ಸಿಂಗಾಪುರದ 7 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ

ಶ್ರೀಹರಿಕೋಟಾ : ಇತ್ತೀಚಿಗಷ್ಟೆ ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವ ಇಸ್ರೋ, ಸಿಂಗಾಪುರದ ಏಳು ಉಪಗ್ರಹಗಳನ್ನು ಪಿಎಸ್​ಎಲ್‌ವಿ- ಸಿ56 ರಾಕೆಟ್ ಮೂಲಕ ಇಂದು, ಭಾನುವಾರ ಬೆಳಿಗ್ಗೆ 6:30ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಿದೆ.
ಗಗನಕ್ಕೆ ಹಾರಿದ ಏಳು ಉಪಗ್ರಹಗಳಲ್ಲಿ ಇಸ್ರೇಲ್​​ ವಿಜ್ಞಾನಿಗಳು ಸಿದ್ಧಪಡಿಸಿರುವ ಡಿಎಸ್​​-ಸಿಂಥೆಟಿಕ್​ ಅಪೆರ್ಚರ್​ ಏರೋಸ್ಪೇಸ್​​ ಎಂಬ ಉಪಗ್ರಹ 360 ಕೆ.ಜಿ ತೂಕವಿದೆ. ಈ ಉಪಗ್ರಹಗಳು ಎಂತಹ ಹವಾಮಾನವಿದ್ದಾಗಲೂ ಚಿತ್ರಗಳನ್ನು ತೆಗೆಯುವ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಸಿಂಗಾಪುರ ರಕ್ಷಣಾ ಇಲಾಖೆ ತಯಾರಿಸಿರುವ ಮೂರು ಉಪಗ್ರಹಗಳು ಆಕಾಶಕ್ಕೆ ಹಾರಿವೆ. ಇದರಲ್ಲಿ ಸ್ವಯಂಚಾಲಿತ ಕಾರ್ ಚಾಲನೆಗೆ ತಾಂತ್ರಿಕ ಸಹಾಯ ಒದಗಿಸುವ ಉಪಗ್ರಹಗಹವೂ ಇದೆ.
ಇಸ್ರೋದ ನ್ಯೂಸ್ಪೇಸ್ ಇಂಡಿಯಾ ಯೋಜನೆಯಡಿ ಈ ಉಪಗ್ರಹಗಳು ಉಡಾವಣೆಯಾಗಿದ್ದು, ಈ ಯೋಜನೆಯಡಿ ಖಾಸಗಿಯವರಿಗೂ ಉಪಗ್ರಹ ಉಡಾವಣೆಗೆ ಅವಕಾಶ ನೀಡಲಾಗಿದೆ. ವೆಲೊಕ್ಸ್​​-ಎಮ್, ಆರ್ಕೇಡ್​​ ಅಟ್ಮಾಸ್ಫಿಯರಿಕ್​ ಕಪ್ಲಿಂಗ್​ ಆಂಡ್​ ಡೈನಾಮಿಕ್ಸ್​ ಎಕ್ಸಪ್ಲೋರರ್​ , ಸ್ಕೂಬ್​-2, ಗೆಲೇಸಿಯ-2, ಒಆರ್​ಬಿ12-ಸ್ಟ್ರೈಡರ್, ನೂಲಯನ್​ ಎಂಬ ಹೆಸರಿನ ಉಪಗ್ರಹಗಳನ್ನು ಪಿಎಸ್​ಎಲ್‌ವಿ- ಸಿ56 ರಾಕೆಟ್ ಬಾಹ್ಯಾಕಾಶಕ್ಕೆ ಹೊತ್ತೊಯ್ದಿದೆ.

ಪ್ರಮುಖ ಸುದ್ದಿ :-   ರಾಜ್ ಠಾಕ್ರೆ ಸಂಕಲ್ಪ, ಉದ್ಧವರಿಂದ ದೊಡ್ಡ ಸುಳಿವು : 20 ವರ್ಷಗಳ ನಂತರ ಠಾಕ್ರೆ ಸಹೋದರರ ಪುನರ್ಮಿಲನ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement