ʼಫೋರ್ಜರಿʼ ಮಾಡಿದ ಆರೋಪದ ಮೇಲೆ ಎಎಪಿ ಸಂಸದ ರಾಘವ ಚಡ್ಡಾ ರಾಜ್ಯಸಭೆಯಿಂದ ಅಮಾನತು

ನವದೆಹಲಿ: ಆಮ್ ಆದ್ಮಿತ್ ಪಕ್ಷದ (ಎಎಪಿ) ಸಂಸದ ರಾಘವ್ ಚಡ್ಡಾ ರಾಜ್ಯಸಭೆಯಲ್ಲಿ ದೆಹಲಿ ಸೇವಾ ಮಸೂದೆಗೆ ಸಂಬಂಧಿಸಿದ ಪ್ರಸ್ತಾವನೆಯಲ್ಲಿ ಐವರು ಸಂಸದರ ಸಹಿಯನ್ನು ನಕಲಿ ಮಾಡಿದ ಆರೋಪದ ಮೇಲೆ ವಿಶೇಷಾಧಿಕಾರ ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.
ನಾಲ್ಕು ರಾಜ್ಯಸಭಾ ಸಂಸದರು ತಮ್ಮ ಅನುಮತಿಯಿಲ್ಲದೆ ತಮ್ಮ ಹೆಸರನ್ನು ಆಗಸ್ಟ್ 7 ರಂದು ಸದನ ಸಮಿತಿಗೆ ಸೇರಿಸಿದ್ದಾರೆ ಎಂದು ಹೇಳಿಕೊಂಡಿದ್ದರು. ರಾಜ್ಯಸಭಾ ಅಧ್ಯಕ್ಷ ಜಗದೀಪ ಧನಕರ ಅವರು ಬುಧವಾರ ಈ ವಿಷಯವನ್ನು ಪರಿಶೀಲಿಸಲು ಪ್ರಿವಿಲಿಯೇಜ್‌ ಸಮಿತಿಗೆ ಸಂಸದರ ದೂರುಗಳನ್ನು ಕಳುಹಿಸಿದ್ದಾರೆ.
ಸಂಸದರಾದ ಸಸ್ಮಿತ್ ಪಾತ್ರ, ಎಸ್. ಫಾಂಗ್ನಾನ್ ಕೊನ್ಯಾಕ್, ಎಂ. ತಂಬಿದುರೈ ಮತ್ತು ನರಹರಿ ಅಮೀನ್ ಅವರು ಚಡ್ಡಾ ತಮ್ಮನ್ನ ಕೇಳದೆ ಸದನ ಸಮಿತಿಗೆ ತಮ್ಮ ಹೆಸರನ್ನು ಸೇರಿಸಿದ್ದಾರೆ ಎಂದು ಆರೋಪಿಸಿದರು. ನಂತರ ಸಭಾನಾಯಕರಾಗಿರುವ ಪಿಯೂಷ್ ಗೋಯಲ್ ಅವರು ರಾಘವ್ ಚಡ್ಡಾ ಅವರನ್ನು ಅಮಾನತುಗೊಳಿಸುವ ನಿರ್ಣಯವನ್ನು ರಾಜ್ಯಸಭೆಯಲ್ಲಿ ಮಂಡಿಸಿದರು.

ಏತನ್ಮಧ್ಯೆ, ಅಮಾನತು ಮಾಡಿರುವುದು ʼನಕಲಿ ಸಹಿ” ಆರೋಪದ ಮೇಲೆ ಅಲ್ಲ ಎಂದು ಎಎಪಿ ಹೇಳಿದೆ ಮತ್ತು ಇದು ಬುಧವಾರ ಎಎಪಿ ನಾಯಕರು ಪತ್ರಿಕಾಗೋಷ್ಠಿ ಮಾಡಿದ ಸಂಬಂಧ ರಾಘವ ಚಡ್ಡಾ ಅವರನ್ನು ಅಮಾತು ಮಾಡಲಾಗಿದೆ ಎಂದು ಆರೋಪಿಸಿದೆ.
ಬುಧವಾರ ರಾಘವ ಚಡ್ಡಾ ಅವರು ಪತ್ರಿಕಾಗೋಷ್ಠಿ ನಡೆಸಿದ ಆರೋಪದ ಬಗ್ಗೆ ತಮ್ಮನ್ನು ಸಮರ್ಥಿಸಿಕೊಂಡ ಕಾರಣ ಅಮಾನತುಗೊಳಿಸಲಾಗಿದೆ. ವಿಶೇಷಾಧಿಕಾರ ಸಮಿತಿ ನೀಡಿದ ನೋಟಿಸ್‌ನಲ್ಲಿ ಎಲ್ಲಿಯೂ ಫೋರ್ಜರಿ, ನಕಲಿ, ಸಹಿ, ಇತ್ಯಾದಿ ಪದಗಳನ್ನು ಉಲ್ಲೇಖಿಸಿಲ್ಲ ಎಂದು ಎಎಪಿ ಹೇಳಿದೆ.
ಭಾರತೀಯ ಜನತಾ ಪಕ್ಷವು (ಬಿಜೆಪಿ) ಚಡ್ಡಾ ಅವರನ್ನು “ಉದ್ದೇಶಪೂರ್ವಕವಾಗಿ ಸಿಲುಕಿಸಲು ಪ್ರಯತ್ನಿಸುತ್ತಿದೆ” ಎಂದು ಎಎಪಿ ಆರೋಪಿಸಿದೆ. ರಾಘವ ಚಡ್ಡಾ ವಿರುದ್ಧದ ‘ನಕಲಿ ಸಹಿ’ ಆರೋಪಗಳು “ಸುಳ್ಳು ಮತ್ತು ರಾಜಕೀಯ ಪ್ರೇರಿತ” ಎಂದು ಪಕ್ಷವು ಹೇಳಿದೆ ಮತ್ತು ಪಕ್ಷದ ವಿರುದ್ಧ ಮಾತನಾಡುವುದಕ್ಕಾಗಿ ಬಿಜೆಪಿಯು ಚಡ್ಡಾ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದೆ.

ಪ್ರಮುಖ ಸುದ್ದಿ :-   "ಪ್ರತಿಯೊಂದು ದುಸ್ಸಾಹಸವೂ...ಯಾವುದೇ ಭಯೋತ್ಪಾದಕ ಕೃತ್ಯವೂ...": ಕದನ ವಿರಾಮ ಘೋಷಣೆ ನಂತ್ರ ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ನೀಡಿದ ಭಾರತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement