19-ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಇಳಿಕೆ….

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ದೇಶಾದ್ಯಂತ 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರವನ್ನು ಕಡಿತಗೊಳಿಸಿವೆ. ದೆಹಲಿಯಲ್ಲಿ 100 ರೂಪಾಯಿ ಸಮೀಪ ಇಳಿಕೆಯಾಗಿದೆ. ಅದೇ ಸಮಯದಲ್ಲಿ, ಇತರ ಮಹಾನಗರಗಳಲ್ಲಿ ಸುಮಾರು 93 ರೂಪಾಯಿಗಳ ಕಡಿತವನ್ನು ಮಾಡಲಾಗಿದೆ.
ಈಗ ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ 1680 ರೂ.ಗಳಿಗೆ ಲಭ್ಯವಿರುತ್ತದೆ, ಇದುವರೆಗೆ 1780 ರೂ.ಗಳ ದರವಿತ್ತು. ಈ ಬೆಲೆಗಳು 1 ಆಗಸ್ಟ್ 2023 ರಿಂದ ಅಂದರೆ ಇಂದಿನಿಂದ ಜಾರಿಗೆ ಬಂದಿವೆ.
ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ 1895.50 ರೂ ಬದಲಿಗೆ 1802.50 ರೂ.ಗೆ ಲಭ್ಯವಿರುತ್ತದೆ. ಮುಂಬೈನಲ್ಲಿ 1733.50 ರೂ.ಗೆ ಬದಲಾಗಿ ಈಗ 19 ಕೆಜಿ ಗ್ಯಾಸ್ ಸಿಲಿಂಡರ್ 1640.50 ರೂ.ಗೆ ಲಭ್ಯವಾಗಲಿದೆ. ಚೆನ್ನೈನಲ್ಲಿ 1945 ರೂ.ಗಳಿಗೆ ಲಭ್ಯವಿರುವ ಸಿಲಿಂಡರ್ ಈಗ 1852.50 ರೂ. (ರೂ. 92.50 ಇಳಿಕೆ) ಆಗಿದೆ. ಗಮನಾರ್ಹ ಅಂಶವೆಂದರೆ ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 93 ರೂಪಾಯಿ ಇಳಿಕೆಯಾಗಿದೆ.
19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ದರವನ್ನು ಈ ವರ್ಷ ಜುಲೈ 4 ರಂದು ಕೊನೆಯದಾಗಿ ಪರಿಷ್ಕರಿಸಲಾಗಿತ್ತು. ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳು ಅಥವಾ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸಲಾಗಿಲ್ಲ. ಗೃಹ ಬಳಕೆಗಾಗಿ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಈ ವರ್ಷದ ಮಾರ್ಚ್ 1 ರಂದು ಕೊನೆಯದಾಗಿ ಪರಿಷ್ಕರಿಸಲಾಗಿತ್ತು. ಸಬ್ಸಿಡಿ ರಹಿತ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ ರೂ 1,103, ಕೋಲ್ಕತ್ತಾದಲ್ಲಿ ರೂ 1,129, ಮುಂಬೈನಲ್ಲಿ ರೂ 1,102.50 ಮತ್ತು ಚೆನ್ನೈನಲ್ಲಿ ರೂ 1,118.50 ರೂ.ಗಳಿವೆ.

ಪ್ರಮುಖ ಸುದ್ದಿ :-   ಬಿಜೆಪಿ ಸೇರಿದ ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement