ಬೆಂಗಳೂರು: ಇತ್ತೀಚಿನ ಉದ್ಯಮದ ವರದಿಯ ಪ್ರಕಾರ, ಗಮನಾರ್ಹ ಸಾಧನೆಯಲ್ಲಿ, ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಡೈರಿ ಬ್ರ್ಯಾಂಡ್ ನಂದಿನಿ ಭಾರತದಲ್ಲಿ ಹೆಚ್ಚು ಆಯ್ಕೆಯಾದ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ (ಎಫ್‌ಎಂಸಿಜಿ) ಬ್ರ್ಯಾಂಡ್‌ಗಳಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ.
ನವೆಂಬರ್ 2021 ಮತ್ತು ಅಕ್ಟೋಬರ್ 2022 ರ ನಡುವಿನ 52 ವಾರಗಳ ಅವಧಿಯಲ್ಲಿ ಸಂಗ್ರಹಿಸಿದ ಡೇಟಾವನ್ನು ಆಧರಿಸಿ ಈ ಶ್ರೇಯಾಂಕಗಳನ್ನು ನಿರ್ಧರಿಸಲಾಗಿದೆ. ಭಾರತದ ವಿವಿಧ ಪ್ರದೇಶಗಳಲ್ಲಿ ನಡೆಸಿದ ವ್ಯಾಪಕವಾದ ಗ್ರಾಹಕ ಸಮೀಕ್ಷೆಯ ಆಧಾರದ ಮೇಲೆ ವರದಿಯು FMCG ಬ್ರ್ಯಾಂಡ್‌ಗಳನ್ನು ಅವುಗಳ ಗ್ರಾಹಕ ರೀಚ್ ಪಾಯಿಂಟ್‌ಗಳನ್ನು (CRPs) ಆಧರಿಸಿ ಶ್ರೇಣೀಕರಿಸಿದೆ.
ರಾಷ್ಟ್ರೀಯ ಶ್ರೇಯಾಂಕದಲ್ಲಿ ನಂದಿನಿ ಆರನೇ ಸ್ಥಾನಕ್ಕೆ ಏರಿರುವುದು ಅದರ ಸ್ಥಿರ ಗುಣಮಟ್ಟ, ಕೈಗೆಟುಕುವ ಬೆಲೆ ಮತ್ತು ಗ್ರಾಹಕ-ಕೇಂದ್ರಿತ ವಿಧಾನಕ್ಕೆ ಸಾಕ್ಷಿಯಾಗಿದೆ. ನಂದಿನಿ ದೇಶದ ಟಾಪ್ 10 ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಎಫ್‌ಎಂಸಿಜಿ ಬ್ರ್ಯಾಂಡ್‌ಗಳಲ್ಲಿ ಅಮೂಲ್ ಅನ್ನು ಹೊರತುಪಡಿಸಿ ಟಾಪ್ 10ರಲ್ಲಿರುವ ಡೈರಿ ಬ್ರ್ಯಾಂಡ್ ನಂದಿನಿ ಮಾತ್ರ ಆಗಿದೆ.
7449 ಮಿಲಿಯನ್ ಸಿಪಿಆರ್‌ನೊಂದಿಗೆ ಪಾರ್ಲೆ ಮೊದಲ ಸ್ಥಾನ ಪಡೆದರೆ, ಬ್ರಿಟಾನಿಯಾ ಎರಡನೇ ಸ್ಥಾನದಲ್ಲಿದೆ. ಅಮುಲ್ ಮೂರನೇ ಸ್ಥಾನ ಗಳಿಸಿದರೆ, ಕ್ಲಿನಿಕ್ ಪ್ಲಸ್ ನಾಲ್ಕನೇ ಸ್ಥಾನದಲ್ಲಿದೆ. ಟಾಟಾ ಐದನೇ ಸ್ಥಾನದಲ್ಲಿದೆ ಹಾಗೂ ಕೆಎಂಎಫ್‌ನ ನಂದಿನಿ ಬ್ರ್ಯಾಂಡ್ ಆರನೇ ಸ್ಥಾನದಲ್ಲಿದೆ.
ಶ್ರೇಯಾಂಕದಲ್ಲಿ, ನಂದಿನಿಯ ಶ್ರೇಯಾಂಕವು 2022 ರಲ್ಲಿ 7 ನೇ ಸ್ಥಾನದಲ್ಲಿತ್ತು. ಅದಕ್ಕೆ ಹೋಲಿಸಿದರೆ 2023 ರಲ್ಲಿ 6 ನೇ ಸ್ಥಾನಕ್ಕೆ ಏರಿದೆ. ಮತ್ತೊಂದೆಡೆ, 2022 ರಲ್ಲಿ 2 ನೇ ಸ್ಥಾನದಲ್ಲಿದ್ದ ಅಮುಲ್ 3 ನೇ ಸ್ಥಾನಕ್ಕೆ ಕುಸಿದಿದೆ. ಬ್ರ್ಯಾಂಡ್ ಹೆಜ್ಜೆಗುರುತುಗಳಲ್ಲಿ ಉಲ್ಲೇಖಿಸಲಾದ ಇತರ ಸಹಕಾರಿ ಡೈರಿ ಬ್ರಾಂಡ್ ಎಂದರೆ ಆವಿನ್, ತಮಿಳುನಾಡು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಬ್ರ್ಯಾಂಡ್ ಇದು ಒಂಬತ್ತನೇ ಸ್ಥಾನದಲ್ಲಿ ತನ್ನ ಶ್ರೇಯಾಂಕವನ್ನು ಉಳಿಸಿಕೊಂಡಿದೆ.
ಈ ವರದಿಯು ಕನ್ಸ್ಯೂಮರ್ ರೀಚ್ ಪಾಯಿಂಟ್‌ಗಳ (ಸಿಆರ್‌ಪಿ) ಆಧಾರದ ಮೇಲೆ ಪ್ರತಿ ಬ್ರ್ಯಾಂಡ್ ಅನ್ನು ಶ್ರೇಣೀಕರಿಸಿದೆ. ದೇಶದಲ್ಲಿರುವ ಜನರು, ಆ ಪೈಕಿ ಆದಾಯದ ಲೆಕ್ಕಾಚಾರದಲ್ಲಿ ಟಾಪ್ ಸ್ಥಾನ ಪಡೆದಿರುವ ಬ್ರ್ಯಾಂಡ್‌ಗಳಲ್ಲ, ಬದಲಾಗಿ ನಿರ್ದಿಷ್ಟ ಬ್ರ್ಯಾಂಡ್ ಅನ್ನು ಖರೀದಿ ಮಾಡುವ ಜನರ ಸಂಖ್ಯೆ, ಒಂದು ವರ್ಷದಲ್ಲಿ ಅದೇ ಉತ್ಪನ್ನವನ್ನು ಜನರು ಎಷ್ಟು ಬಾರಿ ಖರೀದಿಸಿದ್ದಾರೆ ಎಂಬುದನ್ನು ಪರಿಗಣಿಸಿಕೊಂಡು ಈ ಲೆಕ್ಕಾಚಾರ ಮಾಡಲಾಗುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ