ಚಲಾವಣೆಯಿಂದ ಹಿಂಪಡೆದ ನಂತರ ಜುಲೈ 31ರವರೆಗೆ ಎಷ್ಟು ಮೌಲ್ಯದ 2000 ರೂ. ನೋಟುಗಳು ಬ್ಯಾಂಕುಗಳಿಗೆ ವಾಪಸ್‌ ಬಂದಿದೆ ಗೊತ್ತೆ..?

ಮುಂಬೈ: ₹ 2,000 ಕರೆನ್ಸಿ ನೋಟುಗಳಲ್ಲಿ ಶೇ 88ರಷ್ಟು ಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲಾಗಿದೆ ಅಥವಾ ವಿನಿಮಯ ಮಾಡಿಕೊಳ್ಳಲಾಗಿದೆ ಮತ್ತು ಜುಲೈ 31 ರವರೆಗೆ ಕೇವಲ ₹ 42,000 ಕೋಟಿ ಮೌಲ್ಯದ ನೋಟುಗಳು ಮಾತ್ರ ಸಾರ್ವಜನಿಕರ ಬಳಿ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತಿಳಿಸಿದೆ.
₹ 2,000 ಮುಖಬೆಲೆಯ ನೋಟುಗಳನ್ನು ಬದಲಾಯಿಸಲು/ಠೇವಣಿ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿದೆ. ಮೌಲ್ಯದ ಲೆಕ್ಕದಲ್ಲಿ, ಚಲಾವಣೆಯಲ್ಲಿದ್ದ ₹ 2,000 ನೋಟುಗಳು ಮೇ 19 ರಂದು ಹಿಂಪಡೆಯುವ ಘೋಷಣೆಯ ದಿನ ₹ 3.56 ಲಕ್ಷ ಕೋಟಿ ಇದ್ದಿದ್ದು ಜುಲೈ ಕೊನೆಯ ವೇಳೆಗೆ ₹ 42,000 ಕೋಟಿಗೆ ಇಳಿದಿದೆ. ಚಲಾವಣೆಯಿಂದ ಹಿಪಡೆದ ₹ 2,000 ಮುಖಬೆಲೆಯ ಒಟ್ಟು ನೋಟುಗಳ ಪೈಕಿ ಶೇ 87 ರಷ್ಟು ಠೇವಣಿ ರೂಪದಲ್ಲಿ ಬಂದಿದೆ ಮತ್ತು ಉಳಿದ ಶೇ.13 ರಷ್ಟು ಇತರ ಮುಖಬೆಲೆಯ ನೋಟುಗಳೊಂದಿಗೆ ವಿನಿಮಯವಾಗಿದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಮೇ 19 ರಂದು ಅಚ್ಚರಿಯ ಕ್ರಮದಲ್ಲಿ ₹ 2,000 ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಆರ್‌ಬಿಐ ಘೋಷಿಸಿತು ಹಾಗೂ ₹ 2,000 ನೋಟುಗಳನ್ನು ಖಾತೆಗಳಲ್ಲಿ ಜಮಾ ಮಾಡಲು ಅಥವಾ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲು ಸೆಪ್ಟೆಂಬರ್ 30 ರವರೆಗೆ ಸಾರ್ವಜನಿಕರಿಗೆ ಸಮಯ ನೀಡಿದೆ. ₹ 2,000 ನೋಟುಗಳು ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧ ಟೆಂಡರ್ ಆಗಿ ಮುಂದುವರಿಯುತ್ತದೆ.

ಪ್ರಮುಖ ಸುದ್ದಿ :-   ವೀಡಿಯೊ..| ಭಾರತದ 20 ನಗರಗಳ ಮೇಲೆ ಪಾಕಿಸ್ತಾನದಿಂದ ಡ್ರೋನ್ ದಾಳಿ ;ಎಲ್ಲವನ್ನೂ ಹೊಡೆದುರುಳಿಸಿದ ಸೇನೆ...

ಮಾರ್ಚ್ 31, 2023 ರಂದು ₹ 3.62 ಲಕ್ಷ ಕೋಟಿಯಷ್ಟು ಚಲಾವಣೆಯಲ್ಲಿರುವ ₹ 2,000 ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯವು ಮೇ 19, 2023 ರಂದು ವ್ಯವಹಾರದ ಮುಕ್ತಾಯದ ವೇಳೆಗೆ ₹ 3.56 ಲಕ್ಷ ಕೋಟಿಗೆ ಇಳಿದಿತ್ತು. ಬ್ಯಾಂಕ್‌ಗಳಿಂದ ಪಡೆದ ಅಂಕಿಅಂಶಗಳ ಪ್ರಕಾರ, ಜುಲೈ 31, 2023 ರವರೆಗೆ ಚಲಾವಣೆಯಿಂದ ಮರಳಿ ಪಡೆದ ₹ 2,000 ನೋಟುಗಳ ಒಟ್ಟು ಮೌಲ್ಯ ₹ 3.14 ಲಕ್ಷ ಕೋಟಿ ಎಂದು ಆರ್‌ಬಿಐ ತಿಳಿಸಿದೆ.
ಪರಿಣಾಮವಾಗಿ, ಜುಲೈ 31 ರಂದು ವ್ಯವಹಾರದ ಮುಕ್ತಾಯದ ವೇಳೆಗೆ ಚಲಾವಣೆಯಲ್ಲಿರುವ ₹ 2,000 ಬ್ಯಾಂಕ್‌ನೋಟುಗಳು ₹ 0.42 ಲಕ್ಷ ಕೋಟಿಯಷ್ಟಿವೆ. ಹೀಗಾಗಿ, ಮೇ 19, 2023 ರಂತೆ ಚಲಾವಣೆಯಲ್ಲಿರುವ ₹ 2,000 ಬ್ಯಾಂಕ್‌ನೋಟುಗಳಲ್ಲಿ 88% ಹಿಂತಿರುಗಿವೆ ಎಂದು ಆರ್‌ಬಿಐ ಹೇಳಿದೆ.
ಸೆಪ್ಟೆಂಬರ್ 30, 2023ರ ಹಿಂದಿನ ಕೆಲವು ದಿನಗಳಲ್ಲಿ ನೋಟುಗಳನ್ನು ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ವಿಪರೀತ ರಶ್‌ ಆಗುವುದನ್ನು ತಪ್ಪಿಸಲು ಸಾರ್ವಜನಿಕರು ತಮ್ಮ ಬಳಿ ಇರುವ ₹ 2,000 ನೋಟುಗಳನ್ನು ಠೇವಣಿ ಮಾಡಲು ಮತ್ತು/ಅಥವಾ ವಿನಿಮಯ ಮಾಡಿಕೊಳ್ಳಲು ಮುಂದಿನ ಎರಡು ತಿಂಗಳುಗಳನ್ನು ಬಳಸಿಕೊಳ್ಳುವಂತೆ RBI ವಿನಂತಿಸಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದಿಂದ ದೂರವಾಣಿ ಕರೆ ; ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ ; ಮಿಲಿಟರಿ ಕಾರ್ಯಾಚರಣೆಗಳು ಸ್ಥಗಿತ | ವಿದೇಶಾಂಗ ಸಚಿವಾಲಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement