ಕೋಮು ಗಲಭೆ ಪ್ರಕರಣಗಳಲ್ಲಿ “ಅಮಾಯಕರʼ ಮೇಲಿನ ಕೇಸ್‌ ಮರು ಪರಿಶೀಲಿಸಿ ಹಿಂಪಡೆಯುವಂತೆ ಶಿಫಾರಸು: ಬಿಜೆಪಿ ಆರೋಪ, ಗೃಹ ಸಚಿವರ ಸ್ಪಷ್ಟನೆ

ಬೆಂಗಳೂರು: ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ ಒಂದು’ ಕೋಮಿನ ಕಮ್ಯುನಲ್ ಅಪರಾಧಿಗಳಿಗೆ ನಮ್ಮಲ್ಲಿ ಕ್ಲೀನ್ ಚಿಟ್ ನೀಡಲಾಗುವುದು ಎಂದು ಬೋರ್ಡ್ ಹಾಕಿಕೊಂಡು ಡಾ. ಪರಮೇಶ್ವರ ಅವರು ಕಾರ್ಯನಿರ್ವಹಿಸುತ್ತಿರುವಂತಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿದೆಯೇ ಎಂದು ಗೃಹ ಸಚಿವರು ಸರ್ಕಾರದ ಪ್ರಧಾನಿ ಕಾರ್ಯದರ್ಶಿಗೆ ಕಳುಹಿಸಿದ ಟಿಪ್ಪಣಿಗೆ ಬಗ್ಗೆ ಬಿಜೆಪಿ ಆಕ್ಷೇಪಿಸಿದೆ. ಈ ಸರ್ಕಾರ ಜಿಹಾದಿಗಳ, ಪಿಎಫ್ಐ ಭಯೋತ್ಪಾದಕರ ತಾಳಕ್ಕೆ ಕುಣಿಯುತ್ತಿರುವುದು ಈ ಪತ್ರ ಋುಜುವಾತು ಪಡಿಸುತ್ತಿದೆ. ಈ ಸರ್ಕಾರದ ಎಲ್ಲಾ ಬಗೆಯ ಹಿಂದೂವಿರೋಧಿ ನೀತಿ-ನಿಲುವುಗಳ ವಿರುದ್ಧ ತನ್ನ ಹೋರಾಟ ಮುಂದುವರೆಸಲಿದೆ ಎಂದು ಬಿಜೆಪಿ ಹೇಳಿದೆ.

ಡಿಜೆ ಹಳ್ಳಿ, ಕೆಜೆಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಕೆಲವಡೆ ನಡೆದಿರುವ ಗಲಭೆ ಹಾಗೂ ಪ್ರತಿಭಟನೆಗಳಲ್ಲಿ ಅಮಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಲಾಗಿದೆ. ಇಂತಹ ಪ್ರಕರಣಗಳನ್ನು ಕೈ ಬಿಡಬೇಕೆಂದು ಶಾಸಕ ತನ್ವೀರ್ ಸೇಠ್ ಪತ್ರದ ಮೂಲಕ ಗೃಹ ಸಚಿವ ಪರಮೇಶ್ವರ್ ಹಾಗೂ ಒಳಾಡಳಿತ ಇಲಾಖೆಗೆ ಮನವಿ ಮಾಡಿ ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದ ನಂತರ ಮನವಿಗೆ ಸ್ಪಂದಿಸಿದ ರಾಜ್ಯದ ಗೃಹ ಸಚಿವ ಡಾ.ಪರಮೇಶ್ವರ ಅವರು, ಈ ಸಂಬಂಧ ಪರಿಶೀಲಿಸಿ ಕ್ರಮಕೈಗೊಳ್ಳಲು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರಿಗೆ ಟಿಪ್ಪಣಿ ಬರೆದಿದ್ದರು.

ಪ್ರಮುಖ ಸುದ್ದಿ :-   ಗೃಹಲಕ್ಷ್ಮಿ ಯೋಜನೆ’ಗೆ ಸೌಲಭ್ಯ ಪಡೆಯಲು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು

ಈ ಆರೋಪಗಳನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ ತಳ್ಳಿಹಾಕಿದ್ದಾರೆ. ಯಾರೋ ಪತ್ರ ಬರೆದ ಕಾರಣಕ್ಕೆ ನಾವು ಕೇಸ್ ಹಿಂಪಡೆಯುವುದಕ್ಕೆ ಆಗುವುದಿಲ್ಲ. ಪ್ರಕರಣದಲ್ಲಿ ಕೆಲವರ ವಿರುದ್ಧ ಸುಳ್ಳು ದೋಷಾರೋಪಣೆ ಮಾಡಲಾಗಿದೆ ಎಂದು ಪತ್ರದಲ್ಲಿ ಕೇಳಿಕೊಳ್ಳಲಾಗಿದೆ. ಹಾಗಾಗಿ, ನಾವು ಆ ಪತ್ರದಲ್ಲಿರುವ ವಿಚಾರವನ್ನು ಪರಿಶೀಲಿಸುವಂತೆ ಟಿಪ್ಪಣಿ ಬರೆದಿದ್ದೇವೆ. ಇದು ಆದೇಶ ಅಲ್ಲ, ಕೇವಲ ಟಿಪ್ಪಣಿ. ನಾವು ಆ ಪತ್ರದಲ್ಲಿರುವ ವಿಚಾರವನ್ನು ಪರಿಶೀಲಿಸುವಂತೆ ಸಂಪುಟ ಉಪ ಸಮಿತಿಗೆ ಒಪ್ಪಿಸಿದ್ದೇವೆ. ಸಮಿತಿ ಸಲ್ಲಿಸುವ ವರದಿಯ ಆಧಾರದಲ್ಲಿ ನಾವು ಸಂಪುಟದಲ್ಲಿ ಚರ್ಚಿಸುತ್ತೇವೆ ಎಂದು ತಿಳಿಸಿದ್ದಾರೆ. ಇದಕ್ಕೆಲ್ಲ ಅದರದ್ದೇ ಆದ ನಿಯಮಗಳಿವೆ. ಯಾವುದೇ ಕೇಸ್ ವಾಪಸ್ ಪಡೆಯುವಾಗ ಸಂಪುಟದಲ್ಲಿ ಚರ್ಚೆಯಾಗಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಹೊನ್ನಾವರದ ಪ್ರಕೃತಿಯ ‘ಮಾಯಾಲೋಕ’ಕ್ಕೆ ಆನಂದ ಮಹೀಂದ್ರಾ ಫಿದಾ ! ಕೇರಳದ ಹಿನ್ನೀರಿನಷ್ಟೇ ಸುಂದರ ಎಂದ ಉದ್ಯಮಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement