ಮಳೆಯಿಂದ ಮನೆಗಳಿಗೆ ಹಾನಿ; ಪರಿಹಾರದ ಮೊತ್ತ ಹೆಚ್ಚಿಸಿದ ರಾಜ್ಯ ಸರ್ಕಾರ

ಬೆಂಗಳೂರು: 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾದ ಅತಿವೃಷ್ಟಿ/ ಪ್ರವಾಹದಿಂದ ಹಾನಿಯಾದ ಮನೆಗಳ ಪುನರ್ ನಿರ್ಮಾಣ/ ದುರಸ್ತಿಗೆ ಪರಿಹಾರದ ಮೊತ್ತ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಾನಿಯನ್ನು ಎ, ಬಿ, ಸಿ ಎಂದು ಮೂರು ವರ್ಗವಾಗಿ ವಿಂಗಡಿಸಲಾಗಿದೆ. ಸರ್ಕಾರದ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ ಮತ್ತು ನೋಂ & ಮು) ಉಪ ಕಾರ್ಯದರ್ಶಿ ಟಿ. ಸಿ. ಕಾಂತರಾಜ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೊ ಸಂವಾದ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. 2003ನೇ ಸಾಲಿನ ಮುಂಗಾರು ಋತುವಿನ (1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ವರಗೆ) ಅತಿವೃಷ್ಟಿ/ ಪ್ರವಾಹದಿಂದ ಮನೆಗಳು ಹಾನಿಯಾದಂತಹ ಸಂತ್ರಸ್ತ ಕುಟುಂಬಗಳಿಗೆ ಕೇಂದ್ರ ಸರ್ಕಾರದ SDRF/ NDRF ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಈ ಕೆಳಕಂಡಂತೆ ಹೆಚ್ಚುವರಿಯಾಗಿ ಪರಿಷ್ಕೃತ ದರದಲ್ಲಿ ಪರಿಹಾರವನ್ನು ಪಾವತಿಸಲು ಮಂಜೂರಾತಿ ನೀಡಲಾಗಿದೆ.
ಹೆಚ್ಚಳ ಮಾಡಿದ್ದರ ವಿವರ…
ಶೇ 75ಕ್ಕಿಂತ ಹೆಚ್ಚು ಸಂಪೂರ್ಣ ಮನೆ ಹಾನಿ ‘ಎ’ ವರ್ಗ.
SDRF/ NDRF ಮಾರ್ಗಸೂಚಿ 1,20,000, ರಾಜ್ಯ ಸರ್ಕಾರದ ಹೆಚ್ಚುವರಿ ದರ 3,80,000 ರೂ., ಪರಿಷ್ಕೃತ ಮೊತ್ತ 5,00,000 ರೂ.ಗಳು.
ಶೇ 25 ರಿಂದ ಶೇ 75 ರಷ್ಟು ತೀವ್ರ ಹಾನಿ, ‘ಬಿ1’ ವರ್ಗ (ದುರಸ್ತಿ).
SDRF/ NDRF ಮಾರ್ಗಸೂಚಿ 1,20,000 ರೂ. ಗಳು. ರಾಜ್ಯ ಸರ್ಕಾರದ ಹೆಚ್ಚುವರಿ ದರ 1,80,000 ರೂ., ಪರಿಷ್ಕೃತ ಮೊತ್ತ 3,00,000 ರೂ.ಗಳು.
ಶೇ 25ರಿಂದ ಶೇ 75 ರಷ್ಟು ತೀವ್ರ ಮನೆ ಹಾನಿ, ‘ಬಿ2’ ವರ್ಗ (ಕೆಡವಿ ಹೊಸ ಮನೆ ನಿರ್ಮಾಣ).
SDRF/ NDRF ಮಾರ್ಗಸೂಚಿ 1,20,000. ರಾಜ್ಯ ಸರ್ಕಾರದ ಹೆಚ್ಚುವರಿ ದರ 3,80,000 ರೂ., ಪರಿಷ್ಕೃತ ಮೊತ್ತ 5,00,000 ರೂ.ಗಳು. ಶೇ 15-25 ರಷ್ಟು ಭಾಗಶಃ ಮನೆ ಹಾನಿ. ‘ಸಿ’ ವರ್ಗ.
SDRF/ NDRF ಮಾರ್ಗಸೂಚಿ 6,500 ರೂ.ಗಳು. ರಾಜ್ಯ ಸರ್ಕಾರದ ಹೆಚ್ಚುವರಿ ದರ 43,500 ರೂ., ಪರಿಷ್ಕೃತ ಮೊತ್ತ 50,000 ರೂ.ಗಳು.
 
2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ(1ನೇ ಜೂನ್ ರಿಂದ 30ನೇ ಸೆಪ್ಟೆಂಬರ್ ವರೆಗೆ) ಅತಿವೃಷ್ಟಿ, ಪ್ರವಾಹದಿಂದ ಮನೆಹಾನಿ ಉಂಟಾದಲ್ಲಿ ಜಿಲ್ಲಾಧಿಕಾರಿಗಳು ಜಂಟಿ ತಂಡ ರಚಿಸಿ ತಂಡದವರಿಂದ ಸಂತ್ರಸ್ತರ ವಿವರಗಳನ್ನು ಪಡೆದು ಜಿಲ್ಲಾಧಿಕಾರಿಗಳು ನಿಯಮಾನುಸಾರ ಎ, ಬಿ1, ಬಿ2 ಅಥವಾ ಸಿ ವರ್ಗಕ್ಕೆ ಸೇರಿಸುವ ಬಗ್ಗೆ ಅರ್ಹತೆಯನ್ನು ಪರಿಶೀಲಿಸಿ ಅನುಮೋದಿಸಿದ ಫಲಾನುಭವಿಗಳ ವಿವರಗಳನ್ನು RGHCL ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸಬೇಕು.
ಜಿಲ್ಲಾಧಿಕಾರಿಗಳು ಎ, ಬಿ1 ಮತ್ತು ಬಿ2 ವರ್ಗದ ಮನೆಗಳ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ SDRF/ NDRE ಮಾರ್ಗಸೂಚಿಯನ್ವಯ ಮೊದಲನೇ ಕಂತು ರೂ. 1.20 ಲಕ್ಷಗಳನ್ನು ಅರ್ಹ ಫಲಾನುಭವಿಗಳ ಆಧಾರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಬೇಕು. ಮುಂದಿನ ಕಂತುಗಳ ಅನುದಾನವನ್ನು ನಿಯಮಾನುಸಾರ ಪ್ರಗತಿಯನುಸಾರ RGHCL ಸಂಸ್ಥೆಯಿಂದ ಭರಿಸಲಾಗುತ್ತದೆ.
ಜಿಲ್ಲಾಧಿಕಾರಿಗಳು ‘ಸಿ’ ವರ್ಗದಲ್ಲಿ ಅರ್ಹರಿರುವ ಮನೆಹಾನಿ ಫಲಾನುಭವಿಗಳಿಗೆ ತಲಾ 50,000 ರೂ.ಗಳಂತೆ (SDRFಮಾರ್ಗಸೂಚಿಯನ್ವಯ ರೂ. 6500 ಸೇರಿದಂತೆ) ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ನಿಯಮಾನುಸಾರ ಅರ್ಹ ಫಲಾನುಭವಿಗಳ ಆಧಾರ್ ಜೋಡಣೆ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಬೇಕು.
* ನಿಯಮಾನುಸಾರ ಜಂಟಿ ಸ್ಥಳ ತನಿಖೆಯ ವರದಿ ಬಂದ ನಂತರ ಜಿಲ್ಲಾಧಿಕಾರಿಗಳು ಅರ್ಹತೆ ಬಗ್ಗೆ ಪರಿಶೀಲಿಸಿದ 20 ದಿನದೊಳಗೆ ಪರಿಹಾರ ಪಾವತಿಸಬೇಕು.
ಮನೆಹಾನಿ ಪರಿಹಾರ ಪಾವತಿಯಾಗಿರುವ ಫಲಾನುಭವಿಗಳ ವಿವರವನ್ನು ಜಿಲ್ಲಾಧಿಕಾರಿಗಳು ಜಿಲ್ಲೆಯ ಅಧಿಕೃತ ಜಾಲತಾಣದಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಬೇಕು. ಸದರಿ ಮಾಹಿತಿಯನ್ನು ತಾಲ್ಲೂಕು ಕಚೇರಿಯಲ್ಲಿ ಹಾಗೂ ಗ್ರಾಮ ಪಂಚಾಯತಗಳ ಕಛೇರಿಗಳಲ್ಲಿ ಸಹ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಬೇಕು.
ಮನೆಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಹತೆಯನ್ನು ಹಾಗೂ ಮಾಹಿತಿಯನ್ನು ನಮೂದಿಸುವುದರಲ್ಲಿ ಏನಾದರೂ ಲೋಪದೋಷಗಳು ಉಂಟಾದಲ್ಲಿ ಸಂಬಂಧಪಟ್ಟ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ನೇರ ಜವಾಬ್ದಾರರನ್ನಾಗಿ ಮಾಡಲಾಗುತ್ತದೆ.
ಸಂತ್ರಸ್ತರಿಗೆ ಪರಿಹಾರ ವಿತರಿಸುವ ಕುಟುಂಬವಾರು ವೆಚ್ಚದ ಲೆಕ್ಕಗಳನ್ನು ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ನಿರ್ವಹಿಸಬೇಕು. ಮತ್ತು ವೆಚ್ಚದ ಬಳಕೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಶಾಸಕ ಎಚ್‌.ಡಿ. ರೇವಣ್ಣಗೆ ಜಾಮೀನು ಮಂಜೂರು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement