ನವದೆಹಲಿ: ಏರುತ್ತಿರುವ ಬೆಲೆಗಳ ವಿರುದ್ಧ ವಿಶಿಷ್ಟವಾದ ಪ್ರತಿಭಟನೆಯಲ್ಲಿ, ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸುಶೀಲಕುಮಾರ ಗುಪ್ತಾ ಅವರು ಬುಧವಾರ ಟೊಮೆಟೊ ಮತ್ತು ಶುಂಠಿಯ ಹಾರ ಹಾಕಿಕೊಂಡು ಸಂಸತ್ತಿಗೆ ಆಗಮಿಸಿದ್ದಾರೆ.
ಟೊಮೆಟೊ ಮತ್ತು ಶುಂಠಿಯ ಬೆಲೆ ಏರಿಕೆಯ ಬಗ್ಗೆ ಸರ್ಕಾರದ ಗಮನ ಸೆಳೆಯಲು ನಾನು ಸಂಸತ್ತಿಗೆ ಈ ಹಾರವನ್ನು ಧರಿಸಿ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ರಾಜ್ಯಸಭಾ ಅಧ್ಯಕ್ಷ ಜಗದೀಪ ಧನಕರ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದಿನದ ಅಧಿವೇಶನದ ಪ್ರಾರಂಭ ಮತ್ತು ಪಟ್ಟಿ ಮಾಡಲಾದ ಕಾರ್ಯಸೂಚಿಯ ಪ್ರಾರಂಭದ ನಂತರ ಟೊಮೆಟೊ ಹಾರ ಹಾಕಿದ್ದ ಸುಶೀಲಕುಮಾರ ಗುಪ್ತಾ ಅವರ ಈ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.
ನಮ್ಮ ನಡವಳಿಕೆಗೆ ಒಂದು ಮಿತಿಯಿದೆ. ರಾಜ್ಯಸಭೆಯ ಅಧ್ಯಕ್ಷನಾಗಿ ಗೌರವಾನ್ವಿತ ಸದಸ್ಯರಾದ ಸುಶೀಲಕುಮಾರ ಗುಪ್ತಾ ಅವರು ಬಂದ ರೀತಿಯನ್ನು ನೋಡಿ ನನಗೆ ತುಂಬಾ ನೋವಾಗಿದೆ” ಎಂದು ಧನಕರ ಹೇಳಿದರು. ಈ ಬಗ್ಗೆ ವಿರೋಧ ಪಕ್ಷದ ನಾಯಕರ ಜತೆ ಚರ್ಚಿಸುತ್ತೇನೆ ಎಂದು ಅವರು ಹೇಳಿದರು.
ಟೊಮೆಟೊ ಸೇರಿದಂತೆ ಕೆಲವು ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ವಿರೋಧ ಪಕ್ಷಗಳು ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.
ನಿಮ್ಮ ಕಾಮೆಂಟ್ ಬರೆಯಿರಿ