ವೀಡಿಯೊ ಕಾನ್ಫರೆನ್ಸ್‌ ಮೂಲಕ ಪಾಕಿಸ್ತಾನದ ವಧು-ರಾಜಸ್ತಾನದ ವರನ ಮದುವೆ : ಆನ್ಲೈನ್‌ ನಲ್ಲೇ ನೆರವೇರಿತು ವಿಧಿವಿಧಾನಗಳು

ಪ್ರೀತಿಗೆ ಯಾವುದೇ ಗಡಿ ತಿಳಿದಿಲ್ಲ. ಈ ಹೇಳಿಕೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದು ತೋರುತ್ತದೆ. ಈ ಉಲ್ಲೇಖವನ್ನು ಸಮರ್ಥಿಸುವ ಮತ್ತೊಂದು ಘಟನೆಯಲ್ಲಿ, ಪಾಕಿಸ್ತಾನಿ ವಧು ಮತ್ತು ಭಾರತೀಯ ವರ ವರ್ಚುವಲ್‌ ವಿವಾಹ ಸಮಾರಂಭದಲ್ಲಿ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ರಾಜಸ್ಥಾನದ ವರ ಪಾಕಿಸ್ತಾನದಲ್ಲಿರುವ ವಧುವಿನೊಂದಿಗೆ ಮದುವೆ(ನಿಕಾಹ್‌)ಯ ಎಲ್ಲಾ ವಿಧಿವಿಧಾನಗಳನ್ನು ವರ್ಚುವಲ್‌ನಲ್ಲಿಯೇ ನೆರವೇರಿಸಿದರು. ವರದಿ ಪ್ರಕಾರ, ಖಾಜಿ ಮದುವೆಯನ್ನು ನೆರವೇರಿಸಿದರು ಮತ್ತು ಕರಾಚಿಯಲ್ಲಿ ಹಾಜರಿದ್ದ ವಧು ಕಬೂಲ್ ಹೈ” ಎಂದು ಹೇಳಿದ್ದಾಳೆ. ಈ ಆನ್‌ಲೈನ್ ನಿಕಾಹ್ ಬುಧವಾರ ಜೋಧ್‌ಪುರದಲ್ಲಿ ನಡೆದಿದೆ. ವರ ಅರ್ಬಾಜ್ ಪಾಕಿಸ್ತಾನಿ ಮಹಿಳೆ ಅಮೀನಾ ಅವರನ್ನು ಆನ್ಲೈನ್‌ ನಲ್ಲಿ ವಿವಾಹವಾದರು.
ನಿಕಾಹವನ್ನು ಆನ್‌ಲೈನ್‌ನಲ್ಲಿ ನಡೆಸಲು ಕಾರಣವೆಂದರೆ ವೀಸಾ-ಸಂಬಂಧಿತ ಸಮಸ್ಯೆಗಳು. ಇದು ಕರಾಚಿಯಲ್ಲಿ ಮದುವೆ ಸಮಾರಂಭವನ್ನು ನಡೆಸುವ ಅವರ ಯೋಜನೆಗೆ ಅಡ್ಡಿಯಾಗಿದೆ ಎಂದು ಹೇಳಲಾಗಿದೆ.
ಅರ್ಬಾಜ್ ಜೋಧಪುರದಲ್ಲಿ ವಾಸಿಸುವ ಗುತ್ತಿಗೆದಾರ ಮೊಹಮ್ಮದ್ ಅಫ್ಜಲ್ ಅವರ ಕಿರಿಯ ಮಗ. ಅರ್ಬಾಜ್ ಮತ್ತು ಅಮೀನಾ ಅವರ ಕುಟುಂಬ ಸದಸ್ಯರು ವೀಡಿಯೊ ಕಾನ್ಫರೆನ್ಸ್ ಮೂಲಕ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಲ್ಯಾಪ್‌ಟಾಪ್‌ಗಳ ಜೊತೆಗೆ ಎರಡು ದೊಡ್ಡ ಎಲ್‌ಇಡಿ ಪರದೆಗಳನ್ನು ಸಹ ಸ್ಥಳದಲ್ಲಿ ಹಾಕಲಾಗಿತ್ತು ಎಂದು ವರದಿ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಬೀದಿ ನಾಯಿಯ ಮೇಲೆ ಚಿರತೆ ದಾಳಿ; ಸ್ನೇಹಿತನ ರಕ್ಷಣೆಗಾಗಿ ಚಿರತೆಯ ಮೇಲೆ ಪ್ರತಿದಾಳಿ ನಡೆಸಿ ಓಡಿಸಿದ ನಾಯಿಗಳ ಹಿಂಡು...!

ಅಲ್ಲಿನ ಹುಡುಗಿಯರು ಮತ್ತು ಅವರ ಕುಟುಂಬದವರೂ ಜೋಧ್‌ಪುರದಲ್ಲಿ ಮದುವೆಯಾಗಲು ಬಯಸುತ್ತಾರೆ, ಅಲ್ಲಿ ನಮಗೆ ಸಂಬಂಧಿಕರೂ ಇದ್ದಾರೆ, ಎಂದು ಅವರು ಹೇಳುತ್ತಾರೆ. ಈಗ ನಾವು ಭಾರತದ ವೀಸಾ ಪಡೆಯಲು ತಯಾರಿ ನಡೆಸುತ್ತೇವೆ, ನಮ್ಮಂತಹ ಸಾಮಾನ್ಯ ಕುಟುಂಬಗಳಿಗೆ ಆನ್‌ಲೈನ್ ಮದುವೆಗೆ ಹೋಗಲು ಅನುಕೂಲವಾಗಿದೆ ಏಕೆಂದರೆ ವೆಚ್ಚವೂ ಕಡಿಮೆಯಾಗಿದೆ. ನಾವು ಭಾರತದ ನಿಕಾಹ್ನಾಮಾ (ಮದುವೆ ಪ್ರಮಾಣಪತ್ರ) ದೊಂದಿಗೆ ವೀಸಾಕ್ಕೆ ಅರ್ಜಿ ಸಲ್ಲಿಸಿದರೆ ಅದು ಸುಲಭವಾಗಿ ಲಭ್ಯವಾಗುತ್ತದೆ” ಎಂದು ಅರ್ಬಾಜ್ ತಂದೆ ಮೊಹಮ್ಮದ್ ಅಫ್ಜಲ್ ಹೇಳಿದರು.
ದೇಶಾದ್ಯಂತ ಇದೇ ರೀತಿಯ ಎರಡು ಪ್ರಕರಣಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಇತ್ತೀಚೆಗೆ PUBGಯಲ್ಲಿ ಸಂಪರ್ಕಕ್ಕೆ ಬಂದ ತನ್ನ ಪ್ರೇಮಿಯನ್ನು ಭೇಟಿಯಾಗಲು ನೇಪಾಳ ಗಡಿ ಮೂಲಕ ಭಾರತಕ್ಕೆ ಆಗಮಿಸಿದ್ದಳು. . ಪ್ರಕರಣ ಬೆಳಕಿಗೆ ಬಂದಾಗ, ಉತ್ತರ ಪ್ರದೇಶ ಎಟಿಎಫ್‌ ಸೀಮಾ ಬೈದರ್‌ ಹಾಗೂ ಅವಳ ಪ್ರೇಮಿ ಸಚಿನ್‌ ಮೀನಾ ಇಬ್ಬರನ್ನೂ ಪ್ರಶ್ನಿಸಿತು ಮತ್ತು ಪಾಕಿಸ್ತಾನಿ ಸೇನೆ ಮತ್ತು ಗುಪ್ತಚರ ಸಂಸ್ಥೆ ಐಎಸ್‌ಐ (ISI) ಜೊತೆ ಯಾವುದೇ ರೀತಿಯ ಸಂಪರ್ಕವನ್ನು ಹೊಂದಿರುವ ಬಗ್ಗೆ ನಿರ್ದಿಷ್ಟವಾಗಿ ಸೀಮಾಳನ್ನು ಪ್ರಶ್ನಿಸಿದೆ.
ಮತ್ತೊಂದು ಪ್ರಕರಣದಲ್ಲಿ, ಭಾರತೀಯ ಮಹಿಳೆ ಅಂಜು ತನ್ನ ಫೇಸ್‌ಬುಕ್ ಸ್ನೇಹಿತನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಪ್ರಯಾಣಕ್ಕೆ ಹೋಗಿದ್ದಾಳೆ. ಮತ್ತು ನಂತರ ಆತನ ಮದುವೆಯಾಗಿದ್ದಾಳೆ ಹಾಗೂ ಅಂಜು ತನ್ನ ಹೆಸರನ್ನು ಫಾತಿಮಾ ಎಂದು ಬದಲಾಯಿಸಿಕೊಂಡಿದ್ದಾಳೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಮೂಲೆಗುಂಪು-ಹತಾಶ ; ʼಸಿಂಧೂ ಜಲ ಒಪ್ಪಂದ ಸಸ್ಪೆಂಡ್‌ʼ ನಿರ್ಧಾರ ಮರುಪರಿಶೀಲಿಸುವಂತೆ ಒತ್ತಾಯಿಸಿ ಭಾರತಕ್ಕೆ ಪತ್ರ ಬರೆದ ಪಾಕಿಸ್ತಾನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement