ನವದೆಹಲಿ: ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ದೇಶಾದ್ಯಂತ 20 ವಿಶ್ವವಿದ್ಯಾಲಯಗಳನ್ನು “ನಕಲಿ” ಎಂದು ಗುರುತಿಸಿದೆ. ಇದಲ್ಲದೆ, ಈ ವಿಶ್ವವಿದ್ಯಾಲಯಗಳು ಯಾವುದೇ ಪದವಿಯನ್ನು ನೀಡಲು ಅಧಿಕಾರ ಹೊಂದಿಲ್ಲ ಎಂದು ಆಯೋಗ ಹೇಳಿದೆ. ಅಂಕಿಅಂಶಗಳ ಪ್ರಕಾರ, ಹೆಚ್ಚಿನ ಸಂಖ್ಯೆಯ ನಕಲಿ ವಿಶ್ವವಿದ್ಯಾಲಯಗಳು ದೆಹಲಿಯಲ್ಲಿವೆ, ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶವಿದೆ.
ಯುಜಿಸಿ ಕಾರ್ಯದರ್ಶಿ ಮನೀಶ ಜೋಶಿ ಮಾತನಾಡಿ, ಯುಜಿಸಿ ಕಾಯ್ದೆಯ ನಿಬಂಧನೆಗಳಿಗೆ ವಿರುದ್ಧವಾಗಿ ಹಲವಾರು ಸಂಸ್ಥೆಗಳು ಪದವಿಗಳನ್ನು ನೀಡುತ್ತಿವೆ. ಅಂತಹ ವಿಶ್ವವಿದ್ಯಾನಿಲಯಗಳು ನೀಡುವ ಪದವಿಗಳನ್ನು ಮುಂದಿನ ಶಿಕ್ಷಣ ಅಥವಾ ಉದ್ಯೋಗದ ಉದ್ದೇಶಕ್ಕಾಗಿ ಬಳಸಲು ಮಾನ್ಯತೆ ನೀಡಲಾಗುವುದಿಲ್ಲ ಅಥವಾ ಅಂಗೀಕರಿಸಲಾಗುವುದಿಲ್ಲ. ಈ ವಿಶ್ವವಿದ್ಯಾಲಯಗಳು ಯಾವುದೇ ಪದವಿಗಳನ್ನು ನೀಡುವ ಅಧಿಕಾರವನ್ನು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.
ಯುಜಿಸಿ ಕಾರ್ಯದರ್ಶಿ ಮನೀಶ ಜೋಶಿ ನಕಲಿ ಸಂಸ್ಥೆಗಳು/ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಇವು ಈ ಕೆಳಗಿನಂತಿವೆ:
ದೆಹಲಿ ನಕಲಿ ವಿಶ್ವವಿದ್ಯಾಲಯಗಳು:
ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಂಡ್ ಫಿಜಿಕಲ್ ಹೆಲ್ತ್ ಸೈನ್ಸಸ್
ಕಮರ್ಷಿಯಲ್ ಯುನಿವರ್ಸಿಟಿ ಲಿಮಿಟೆಡ್-ದರಿಯಾಗಂಜ್,
ಯುನೈಟೆಡ್ ನೇಶನ್ಸ್ ಯುನಿವರ್ಸಿಟಿ,
ವೊಕೇಶನಲ್ ಯನಿವರ್ಸಿಟಿ
ಎಡಿಆರ್-ಸೆಂಟ್ರಿಕ್ ಜುರಿಡಿಕಲ್ ಯುನಿವರ್ಸಿಟಿ,
ಇಂಡಿಯನ್ ಇನ್ಸ್ಟಿಟ್ಯೂಷನ್ ಆಫ್ ಸೈನ್ಸ್ & ಎಂಜಿನಿಯರಿಂಗ್
ವಿಶ್ವಕರ್ಮ ಓಪನ್ ಯುನಿವರ್ಸಿಟಿ ಫಾರ್ ಸೆಲ್ಫ್ ಎಂಪ್ಲಾಯ್‌ಮೆಂಟ್,
ಅಧ್ಯಾತ್ಮಿಕ ವಿಶ್ವವಿದ್ಯಾಲಯ (ಸ್ಪಿರಿಚ್ವಲ್ ಯುನಿವರ್ಸಿಟಿ)
ಉತ್ತರಪ್ರದೇಶದ ನಕಲಿ ವಿಶ್ವ ವಿದ್ಯಾಲಯಗಳು
ಗಾಂಧಿ ಹಿಂದಿ ವಿದ್ಯಾಪೀಠ,
ನ್ಯಾಷನಲ್ ಯುನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪಥಿ,
ನೇತಾಜಿ ಸುಭಾಷಚಂದ್ರ ಬೋಸ್ ಯುನಿವರ್ಸಿಟಿ (ಮುಕ್ತ ವಿಶ್ವವಿದ್ಯಾಲಯ),
ಭಾರತೀಯ ಶಿಕ್ಷಾ ಪರಿಷದ್
ಆಂಧ್ರಪ್ರದೇಶ
ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯುನಿವರ್ಸಿಟಿ
ಬೈಬಲ್ ಓಪನ್ ಯುನಿವರ್ಸಿಟಿ ಆಫ್ ಇಂಡಿಯಾ
ಪಶ್ಚಿಮ ಬಂಗಾಳ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್,
ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ & ರಿಸರ್ಚ್ ಸಂಸ್ಥೆಗಳು
ಕರ್ನಾಟಕ
ಬಡಗಾಂವಿ ಸರ್ಕಾರ್ ವರ್ಲ್ಡ್ ಓಪನ್ ಯುನಿವರ್ಸಿಟಿ ಎಜುಕೇಶನ್ ಸೊಸೈಟಿ,
ಕೇರಳ
ಸೇಂಟ್ ಜಾನ್ಸ್ ಯುನಿವರ್ಸಿಟಿ
ಪುದುಚೇರಿ
ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್,
ಮಹಾರಾಷ್ಟ್ರ
ರಾಜಾ ಅರೇಬಿಕ್ ವಿಶ್ವವಿದ್ಯಾಲಯ
ಈ ವಿಶ್ವ ವಿದ್ಯಾಲಯಗಳು ನಕಲಿ ಎಂದು ಘೋಷಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ