ಬೆಂಗಳೂರು: ಮಹಿಳಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ‘ಶಕ್ತಿ ಯೋಜನೆ’ ಪರಿಣಾಮದ ಕಾರಣ ಪ್ರಯಾಣಿಕರಿಗೆ ಒಪ್ಪಂದದ ಮೇರೆಗೆ ಬಸ್‌ಗಳನ್ನು ಒದಗಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ವು ನಿಗದಪಡಿಸಿದ್ದ ದರದಲ್ಲಿ ಹೆಚ್ಚಳ ಮಾಡಿದೆ. ಹೊಸ ದರಗಳು ಆಗಸ್ಟ್ 1ರಿಂದ ಜಾರಿಗೆ ಬರಲಿವೆ.
‘ಇತ್ತೀಚಿನ ದಿನಗಳಲ್ಲಿ ಶಕ್ತಿ ಯೋಜನೆಯ ಅನುಷ್ಠಾನದ ಬಳಿಕ ಸಾಮಾನ್ಯ, ವೇಗದೂತ ಹಾಗೂ ನಗರ ಸಾರಿಗೆ ವಾಹನಗಳಲ್ಲಿ ಬೇಡಿಕೆ ಹೆಚ್ಚಾಗಿರುವುದನ್ನು ಹಾಗೂ ನಿಗಮದ ವಾಹನಗಳ ಕಾರ್ಯಾಚರಣಾ ವೆಚ್ಚ ಹೆಚ್ಚಳವಾಗಿರುವುದನ್ನು ಪರಿಗಣಿಸಿ ಸಾಂದರ್ಭಿಕ ಒಪ್ಪಂದದ ದರಗಳನ್ನು ಪರಿಷ್ಕರಿಸಲು ತೀರ್ಮಾನಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದಾಗ್ಯೂ ಈ ಆದೇಶಕ್ಕೂ ಮುನ್ನ ಬುಕ್ಕಿಂಗ್ ಮಾಡಿರುವ ಒಪ್ಪಂದದ ಬಸ್ ಗಳಿಗೆ ಹಳೆಯ ದರ ಮುಂದುವರಿಯಲಿದೆ.
ಕರ್ನಾಟಕ ಸಾರಿಗೆ, ರಾಜಹಂಸ ಎಕ್ಸಿಕ್ಯುಟಿವ್, ರಾಜಹಂಸ, ರಾಜಹಂಸ ಮೈಸೂರು ನಗರ ಸಾರಿಗೆ ಸೆಮಿ ಲೋಫ್ಲೋರ್, ಮಿನಿ ಬಸ್ಸು, ನಾನ್ ಎಸಿ ಸ್ಲೀಪರ್ ವರ್ಗದ ಬಸ್ಸುಗಳ ಸಾಂದರ್ಭಿಕ ಒಪ್ಪಂದದ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಅಲ್ಲದೆ, ಮೈಸೂರು ನಗರದಲ್ಲಿ ಗಂಟೆಗಳ ಆಧಾರದಲ್ಲಿ ವಾಹನಗಳನ್ನು ಒದಗಿಸುವ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ.
ಪರಿಷ್ಕೃತ ದರಗಳು 1-8-2023ರಿಂದ ಜಾರಿಗೆ ಬರಲಿವೆ. ಇನ್ನುಳಿದಂತೆ ಇತರೆ ನಿಯಮಾವಳಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ಸಾರಿಗೆ, ರಾಜಹಂಸ ಎಕ್ಸಿಕ್ಯುಟಿವ್, ರಾಜಹಂಸ, ರಾಜಹಂಸ (12 ಮೀಟರ್ ಚಾಸಿಸ್) ಬಸ್ಸುಗಳಿಗೆ ಒಂದು ದಿನಕ್ಕೆ ಕನಿಷ್ಠ 350 ಕಿಮೀ ಸಂಚಾರದ ಲೆಕ್ಕ ಹಾಕಲಾಗುವುದು. ಮೈಸೂರು ನಗರ ಸಾರಿಗೆ ಸೆಮಿ ಲೋಫ್ಲೋರ್, ಮಿನಿ ಬಸ್‌ಗೆ ಒಂದು ದಿನಕ್ಕೆ 300 ಕಿಮೀ ಸಂಚಾರದ ಲೆಕ್ಕ, ನಾನ್ ಎಸಿ ಸ್ಲೀಪರ್‌ಗೆ 400 ಕಿಮೀ ಕನಿಷ್ಠ ಸಂಚಾರದ ಷರತ್ತು ವಿಧಿಸಲಾಗಿದೆ.
ಯಾವ ಬಸ್ಸಿಗೆ ಎಷ್ಟು ದರ..?
ಕರ್ನಾಟಕ ಸಾರಿಗೆ:
55/47/49 ಆಸನಗಳ ಕರ್ನಾಟಕ ಸಾರಿಗೆಗೆ ರಾಜ್ಯದ ಒಳಗೆ ಸಂಚರಿಸಲು ಪ್ರತಿ ಕಿಮೀಗೆ 47 ರೂಪಾಯಿ, ಅಂತಾರಾಜ್ಯ ಸಂಚಾರಕ್ಕಾದರೆ 50 ರೂ.ನೀಡಬೇಕು.
ರಾಜಹಂಸ ಎಕ್ಸಿಕ್ಯುಟಿವ್:
36 ಆಸನಗಳ ರಾಜಹಂಸ ಎಕ್ಸಿಕ್ಯುಟಿವ್ ಬಸ್‌ಗೆ ರಾಜ್ಯದ ಒಳಗಿನ ಸಂಚಾರಕ್ಕೆ ಪ್ರತಿ ಕಿಮೀಗೆ 48 ರೂಪಾಯಿ, ಹೊರರಾಜ್ಯದ ಸಂಚಾರವಾದರೆ 53 ರೂಪಾಯಿ ನೀಡಬೇಕಾಗುತ್ತದೆ.
ರಾಜಹಂಸ:
39 ಆಸನಗಳ ರಾಜಹಂಸ ಎಕ್ಸಿಕ್ಯುಟಿವ್ ಬಸ್‌ಗೆ ರಾಜ್ಯದ ಒಳಗೆ ಸಂಚರಿಸಲು ಪ್ರತಿ ಕಿಮೀಗೆ 51 ರೂ., ಹೊರಾಜ್ಯ ಸಂಚಾರವಾದರೆ 55 ರೂ.
ರಾಜಹಂಸ (12 ಮೀಟರ್ ಚಾಸಿಸ್):
44 ಆಸನಗಳ ರಾಜಹಂಸ (12 ಮೀಟರ್ ಚಾಸಿಸ್) ಬಸ್‌ಗೆ ರಾಜ್ಯದೊಳಗೆ ಸಂಚರಿಸಲು ಪ್ರತಿ ಕಿಮೀಗೆ 53 ರೂ., ಅಂತಾರಾಜ್ಯ ಸಂಚಾರಕ್ಕೆ 57 ರೂ.
ಮೈಸೂರು ನಗರ ಸಾರಿಗೆ ಸೆಮಿ ಲೋಫ್ಲೋರ್: 42 ಆಸನಗಳ ಮೈಸೂರು ನಗರ ಸಾರಿಗೆ ಲೋಫ್ಲೋರ್ ಬಸ್‌ಗೆ ರಾಜ್ಯದ ಒಳಗೆ ಸಂಚರಿಸಲು ಪ್ರತಿ ಕಿಮೀಗೆ 45 ರೂ.
ಮಿನಿ ಬಸ್ಸು: 30 ಆಸನಗಳ ಮಿನಿ ಬಸ್‌ಗೆ ರಾಜ್ಯದ ಒಳಗೆ ಸಂಚರಿಸಲು ಪ್ರತಿ ಕಿಮೀಗೆ 40 ರೂ. ನೀಡಬೇಕು.
ನಾನ್ ಎಸಿ ಸ್ಲೀಪರ್: 32 ಆಸನಗಳ ನಾನ್ ಎಸಿ ಸ್ಲೀಪರ್ ಬಸ್‌ಗೆ ರಾಜ್ಯದ ಒಳಗೆ ಸಂಚರಿಸಲು ಪ್ರತಿ ಕಿಮೀಗೆ 55 ರೂಪಾಯಿ, ಅಂತಾರಾಜ್ಯಕ್ಕೆ ಸಂಚಾರಕ್ಕೆ 60 ರೂ.
ನಿಮ್ಮ ಕಾಮೆಂಟ್ ಬರೆಯಿರಿ