ಅವಳು ನಮ್ಮ ಪಾಲಿಗೆ ಸತ್ತಿದ್ದಾಳೆ.. : ಪಾಕಿಸ್ತಾನಕ್ಕೆ ಹೋಗಿ ತನ್ನ ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾದ ಭಾರತದ ವಿವಾಹಿತ ಮಹಿಳೆಯ ತಂದೆ

ಗ್ವಾಲಿಯರ್‌ : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ ಹೋಗಿ ಅಲ್ಲಿ ತನ್ನ ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾದ ವಿವಾಹಿತ ಭಾರತೀಯ ಮಹಿಳೆಯ ತಂದೆ, ತನ್ನ ಮಗಳು ವಾಪಸ್‌ ಭಾರತಕ್ಕೆ ಬಂದರೂ ತನ್ನ ಕುಟುಂಬಕ್ಕೆ ಅವಳು ಸತ್ತಂತೆ ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಬೌನಾ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಕೆಯ ತಂದೆ ಗಯಾ ಪ್ರಸಾದ ಥಾಮಸ್ ಅವರು, ತನ್ನ ಇಬ್ಬರು ಮಕ್ಕಳ ಭವಿಷ್ಯವನ್ನು ಅವಳು ಹಾಳುಮಾಡಿದ್ದಾಳೆ ಎಂದು ಹೇಳಿದ್ದಾರೆ.
“ಅವಳು ತನ್ನ ಇಬ್ಬರು ಮಕ್ಕಳನ್ನು ಮತ್ತು ಗಂಡನನ್ನು ಬಿಟ್ಟು ಓಡಿಹೋದ ರೀತಿ…. ಅವಳು ತನ್ನ ಮಕ್ಕಳ ಬಗ್ಗೆ ಯೋಚಿಸಲಿಲ್ಲ. ಹೀಗೆ ಮಾಡಬೇಕೆಂದಿದ್ದರೆ ಮೊದಲು ಗಂಡನಿಗೆ ವಿಚ್ಛೇದನ ಕೊಡಬೇಕಿತ್ತು. ಅವಳು ನಮ್ಮ ಪಾಲಿಗೆ ಸತ್ತಂತೆ ಎಂದು ಹೇಳಿದರು.

ಆಕೆ ಇಸ್ಲಾಂಗೆ ಮತಾಂತರಗೊಂಡ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು. “ಅವಳು ತನ್ನ ಮಕ್ಕಳ ಮತ್ತು ಗಂಡನ ಭವಿಷ್ಯವನ್ನು ಹಾಳು ಮಾಡಿದ್ದಾಳೆ. ಅವಳ ಮಕ್ಕಳಾದ 13 ವರ್ಷದ ಹುಡುಗಿ ಮತ್ತು ಐದು ವರ್ಷದ ಹುಡುಗನನ್ನು ಯಾರು ನೋಡಿಕೊಳ್ಳುತ್ತಾರೆ. .ನಾವು ಅದನ್ನು ಮಾಡಬೇಕಾಗಿದೆ ಎಂದು ಥಾಮಸ್ ಹೇಳಿದರು. ಆಕೆಯನ್ನು ಮರಳಿ ಕರೆತರುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡುತ್ತೀರಾ ಎಂಬ ಪ್ರಶ್ನೆಗೆ, ಥಾಮಸ್ ಅವರು ತಾನು ಅಂತಹ ಕೆಲಸವನ್ನು ಮಾಡುವುದಿಲ್ಲ ಎಂದು ಹೇಳಿದರು.

ಪ್ರಮುಖ ಸುದ್ದಿ :-   'ಹಾವಿನ ತಲೆಗಾಗಿ ಹೋಗಿದ್ದೇವೆ....': ಪಾಕ್ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯ ಬಗ್ಗೆ

ಅಂಜು ತನ್ನೊಂದಿಗೆ ಮಾತನಾಡಿಲ್ಲ ಮತ್ತು ಅವಳು ತನ್ನ ತಾಯಿಯೊಂದಿಗೆ ಮಾತ್ರ ಮಾತನಾಡಿದ್ದಾಳೆ. ಅವಳು ಪಾಸ್ಪೋರ್ಟ್ ಹೇಗೆ ಪಡೆದುಕೊಂಡಳು, ಯಾವಾಗ ವೀಸಾ ಸಿಕ್ಕಿತು ಎಂದು ನನಗೆ ತಿಳಿದಿಲ್ಲ” ಎಂದು ಅವರು ಹೇಳಿದರು.
ಒಂದು ವರದಿಯ ಪ್ರಕಾರ, ಅಂಜು ಇಸ್ಲಾಂಗೆ ಮತಾಂತರಗೊಂಡ ನಂತರ ಪಾಕಿಸ್ತಾನದಲ್ಲಿ ತನ್ನ ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾಗಿದ್ದಾಳೆ ಮತ್ತು ಈಗ ಫಾತಿಮಾ ಎಂಬ ಹೊಸ ಹೆಸರನ್ನು ಹೊಂದಿದ್ದಾಳೆ.
34 ವರ್ಷದ ಭಾರತೀಯ ಮಹಿಳೆ ತನ್ನ 29 ವರ್ಷದ ಪಾಕಿಸ್ತಾನಿ ಸ್ನೇಹಿತ ನಸ್ರುಲ್ಲಾ ಅವರ ಖೈಬರ್ ಪಖ್ತುಂಖ್ವಾದ ಅಪ್ಪರ್ ದಿರ್ ಜಿಲ್ಲೆಯ ಮನೆಯಲ್ಲಿ ತಂಗಿದ್ದಾಳೆ.

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement