ಬಿಜೆಪಿ ಸಂಸದ ಜಿಎಂ ಸಿದ್ದೇಶ್ವರಗೆ ಅಶ್ಲೀಲ ವೀಡಿಯೋ ಕಾಲ್ ಮಾಡಿ ಬ್ಲ್ಯಾಕ್​ಮೇಲ್; ದೂರು ದಾಖಲು

ಬೆಂಗಳೂರು: ದಾವಣಗೆರೆ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ ಅವರಿ​ಗೆ ಅಪರಿಚಿತ ಮಹಿಳೆಯೊಬ್ಬರು ಮೊದಲು ಮೆಸೇಜ್ ಮಾಡಿ ನಂತರ ಬೆತ್ತಲೆಯಾಗಿ ವೀಡಿಯೋ ಕಾಲ್ ಮಾಡಿ ಫೋಟೋ ತೆಗೆದು ಬ್ಲ್ಯಾಕ್​ಮೇಲ್ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಸಂಸದರು ಪೊಲೀಸರಿಗೆ ದೂರು ನೀಡಿದ್ದಾರೆ.
ಜಿ.ಎಂ. ಸಿದ್ದೇಶ್ವರ ಅವರು ಬೆಂಗಳೂರು ನಗರದ ಕಮರ್ಷಿಯಲ್​ ಸ್ಟ್ರೀಟ್ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ಮೆಸೇಜ್​ಗೆ ಆರಂಭದಲ್ಲಿ ಸಂಸದರು ಉತ್ತರ ನೀಡಿರಲಿಲ್ಲ. ನಂತರ ವಿಡಿಯೋ ಹಾಗೂ ಆಡಿಯೋ ಕರೆ ಮಾಡಲಾಗಿದ್ದು, ಬ್ಲ್ಯಾಕ್​ಮೇಲ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಜುಲೈ 20ರಂದು ರಾತ್ರಿ 10:16ಕ್ಕೆ ಮೊದಲ ಬಾರಿಗೆ ಅಪರಿಚಿತ ಸಂಖ್ಯೆಯಿಂದ ಸಂಸದರ ಮೊಬೈಲ್​ಗೆ ಮೆಸೇಜ್​ ಬಂದಿದೆ. ಅದಕ್ಕೆ ಸಿದ್ದೇಶ್ವರ ಅವರು ಅವರು ಪ್ರತಿಕ್ರಿಯೆ ನೀಡಿಲ್ಲ. ಅದಾದ ನಂತರ 10:22ಕ್ಕೆ ವೀಡಿಯೋ ಕಾಲ್ ಬಂದಿದೆ. ಯಾರು? ಏನು ಎಂದು ಪ್ರಶ್ನಿಸುತ್ತಿದ್ದಂತೆಯೇ ಹಿಂದಿಯಲ್ಲಿ ಮಾತನಾಡಿದ್ದು, ಬಳಿಕ ಮತ್ತೆ ರಾತ್ರಿ 1:24ಕ್ಕೆ ಆಡಿಯೋ ಕಾಲ್ ಮಾಡಿ ಮತ್ತದೇ ರೀತಿ ಹಿಂದಿಯಲ್ಲಿ ಮಾತನಾಡಿದ್ದಾರೆ. ಕರೆ ಕಟ್ ಮಾಡಿದ್ದರೂ ಮತ್ತೆ ಮತ್ತೆ ಕಾಲ್ ಮಾಡಿದ್ದ ಅಪರಿಚಿತ ಮಹಿಳೆ, ರಾತ್ರಿ 10:27ಕ್ಕೆ ವಾಟ್ಸಪ್ ವೀಡಿಯೋ ಕಾಲ್ ಮಾಡಿ ಖಾಸಗಿ ಅಂಗ ಪ್ರದರ್ಶನ ಮಾಡಿದ್ದಾರೆ ಎಂದು ಸಂಸದರು ಆರೋಪಿಸಿದ್ದಾರೆ. ಈ ಘಟನೆ ನಡೆದು ಸ್ವಲ್ಪ ಸಮಯದ ನಂತರ ಮತ್ತೆ ಕರೆ ಮಾಡಿ ವಿಡಿಯೋ ರೆಕಾರ್ಡ್ ಅಪ್ಲೋಡ್ ಮಾಡುವುದಾಗಿ ಬೆದರಿಕೆಯೊಡ್ಡಲಾಗಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ಸಂಸದರು ಕರ್ಮಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   41.8 ಡಿಗ್ರಿ ತಲುಪಿದ ಬೆಂಗಳೂರು ತಾಪಮಾನ ; ರಾಜ್ಯದ ಈ ಜಿಲ್ಲೆಗಳಲ್ಲಿ ನಾಲ್ಕೈದು ದಿನ ಬಿಸಿಗಾಳಿ ಮುನ್ನೆಚ್ಚರಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement