ಅಪ್ರಾಪ್ತ ಬಾಲಕರ ಗುದದ್ವಾರಕ್ಕೆ ಮೆಣಸಿನ ಕಾಯಿ ಹಾಕಿ ಚಿತ್ರಹಿಂಸೆ : 6 ಮಂದಿ ಬಂಧನ

ಲಕ್ನೋ : ಇಬ್ಬರುಅಪ್ರಾಪ್ತ ಬಾಲಕರು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಸೆರೆಹಿಡಿದು ಚಿತ್ರಹಿಂಸೆ ನೀಡಿದ ಅಮಾನವೀಯ ಕೃತ್ಯ ಉತ್ತರ ಪ್ರದೇಶದ ಸಿದ್ಧಾರ್ಥನಗರದಲ್ಲಿ ನಡೆದಿದೆ.
10-15 ವರ್ಷದ ಅಪ್ರಾಪ್ತ ಬಾಲಕರು ಕಳ್ಳತನ ಮಾಡಿದ್ದಾರೆ ಎಂದು ಸ್ಥಳೀಯ ಗೂಂಡಾಗಳು ಬಾಲಕರನ್ನು ಸೆರೆ ಹಿಡಿದಿದ್ದಾರೆ. ಬಳಿಕ ಗೂಂಡಾಗಳು ಹುಡುಗರನ್ನು ಕಟ್ಟಿ ಹಾಕಿ ಹಸಿ ಮೆಣಸಿನ ಕಾಯಿಯನ್ನು ಕಚ್ಚಿ ತಿನ್ನುವಂತೆ ಬಲವಂತ ಮಾಡಿದ್ದಾರೆ. ಕಚ್ಚಿ ತಿಂದ ಬಳಿಕ ಅದನ್ನು ಮೂತ್ರದೊಂದಿಗೆ ಸೇವಿಸಿಬೇಕೆಂದು ಹಿಂಸೆ ನೀಡಿ ಒತ್ತಾಯಿಸಿದ್ದಾರೆ.
ಬಲವಂತವಾಗಿ ಇಬ್ಬರು ಬಾಲಕರಿಗೆ ಬಾಟಲಿಯಲ್ಲಿ ಮೂತ್ರ ಕುಡಿಸಿದ್ದಾರೆ. ಇದಾದ ಬಳಿಕ ಅವರನ್ನು ಕಟ್ಟಿ ಹಾಕಿ ಬಾಲಕರ ಗುದದ್ವಾರಕ್ಕೆ ಮೆಣಸಿನ ಕಾಯಿಯನ್ನು ಉಜ್ಜಿದ್ದಾರೆ. ಬಾಲಕರು ಉರಿ ಹಾಗೂ ನೋವು ತಾಳಲಾರದೆ ಅಳುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಬಳಿಕ ಯಾವುದೋ ಒಂದು ಔಷಧವನ್ನು ಚುಚ್ಚು ಮದ್ದಿನ ರೀತಿ ಬಾಲಕರಿಗೆ ಚುಚ್ಚಿದ್ದಾರೆ ಎನ್ನಲಾಗಿದೆ.
ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸಿದ್ಧಾರ್ಥನಗರದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ದಾಖಲಾದ ದೂರಿನ ಆಧಾರದ ಮೇಲೆ ಸೂಕ್ತ ಕ್ರಮಕೈಗೊಂಡಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಆರು ಮಂದಿ ಆರೋಪಿಗಳನ್ನು ಪೊಲೀಸರು ಗುರುತಿಸಿ ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಮುಖ ಸುದ್ದಿ :-   S-400 ಬಿಡಿ ; ವಾಯು ರಕ್ಷಣೆ ಹೆಚ್ಚಿಸಲು ಭಾರತ ಶೀಘ್ರವೇ ರಷ್ಯಾದ ಘಾತಕ S-500 ಖರೀದಿಸಬಹುದು ; ಎರಡರ ಮಧ್ಯದ ಪ್ರಮುಖ ವ್ಯತ್ಯಾಸ ಇಲ್ಲಿದೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement