ಮದುವೆಗಳಲ್ಲಿ ಸಿನಿಮಾ ​ಹಾಡು ಬಳಕೆ ಮಾಡುವುದು ಕಾಪಿರೈಟ್ ಉಲ್ಲಂಘನೆಯಲ್ಲ; ಕೇಂದ್ರ ಸರ್ಕಾರ

ನವದೆಹಲಿ : ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಬಾಲಿವುಡ್ ಸೇರಿದಂತೆ ಯಾವುದೇ ಸಿನಿಮಾ ಹಾಡುಗಳನ್ನ ಬಳಕೆ ಮಾಡಿದರೆ ಅದು ಕೃತಿಸ್ವಾಮ್ಯದ ಉಲ್ಲಂಘನೆ (Copyright Infringement) ಆಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಯಾವುದೇ ಸಮಾರಂಭಗಳಲ್ಲಿ ಸಿನಿಮಾ ಹಾಡುಗಳನ್ನ ಬಳಕೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಮಾರಂಭಗಳಲ್ಲಿ ಹಿಂದಿ ಸಿನಿಮಾ ಹಾಡುಗಳನ್ನು ಬಳಕೆ ಮಾಡುತ್ತಿರುವ ಕುರಿತಾಗಿ ಮಾಹಿತಿ ಸಂಗ್ರಹಿಸಿ ನೀಡಿದ್ದ ದೂರುಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ದೇಶನ ನೀಡಿದೆ.
ಮದುವೆ, ಹಬ್ಬದ ಸಮಾರಂಭಗಳಲ್ಲಿ ಸಿನಿಮಾ ಹಾಡುಗಳನ್ನು ಹಾಕಿಕುತ್ತಿರುವ ಸಂಬಂಧ ಹಲವು ಸಂಸ್ಥೆಗಳು ದೂರು ನೀಡಿದ್ದವು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಯಾವುದೇ ಕೃತಿಯನ್ನು ಪೂರ್ವಾನುಮತಿ ಇಲ್ಲದೆ ಬಳಕೆ ಮಾಡಿಕೊಳ್ಳುವುದು ಕಾಪಿರೈಟ್ ಕಾಯ್ದೆಯ ಸೆಕ್ಷನ್ 52 (1) ಅ ಅಡಿ ಅಪರಾಧ ಆಗುತ್ತದೆ. ಆದರೆ ಇದೇ ಕಾಯ್ದೆಯ ಅಡಿ ಯಾವುದೇ ಧಾರ್ಮಿಕ ಕಾರ್ಯಕ್ರಮ ಅಥವಾ ಅಧಿಕೃತ ಸಮಾರಂಭಗಳಲ್ಲಿ ಯಾವುದೇ ಸಂಗೀತವನ್ನು ಬಳಕೆ ಮಾಡಿಕೊಳ್ಳುವುದು ಕೃತಿಸ್ವಾಮಿ ಹಕ್ಕು ಉಲ್ಲಂಘನೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರಮುಖ ಸುದ್ದಿ :-   ಇದೆಂಥ ಪವಾಡ...| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ...! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

 

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement