ಅಮೆರಿಕದ ರಸ್ತೆಯಲ್ಲಿ ಹಸಿವಿನಿಂದ ಬಳಲುತ್ತಿರುವ ಹೈದರಾಬಾದ್ ಯುವತಿ : ವಿದೇಶಾಂಗ ಸಚಿವ ಜೈಶಂಕರಗೆ ತಾಯಿ ಮೊರೆ

ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕಕ್ಕೆ ತೆರಳಿದ್ದ ಹೈದರಾಬಾದ್ ಯುವತಿಯೊಬ್ಬಳು ಚಿಕಾಗೋದ ರಸ್ತೆಯಲ್ಲಿ ಹಸಿವಿನಿಂದ ಬಳಲುತ್ತಿರುವುದು ಕಂಡುಬಂದಿದೆ. ಆಕೆಯ ಸಾಮಾನು-ಸರಂಜಾಮುಗಳು ಕಳ್ಳತನವಾಗಿದೆ ಎಂದು ವರದಿಯಾಗಿದೆ.
ಸೈಯದಾ ಲುಲು ಮಿನ್ಹಾಜ್ ಜೈದಿ ಅವರ ತಾಯಿ ಸೈಯದಾ ವಹಾಜ್ ಫಾತಿಮಾ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ಮಧ್ಯಪ್ರವೇಶಿಸಿ ತನ್ನ ಮಗಳನ್ನು ಭಾರತಕ್ಕೆ ಕರೆತರಬೇಕು ಎಂದು ಮನವಿ ಮಾಡಿದ್ದಾರೆ.
ಭಾರತ ರಾಷ್ಟ್ರ ಸಮಿತಿಯ ನಾಯಕ ಖಲೀಕುರ್ ರೆಹಮಾನ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ನಂತರ ಪತ್ರವು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಸಣಕಲಾಗಿರುವ ಯುವತಿ ಸೈಯದಾ ಲುಲು ಮಿನ್ಹಾಜ್ ಜೈದಿ ಮಿನ್ಹಾಜ್ ಒಬ್ಬ ವ್ಯಕ್ತಿಗೆ ಧನ್ಯವಾದ ಹೇಳುವ ವೀಡಿಯೊವನ್ನು ಸಹ ಅವರು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ತನಗಾಗಿ ಆಹಾರ ತಂದು ಕೊಟ್ಟಿದ್ದಕ್ಕಾಗಿ ಅವರು ಧನ್ಯವಾದ ಹೇಳಿದ್ದಾರೆ.

ಜೈ ಶಂಕರ ಅವರಿಗೆ ಬರೆದಿರುವ ಪತ್ರದಲ್ಲಿ, ತಾಯಿ ತನ್ನ ಮಗಳ ಸಂಕಟವನ್ನು ವಿವರಿಸಿದ್ದಾರೆ. ತೆಲಂಗಾಣದ ಮೌಲಾ ಅಲಿ ನಿವಾಸಿಯಾಗಿರುವ ನನ್ನ ಮಗಳು ಸೈಯದಾ ಲುಲು ಮಿನ್ಹಾಜ್ ಜೈದಿ, ಆಗಸ್ಟ್ 2021 ರಲ್ಲಿ ಡೆಟ್ರಾಯಿಟ್‌ನ TRINE ವಿಶ್ವವಿದ್ಯಾನಿಲಯದಲ್ಲಿ ತನ್ನ ಸ್ನಾತಕೋತ್ತರ ಪದವಿಯನ್ನು ಪಡೆಯಲು ಹೋಗಿದ್ದಳು ಮತ್ತು ನಮ್ಮೊಂದಿಗೆ ಸಂಪರ್ಕದಲ್ಲಿದ್ದಳು. ಆದರೆ, ಕಳೆದ ಎರಡು ತಿಂಗಳಿಂದ ಆಕೆ ನನ್ನ ಸಂಪರ್ಕದಲ್ಲಿ ಇರಲಿಲ್ಲ, ಇತ್ತೀಚೆಗೆ ಇಬ್ಬರು ಹೈದರಾಬಾದ್ ಯುವಕರ ಮೂಲಕ ನನ್ನ ಮಗಳು ಖಿನ್ನತೆಗೆ ಒಳಗಾಗಿದ್ದಾಳೆ ಮತ್ತು ಆಕೆಯ ಸಾಮಗ್ರಿಗಳನ್ನು ಯಾರೋ ಕದ್ದೊಯ್ದಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ಅಮೆರಿಕ ಚಿಕಾಗೋ ರಸ್ತೆಯಲ್ಲಿ ನನ್ನ ಮಗಳು ಕಾಣಿಸಿಕೊಂಡಿದ್ದಾಳೆ ಎಂದು ತಾಯಿ ಪತ್ರದಲ್ಲಿ ಹೇಳಿದ್ದಾರೆ.
ವಾಷಿಂಗ್ಟನ್ ಡಿಸಿ ಯಲ್ಲಿನ ಭಾರತದ ರಾಯಭಾರ ಕಚೇರಿ ಮತ್ತು ಚಿಕಾಗೋದಲ್ಲಿರುವ ಭಾರತೀಯ ದೂತಾವಾಸವು ಮಧ್ಯಪ್ರವೇಶಿಸಿ ತನ್ನ ಮಗಳನ್ನು ಮರಳಿ ಕರೆತರರಬೇಕು ಎಂದು ವಿನಂತಿಸುತ್ತೇನೆ. ಮೊಹಮ್ಮದ್ ಮಿನ್ಹಾಜ್ ಅಖ್ತರ್ ಸಹಾಯದಿಂದ ತನ್ನ ಮಗಳನ್ನು ಪತ್ತೆಹಚ್ಚಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಉದ್ಯಮಿ ನೀರವ್ ಮೋದಿ ಸಹೋದರ ನೇಹಲ್ ಮೋದಿ ಅಮೆರಿಕದಲ್ಲಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement