ಮನೆಯ ಹೊರಗೆ ವಾಕಿಂಗ್‌ ಮಾಡುತ್ತಿದ್ದ ಬಿಜೆಪಿ ನಾಯಕನ ಗುಂಡು ಹಾರಿಸಿ ಹತ್ಯೆ

ಮೊರಾದಾಬಾದ್‌ : ಬಿಜೆಪಿ ಕಿಸಾನ್ ಮೋರ್ಚಾ ನಾಯಕನನ್ನು ಗುರುವಾರ ಸಂಜೆ ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿರುವ ಅವರ ನಿವಾಸದ ಹೊರಗೆ ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ.
ನಗರದ ಮಜೋಲಾ ಪ್ರದೇಶದಲ್ಲಿ ನಡೆದ ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಿಜೆಪಿ ಮುಖಂಡ ಅನುಜ್ ಚೌಧರಿ (34) ತನ್ನ ಸಹೋದರನೊಂದಿಗೆ ಉದ್ಯಾನವನಕ್ಕೆ ವಾಕ್ ಮಾಡಲು ಹೊರಟಿದ್ದಾಗ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಆರೋಪಿ ಚೌಧರಿ ಮೇಲೆ ಗುಂಡು ಹಾರಿಸಿದ್ದು, ಚಿಕಿತ್ಸೆಗಾಗಿ ಬ್ರೈಟ್‌ಸ್ಟಾರ್ ಆಸ್ಪತ್ರೆಗೆ ತಲುಪುವ ಮೊದಲು ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು ಹಾಗೂ ಕುಟುಂಬದವರ ಹೇಳಿಕೆ ಮೇರೆಗೆ ನಾಲ್ವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

https://twitter.com/Benarasiyaa/status/1689695717609336832?ref_src=twsrc%5Etfw%7Ctwcamp%5Etweetembed%7Ctwterm%5E1689695717609336832%7Ctwgr%5Ea276249459cc8fdc0fd0bd1bcb3744fb7eb2401f%7Ctwcon%5Es1_&ref_url=https%3A%2F%2Fwww.latestly.com%2Findia%2Fnews%2Fanuj-chaudhary-murder-caught-on-camera-bjp-leader-shot-dead-by-three-bike-borne-assailants-in-moradabad-5332326.html

ರಾಜಕೀಯ ವೈಷಮ್ಯದಿಂದಾಗಿ ಕೊಲೆಯಾಗಿದೆ ಎಂದು ಕುಟುಂಬದವರು ಹೇಳುತ್ತಾರೆ. ರಾಜಕೀಯ ವೈಷಮ್ಯದಿಂದ ಈ ಕೊಲೆ ನಡೆದಿದೆ ಎಂದು ಅನುಜ್ ಚೌಧರಿ ಕುಟುಂಬ ಆರೋಪಿಸಿದ್ದು, ಹತ್ಯೆಗೆ ಪ್ರತಿಸ್ಪರ್ಧಿಗಳೇ ಕಾರಣ ಎಂದು ಆರೋಪಿಸಿದ್ದಾರೆ.
ಮೃತ ಅನುಜ್‌ ಚೌಧರಿ 2021 ರಲ್ಲಿ ಸಂಭಾಲ್‌ನ ಅಸಮೋಲಿಯಿಂದ ಬ್ಲಾಕ್ ಮುಖ್ಯಸ್ಥ ಚುನಾವಣೆಗೆ ಸ್ಪರ್ಧಿಸಿದ್ದರು ಆದರೆ ಅವರು ಚುನಾವಣೆಯಲ್ಲಿ ಕೇವಲ 10 ಮತಗಳಿಂದ ಸೋತಿದ್ದರು. ಪ್ರಸ್ತುತ ಬ್ಲಾಕ್ ಮುಖ್ಯಸ್ಥ (ಅಸ್ಮೋಲಿ) ಸಂತೋಷ್ ದೇವಿ ವಿರುದ್ಧ ಅನುಜ್ ಅವರು ಅವಿಶ್ವಾಸ ನಿರ್ಣಯಕ್ಕೆ ತಯಾರಿ ನಡೆಸುತ್ತಿದ್ದರು.
ಏತನ್ಮಧ್ಯೆ, ಪ್ರಸ್ತುತ ಜೈಲಿನಲ್ಲಿರುವ ಮೋಹಿತ್ ಚೌಧರಿ ಮತ್ತು ಅವರ ಸಹೋದರ ಅಮಿತ್ ಚೌಧರಿ ಸಹ ಅನುಜ್ ಚೌಧರಿ ಅವರೊಂದಿಗೆ ಸಂಘರ್ಷದ ಇತಿಹಾಸವನ್ನು ಹೊಂದಿದ್ದಾರೆ. ಪೊಲೀಸರು ಸಂತೋಷ್ ದೇವಿ ಅವರ ಪತಿ ಪ್ರಭಾಕರ, ಅವರ ಮಗ ಅನಿಕೇತ್ ಚೌಧರಿ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement