ಡೆರೆಕ್ ಒʼ ಬ್ರೆಯಾನ್‌ ಸದನದಿಂದ ಅಮಾನತುಗೊಂಡಿಲ್ಲ: ಉಪರಾಷ್ಟ್ರಪತಿ ಜಗದೀಪ ಧನಕರ ಸ್ಪಷ್ಟನೆ

ನವದೆಹಲಿ: ರಾಜ್ಯಸಭೆ ಕಲಾಪ ವೇಳೆ ಗದ್ದಲ ಮಾಡಿದ ಹಿನ್ನೆಲೆ ಟಿಎಂಸಿ ಸಂಸದ ಡೆರೆಕ್ ಓ’ಬ್ರೆಯಾನ್ ಅವರನ್ನು ಸದನದಿಂದ ಹೊರನಡೆಯಬೇಕು ಎಂದು ಸಭಾಧ್ಯಕ್ಷರು ಸೂಚಿಸಿದ್ದರೂ ಬಳಿಕ ಡೆರೆಕ್ ಓ’ಬ್ರೇನ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಮತಕ್ಕೆ ಹಾಕಿಲ್ಲ. ಹೀಗಾಗಿ ಅವರು ಕಲಾಪದಲ್ಲಿ ಭಾಗಿಯಾಗಬಹುದು ಎಂದು ರಾಜ್ಯಸಭೆಯ ಅಧ್ಯಕ್ಷರಾದ ಜಗದೀಪ್ ಧನಕರ ಸ್ಪಷ್ಟನೆ ನೀಡಿದ್ದಾರೆ.
ತಾವು ಡೆರೆಕ್ ಓ’ಬ್ರೆಯಾನ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಮತಕ್ಕೆ ಹಾಕದೇ ಇರುವ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. ಟಿಎಂಸಿ ನಾಯಕ ಸದನದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಅವರನ್ನು ಅಮಾನತುಗೊಳಿಸಿರುವುದಾಗಿ ಜಗದೀಪ್ ಧನಕರ ಹೇಳಿದ್ದರು.
ಪ್ರಮೋದ್ ತಿವಾರಿ (ಕಾಂಗ್ರೆಸ್) ಸೇರಿದಂತೆ ಹಲವಾರು ಸದಸ್ಯರು ಒ’ಬ್ರೆಯಾನ್ ಬಗ್ಗೆ ಸೌಮ್ಯವಾದ ದೃಷ್ಟಿಕೋನವನ್ನು ತೆಗೆದುಕೊಳ್ಳುವಂತೆ ಅಧ್ಯಕ್ಷರನ್ನು ಒತ್ತಾಯಿಸಿದರು. ನಂತರ ಅವರು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಮತಕ್ಕೆ ಹಾಕಲಿಲ್ಲ. ನಿರ್ಣಯವನ್ನು ಸಂಪೂರ್ಣವಾಗಿ ಅಂಗೀಕರಿಸಿದ್ದರೆ, ಡೆರೆಕ್‌ ಒ’ ಬ್ರೆಯಾನ್‌ ಅವರಿಗೆ ಸದನ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ. ಸದನವು ಸರಿಯಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement