ಬೆಂಗಳೂರು: ಇಂದಿನಿಂದ ರಾಜ್ಯದಲ್ಲಿ ಕೆಎಂಎಫ್ ನಂದಿನಿ ಹಾಲು ಹಾಗೂ ಮೊಸರಿನ ದರದಲ್ಲಿ ಹೆಚ್ಚಳವಾಗಿದೆ. ನಂದಿನಿ ಹಾಲು ಪ್ರತೀ ಲೀಟರ್ ಗೆ ಹಾಗೂ ಮೊಸರಿನ ದರ ಪ್ರತಿ ಕೆಜಿಗೆ 3 ರೂಪಾಯಿ ಏರಿಕೆ ಯಾಗಿದ್ದು, ಆಗಸ್ಟ್ 1 ರಿಂದಲೇ ಈ ದರ ಅನ್ವಯವಾಗಲಿದೆ ಎಂದು ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.
ಅರ್ಧ ಲೀಟರ್ ಹಾಲಿಗೆ 10 ಎಂಎಲ್ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ 22 ರೂ.ಗಳಂತೆ ಮಾರಾಟ ಮಾಡಲಾಗುತ್ತದೆ ಎಂದು ಕೆಎಂಎಫ್ ತಿಳಿಸಿದೆ.
ಕಳೆದ ಜುಲೈ 21 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ಹಾಲಿನ ಪರಿಷ್ಕೃತ ದರ
ಟೋನ್ಡ್ ಹಾಲು (ಹಳದಿ) 39 ರೂ. ಇದ್ದಿದ್ದು ಈಗ 42 ರೂ.
ಹೋಮೋಜಿನೈಸ್ಡ್ ಟೋನ್ಡ್ (ನೀಲಿ) 40 ರೂ. ಇದ್ದಿದ್ದು ಈಗ 43 ರೂ.
ಹಸುವಿನ ಹಾಲು(ಹಸಿರು) 43 ರೂ. ಇದ್ದಿದ್ದು ಈಗ 46 ರೂ.
ಶುಭಂ (ಕೇಸರಿ)/ಸ್ಪೆಷಲ್ ಹಾಲು 45 ರೂ. ಇದ್ದಿದ್ದು ಈಗ 48 ರೂ.
ಮೊಸರು, ಪ್ರತಿ ಕೆಜಿಗೆ 47 ರೂ. ಇದ್ದಿದ್ದು ಈಗ 50 ರೂ.
ಮಜ್ಜಿಗೆ, ಪ್ರತಿ 200 ಮಿಲಿ ಪೊಟ್ಟಣಕ್ಕೆ 8 ರೂ. ಇದ್ದಿದ್ದು ಈಗ 9 ರೂ.
ನಿಮ್ಮ ಕಾಮೆಂಟ್ ಬರೆಯಿರಿ