಗೆ ಸ್ಯಾಂಡಲ್‌ಗಳನ್ನು ತಯಾರಿಸಲಾಗುತ್ತದೆ. ಕೆಲವರು ಅವರ ಅಂಗಡಿಗೆ ಬಂದು ಬೆಳ್ಳಿ ಚಪ್ಪಲಿ ಬಗ್ಗೆ ಕೇಳುತ್ತಾರೆ. ಹೀಗಾಗಿ ಮದುವೆ ಸೀಸನ್ನಿಗೆ ವಧು-ವರರಿಗೆ ಚಪ್ಪಲಿ ತಯಾರಿಸಿ ಆರ್ಡರ್ ಪಡೆದು ಅವರ ಅಳತೆಗೆ ತಕ್ಕಂತೆ ತಯಾರಿಸುತ್ತಿದ್ದೇವೆ. ಚಿಕ್ಕ ಮಕ್ಕಳಿಗೂ ಬೆಳ್ಳಿಯ ಚಪ್ಪಲಿಯನ್ನು ತಯಾರಿಸುತ್ತಿದ್ದೇವೆ ಎಂದು ಆಭರಣ ಮಳಿಗೆಯ ಮಾಲೀಕರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವರನು ಶೇರ್ವಾನಿಗಳನ್ನು ಧರಿಸುವುದು ಸಾಮಾನ್ಯವಾಗಿದೆ. ವರ ಧರಿಸುವ ಬೆಲ್ಟ್ ಗಳನ್ನೂ ಬೆಳ್ಳಿಯಿಂದಲೇ ಶೇರ್ವಾನಿಗೆ ಸೂಕ್ತ ಮಾದರಿಯಲ್ಲಿ ಮಾಡಲಾಗಿದೆ. ಇವುಗಳನ್ನು ಚಪ್ಪಲಿಗಳ ಮೇಲೆ ಮುತ್ತುಗಳು ಮತ್ತು ರತ್ನಗಳಿಂದ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಆಕರ್ಷಕವಾಗಿ ಕಾಣುವುದರಿಂದ ಅನೇಕರು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ ಎನ್ನುತ್ತಾರೆ ಅಂಗಡಿ ಮಾಲೀಕರು. 100 ರಿಂದ 500 ಗ್ರಾಂ ತೂಕದ ಈ ಪಾದರಕ್ಷೆಗಳ ಬೆಲೆ ರೂ. 25 ಸಾವಿರ ರೂ.ಗಳಿಂದ ಆರಂಭವಾಗಿ ವಿವಿಧ ಬೆಲೆಗಳಲ್ಲಿ ಮಾರಾಟವಾಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ