ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಮತ್ತು ಉತ್ತರ ಪ್ರದೇಶದ ವ್ಯಕ್ತಿ ಸಚಿನ್ ಮೀನಾ ಅವರ ಪ್ರೇಮಕಥೆಯು ಕಳೆದ ತಿಂಗಳಲ್ಲಿ ಹೆಡ್‌ಲೈನ್ಸ್‌ಗಳನ್ನು ಮಾಡಿದೆ, ಸೀಮಾ ಹೈದರ್ ಬಗ್ಗೆ ಕೇಳಿಬಂದ ಗೂಢಚಾರಿಕೆ ಆರೋಪದ ಬಗ್ಗೆ ಉತ್ತರ ಪ್ರದೇಶ ಎಟಿಎಸ್ ತನಿಖೆ ನಡೆಸುತ್ತಿದೆ. ಇದೀಗ ಪಾಕಿಸ್ತಾನಿ ಮಹಿಳೆಗೆ ಬಾಲಿವುಡ್ ನಿರ್ಮಾಪಕರಿಂದ ಸಿನಿಮಾ ಆಫರ್ ಬಂದಿದೆ ಎಂಬುದು ಸುದ್ದಿಯಲ್ಲಿದೆ.
ಪ್ರಮುಖ ಚಲನಚಿತ್ರ ನಿರ್ಮಾಪಕರೊಬ್ಬರು ತಮ್ಮ ಚಿತ್ರದಲ್ಲಿ ಸೀಮಾ ಹೈದರ್‌ಗೆ ಪಾತ್ರವನ್ನು ಆಫರ್ ಮಾಡಿದ್ದಾರೆ. ಮುಂಬೈನಲ್ಲಿ ತನ್ನ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿರುವ ಮೀರತ್‌ನ ಅಮಿತ್ ಜಾನಿ, ತನ್ನ ಭಾರತೀಯ ಪ್ರೇಮಿಯೊಂದಿಗೆ ವಾಸಿಸಲು ಅಕ್ರಮವಾಗಿ ಭಾರತಕ್ಕೆ ಬಂದು ಸುದ್ದಿ ಮಾಡಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ಗೆ ಚಲನಚಿತ್ರವೊಂದರಲ್ಲಿ ಆಫರ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಅಮಿತ್ ಜಾನಿ ಅವರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೀಮಾ ಹೈದರ್ ಮತ್ತು ಸಚಿನ್ ಅವರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ನಾನು ಆಫರ್ ನೀಡಿದ್ದೇನೆ ಎಂದು ಅಮಿತ್ ಜಾನಿ ಈ ವೀಡಿಯೊದಲ್ಲಿ ಹೇಳುತ್ತಿದ್ದಾರೆ. ತೀಕ್ಷ್ಣ ಹೇಳಿಕೆಗಳಿಗೆ ಹೆಸರಾಗಿರುವ ಅಮಿತ್ ಜಾನಿ ಇತ್ತೀಚೆಗೆ ತಮ್ಮ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ.
ತಮ್ಮ ವಿರುದ್ಧ ನಡೆಯುತ್ತಿರುವ ತನಿಖೆಯಿಂದಾಗಿ, ತಮಗೆ ಯಾವುದೇ ಕೆಲಸ ಸಿಗುತ್ತಿಲ್ಲ, ಇದರಿಂದಾಗಿ ತಮ್ಮ ಕುಟುಂಬಕ್ಕೆ ತೀವ್ರ ಆರ್ಥಿಕ ಒತ್ತಡ ಉಂಟಾಗಿದೆ ಎಂದು ಈ ಹಿಂದೆ, ಸೀಮಾ ಹೈದರ್ ಮತ್ತು ಸಚಿನ್ ಇಬ್ಬರೂ ಸುದ್ದಿ ಸಂಸ್ಥೆಗಳಿಗೆ ಹೇಳಿಕೆ ನೀಡಿದ್ದರು.
ದಂಪತಿ ಸ್ಥಿತಿಯನ್ನು ಕೇಳಿದ ಮುಂಬೈ ನಿರ್ಮಾಪಕ ಅಮಿತ್ ಜಾನಿ ಅವರು ತಮ್ಮ ಚಲನಚಿತ್ರದಲ್ಲಿ ಸೀಮಾ ಹೈದರಗೆ ಒಂದು ಪಾತ್ರವನ್ನು ನೀಡಲು ಮುಂದಾಗಿದ್ದಾರೆ, ಆರ್ಥಿಕ ಸಂಕಷ್ಟವನ್ನು ಕೊನೆಗೊಳಿಸಲು ಮತ್ತು ಅವರ ಕುಟುಂಬಕ್ಕೆ ಸಹಾಯ ಮಾಡುವ ಪ್ರಯತ್ನದಲ್ಲಿದ್ದಾರೆ. ನೂಪುರ್ ಶರ್ಮಾ ಪ್ರತಿಭಟನೆಯ ವೇಳೆ ಹತ್ಯೆಯಾದ ಕನ್ಹಯ್ಯಾ ಲಾಲ್ ಸಾಹು ಅವರ ಹತ್ಯೆಯನ್ನು ಆಧರಿಸಿದ ಚಿತ್ರವನ್ನು ಅಮಿತ್ ಜಾನಿ ಬಿಡುಗಡೆ ಮಾಡಲಿದ್ದಾರೆ.
ಸೀಮಾ ಹೈದರ್ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ರೀತಿಯನ್ನು ತಾನು ಬೆಂಬಲಿಸುವುದಿಲ್ಲ, ದಂಪ ಆರ್ಥಿಕ ಸ್ಥಿತಿಯ ಬಗ್ಗೆ ತನಗೆ ತಿಳಿದಿದೆ ಮತ್ತು ಹೀಗಾಗಿ ಮುಂಬರುವ ಯಾವುದೇ ಚಲನಚಿತ್ರಗಳಲ್ಲಿ ಪಾಕಿಸ್ತಾನಿ ಮಹಿಳೆಗೆ ಪಾತ್ರವನ್ನು ನೀಡುವುದಾಗಿ ಅಮಿತ್ ಜಾನಿ ವೈರಲ್ ವೀಡಿಯೊದಲ್ಲಿ ಹೇಳಿದ್ದಾರೆ.
ಸೀಮಾ ಹೈದರ್ ತನ್ನ ಭಾರತೀಯ ಪ್ರೇಮಿ ಸಚಿನ್ ಅವರೊಂದಿಗೆ ಇರಲು ನೇಪಾಳದಿಂದ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಳು.
ನಿಮ್ಮ ಕಾಮೆಂಟ್ ಬರೆಯಿರಿ