ವಾಟ್ಸಾಪ್‌ ಚಾಟ್‌ನಲ್ಲಿ 60 ಸೆಕೆಂಡುಗಳ ವೀಡಿಯೊ ರೆಕಾರ್ಡ್‌ ಮಾಡಿ ಕಳುಹಿಸಬಹುದು…ಅದು ಹೇಗೆ? : ಇಲ್ಲಿದೆ ವಿವರ

ಮೆಟಾ ಒಡೆತನದ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್‌ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಅಂತೆಯೇ, ತನ್ನ ಆಂಡ್ರಾಯ್ಡ್‌ ಬಳಕೆದಾರರಿಗೆ ಹೊಸ ವೀಡಿಯೊ ಮೆಸೇಜ್ ಮಾಡುವ ವೈಶಿಷ್ಟ್ಯವನ್ನೂ ವಾಟ್ಸಾಪ್ ಪರಿಚಯಿಸಿದೆ. ಇದು ಸಣ್ಣ ವೀಡಿಯೊ ಮೂಲಕ ಸಂದೇಶ ಕಳುಹಿಸಬಹುದಾದ ವೈಶಿಷ್ಟ್ಯವಾಗಿದೆ.
ಈ ಫಿಚರ್‌ನಲ್ಲಿ ವಾಟ್ಸಾಪ್ ಬಳಕೆದಾರರು ನೇರವಾಗಿಯೇ ಚಾಟ್‌ನಲ್ಲಿಯೇ ವೀಡಿಯೊ ರೆಕಾರ್ಡ್‌ ಮಾಡಿ ಅದನ್ನು ಹಂಚಿಕೊಳ್ಳಬಹುದಾಗಿದೆ. ಬಳಕೆದಾರರು ಚಾಟ್‌ನಲ್ಲಿ ಏನು ಹೇಳಬೇಕೆಂದು ಬಯಸಿದ್ದಾರೋ ಅದನ್ನು ವೀಡಿಯೊ ಮೂಲಕ ಕಳುಹಿಸಬಹುದಾದ ವೈಶಿಷ್ಟ್ಯ ಇದಾಗಿದೆ. ಬಳಕೆದಾರರು 60 ಸೆಕೆಂಡುಗಳ ವೀಡಿಯೊವನ್ನು ಚಾಟ್‌ನಲ್ಲಿ ನೇರವಾಗಿಯೇ ರೆಕಾರ್ಡ್‌ ಮಾಡಿಕೊಳ್ಳಬಹುದು ಮತ್ತು ತಕ್ಷಣ ಕಳುಹಿಸಬಹುದು. ಸದ್ಯ ಇದು ಈ ವೈಶಿಷ್ಟ್ಯ ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಮುಂಬರುವ ದಿನಗಳಳ್ಲಿ ಇದು ಐಓಎಸ್‌ಗೂ ಬರಬಹುದಾಗಿದೆ.

ವೀಡಿಯೊ ಸಂದೇಶ ಹೇಗೆ ಕಳುಹಿಸುವುದು…?
ವಾಟ್ಸಾಪ್‌(WhatsApp)ನಲ್ಲಿ ತ್ವರಿತ ವೀಡಿಯೊ ಸಂದೇಶವನ್ನು ಕಳುಹಿಸುವುದು ಸರಳವಾಗಿದೆ. ಮೊಬೈಲ್‌ನ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯನ್ನು ಸ್ಥಾಪಿಸಬೇಕು. ತದನಂತರ ಈ ಹಂತಗಳನ್ನು ಅನುಸರಿಸಬೇಕು.
ಆಂಡ್ರಾಯ್ಡ್‌ ಫೋನ್‌ನಲ್ಲಿ ವಾಟ್ಸಾಪ್ ತೆರೆಯಬೇಕು. ಯಾರಿಗೆ ಅಥವಾ ಯಾವ ಗ್ರೂಪ್‌ಗೆ ವೀಡಿಯೊ ಸಂದೇಶ ಕಳುಹಿಸಲು ಬಯಸುತ್ತೀರೋ ಆ ವಾಟ್ಸಾಪ್ ಚಾಟ್‌ ತೆರೆಯಬೇಕು. ಅಲ್ಲಿ ವೀಡಿಯೊ ಕ್ಯಾಮೆರಾ ಐಕಾನ್ ಕಾಣಿಸುತ್ತದೆ. ಈ ವೀಡಿಯೊ ಕ್ಯಾಮೆರಾ ಐಕಾನ್ ಮೇಲೆ ಟ್ಯಾಪ್ ಮಾಡಬೇಕು. ಇದಾದ ಬಳಿಕ ವಾಟ್ಸಾಪ್ ಮೂರು ಎಣಿಕೆಗಳ ಕೌಂಟ್‌ಡೌನ್ ನೀಡುತ್ತದೆ. ಆ ಬಳಿಕ ವೀಡಿಯೊ ಸಂದೇಶವನ್ನು ರೆಕಾರ್ಡ್ ಮಾಡಲು ಸಾಧ್ಯವಾಗುತ್ತದೆ. ವೀಡಿಯೊ ರೆಕಾರ್ಡ್ ಪೂರ್ಣಗೊಂಡ ನಂತರ ಇದು ಮೆಸೇಜ್ ಸ್ವೀಕರಿಸುವವರಿಗೆ ತಲುಪುತ್ತದೆ. ಒಂದು ವೇಳೆ ರೆಕಾರ್ಡ್ ಮಾಡುತ್ತಿರುವುದನ್ನು ಕ್ಯಾನ್ಸಲ್ ಮಾಡಬೇಕೆಂದು ಬಯಸಿದರೆ ಎಡಭಾಗಕ್ಕೆ ಸ್ಲೈಡ್ ಮಾಡಿದರೆ ವೀಡಿಯೊ ರೆಕಾರ್ಡ್ ಕ್ಯಾನ್ಸಲ್ ಆಗುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಪರೇಷನ್‌ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ 40 ಯೋಧರು, 100ಕ್ಕೂ ಹೆಚ್ಚು ಭಯೋತ್ಪಾದಕರು ಸಾವು ; ಡಿಜಿಎಂಒ ರಾಜೀವ ಘಾಯ್‌

ತ್ವರಿತ ವೀಡಿಯೊ ಸಂದೇಶವು ಸಾಮಾನ್ಯ ವೀಡಿಯೊಕ್ಕಿಂತ ಹೇಗೆ ಭಿನ್ನ..?
ಗ್ಯಾಲರಿ ಅಥವಾ ಕ್ಯಾಮರಾದಿಂದ ಲಗತ್ತಿಸಬಹುದಾದ ಕ್ಲಿಪ್‌ನಿಂದ ತ್ವರಿತ ವೀಡಿಯೊದಲ್ಲಿ ಕೆಲವು ಪ್ರಮುಖ ವ್ಯತ್ಯಾಸಗಳಿವೆ. ತ್ವರಿತ ವೀಡಿಯೊ ಸಂದೇಶಗಳು ಧ್ವನಿ ಸಂದೇಶಗಳಂತೆ ಸ್ವಯಂಪ್ರೇರಿತ ಮತ್ತು ವೈಯಕ್ತಿಕವಾಗಿರಬೇಕು. ಹಾಗೆ ಮಾಡಲು ಆಯ್ಕೆ ಮಾಡದ ಹೊರತು ಅವುಗಳನ್ನು ಗ್ಯಾಲರಿ ಅಥವಾ ಕ್ಯಾಮರಾ ರೋಲ್‌ನಲ್ಲಿ ಉಳಿಸಲಾಗುವುದಿಲ್ಲ. ತ್ವರಿತ ವೀಡಿಯೊ ಸಂದೇಶವು 60 ಸೆಕೆಂಡುಗಳಿಗೆ ಸೀಮಿತವಾಗಿರುತ್ತದೆ, ಆದರೆ ಸಾಮಾನ್ಯ ವೀಡಿಯೊವು ದೀರ್ಘವಾಗಿರುತ್ತದೆ. ಚಾಟ್‌ನಲ್ಲಿ ಮ್ಯೂಟ್‌ನಲ್ಲಿ ತ್ವರಿತ ವೀಡಿಯೊ ಸಂದೇಶಗಳನ್ನು ಸ್ವಯಂಚಾಲಿತವಾಗಿ ಪ್ಲೇ ಮಾಡಲಾಗುತ್ತದೆ, ಆದರೆ ಸಾಮಾನ್ಯ ವೀಡಿಯೊಗಳನ್ನು ಪ್ಲೇ ಮಾಡಲು ಅವುಗಳ ಮೇಲೆ ಟ್ಯಾಪ್ ಮಾಡುವ ಅಗತ್ಯವಿರುತ್ತದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement