ಹೃದಯಸ್ಪರ್ಶಿ ಕ್ಷಣ….: ಗೋವು ಪ್ರೀತಿಯಿಂದ ನಾಗರಹಾವಿನ ಹೆಡೆ ನೆಕ್ಕುತ್ತಿರುವ ಅಪರೂಪದ ವೀಡಿಯೊ ವೈರಲ್ ; ಬೆರಗಾದ ಇಂಟರ್ನೆಟ್‌ | ವೀಕ್ಷಿಸಿ

ಗೋವು ಮತ್ತು ನಾಗರಹಾವಿನ ನಡುವೆ ನಿರ್ಮಲ ಪ್ರೀತಿಯ ಅಪರೂಪದ ದೃಶ್ಯದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದು ಅಸಂಭವ ಜೋಡಿಯಾದ ಹಸು ಮತ್ತು ನಾಗರ ನಡುವಿನ ಅನಿರೀಕ್ಷಿತ ಪ್ರೀತಿಯ ಅಸಾಧಾರಣ ಕ್ಷಣವನ್ನು ಸೆರೆಹಿಡಿದಿದೆ. ಸದಾ ಆಸಕ್ತಿಕರ ದೃಶ್ಯಗಳನ್ನು ಹಂಚಿಕೊಳ್ಳುವ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಾಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ದೃಶ್ಯದ ವೀಡಿಯೊ ಕ್ಲಿಪ್‌ ಹಂಚಿಕೊಂಡಿದ್ದಾರೆ.
17 ಸೆಕೆಂಡುಗಳ ಈ ಕ್ಲಿಪ್‌ನಲ್ಲಿ ನಾಗರಹಾವೊಂದು ಹೆಡೆ ಎತ್ತಿಕೊಂಡಿರುವುದು ಕಂಡುಬರುತ್ತದೆ. ಪಕ್ಕದಲ್ಲಿ ಈ ಹಾವನ್ನು ಕುತೂಹಲದಿಂದ ನೋಡುತ್ತಾ ದನವೊಂದು ನಿಂತಿದೆ. ಹೀಗೆ ಹಾವನ್ನು ಕುತೂಹಲದಿಂದ ನೋಡುವ ದನ ನಂತರ ನಾಗರಹಾವಿನ ಬಳಿ ಬರುತ್ತದೆ. ನಾಗರಹಾವು ಹೆಡೆ ಎತ್ತಿಕೊಂಡು ಕುತೂಹಲದಿಂದ ಗೋವಿನ ಕಡೆಗೆ ನೋಡುತ್ತದೆ. ಒಂದು ಹಂತದಲ್ಲಿ ನಾಗರಹಾವು ಹಸುವಿನ ಮುಂದೆ ತನ್ನ ಹೆಡೆ ಬಾಗಿಸಿ ತನ್ನ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಈ ವೇಳೆ ಗೋವು ಹಾವಿನ ಹೆಡೆಯನ್ನು ಪ್ರೀತಿಯಿಂದ ನೆಕ್ಕಲು ಆರಂಭಿಸುತ್ತದೆ. ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ಆರ್ಭಟಿಸುವ ನಾಗರಹಾವು ಅತ್ಯಂತ ಶಾಂತವಾಗಿರುವುದು ಕಂಡುಬರುತ್ತದೆ. ಇದು ಶುದ್ಧ ಪ್ರೀತಿಯಿಂದ ಗಳಿಸಿದ ವಿಶ್ವಾಸ’ ಎಂಬ ಕ್ಯಾಪ್ಶನ್‌ನೊಂದಿಗೆ ಸುಸಾಂತ ನಂದ ಅವರು ನಂದ ವೀಡಿಯೊಕ್ಕೆ ಶೀರ್ಷಿಕೆ ಬರೆದಿದ್ದಾರೆ.

ಈ ವೀಡಿಯೊ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಕುತೂಹಲದಿಂದ ಈ ದೃಶ್ಯವನ್ನು ನೋಡುತ್ತಿದ್ದಾರೆ. ಈ ದೃಶ್ಯವನ್ನು ನೋಡಿದ ಬಹುತೇಕರಿಗೆ ಇದು ಅಚ್ಚರಿಯ ಸಂಗತಿಯಾಗಿದೆ. ಪ್ರಾಣಿಗಳ ಬಂಧವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಅನೇಕ ಪ್ರಾಣಿ ಪ್ರೇಮಿಗಳು ಇದನ್ನು “ನಂಬಲಾಗದ” ಆದರೆ “ಅದ್ಭುತ” ಎಂದು ಕರೆದರು. ಒಬ್ಬ ಬಳಕೆದಾರರು “ಸಾಮರಸ್ಯದ ಸುಂದರ ಅಭಿವ್ಯಕ್ತಿ. ಇಂದಿನ ಜೀವನದಲ್ಲಿ, ಮಾನವೀಯತೆಯು ಈ ಸುಂದರ ಆತ್ಮಗಳಿಂದ ಕಲಿಯಬೇಕು ಎಂದು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ವಿಪಕ್ಷ ನಾಯಕನಾಗಲು ಒಪ್ಪದ ರಾಹುಲ್ ಗಾಂಧಿ : ಕಾಂಗ್ರೆಸ್ಸಿನಲ್ಲಿ ಮುನ್ನೆಲೆಗೆ ಮೂವರ ಹೆಸರುಗಳು...!?

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement