ಹೊಲನಗದ್ದೆಯ ಗ್ರಾಪಂ ಅಧ್ಯಕ್ಷರಾಗಿ ಎಂ. ಎಂ. ಹೆಗಡೆ ಆಯ್ಕೆ

ಕುಮಟಾ: ತಾಲೂಕಿನ ಹೊಲನಗದ್ದೆಯ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಭಾರತೀಯ ಜನತಾ ಪಕ್ಷದ ಎಂ. ಎಂ. ಹೆಗಡೆ ಹಾಗೂ ಉಪಾಧ್ಯಕ್ಷರಾಗಿ ಮಹಾಂತೇಶ ಹರಿಕಂತ್ರ ಅವರು ಆಯ್ಕೆಯಾಗಿದ್ದಾರೆ. ಸತತವಾಗಿ 5 ಬಾರಿ ಆಯ್ಕೆಯಾಗಿದ್ದ ವೇಳೆ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನದಿಂದ ವಂಚಿತವಾಗಿದ್ದ ಎಂ.ಎಂ. ಹೆಗಡೆ ಅವರು ಕೊನೆಗೂ 6ನೇ ಬಾರಿ ಗಾಪಂಗೆ ಆಯ್ಕೆಯಾಗಿರುವ ವೇಳೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಎಂ.ಎಂ. ಹೆಗಡೆಯವರು ಈ ಹಿಂದೆ ಮಂಡಲ ಪಂಚಾಯತ್ ಇರುವಾಗಿನಿಂದ ಹೊಲನಗದ್ದೆ ಗ್ತಾಪಂ ಸದಸ್ಯರಾಗಿ ಆಯ್ಕೆಯಾಗುತ್ತ ಬಂದಿದ್ದಾರೆ. ಹೊಲನಗದ್ದೆ ಪಂಚಾಯತದಲ್ಲಿ ತಮ್ಮ 6ನೇ ಬಾರಿ ಗೆಲುವು ಸಾಧಿಸಿರುವ ಅವರು, ಗ್ರಾಪಂ ಅಧ್ಯಕ್ಷರ ಎರಡನೇ ಅವಧಿಯಲ್ಲಿ ಅಧ್ಯಕ್ಷರಾಗಿ ಶುಕ್ರವಾರ ಆಯ್ಕೆಯಾದರು. ಜನತಾ ದಳದ ಮೂಲಕ ರಾಜಕಾರಣಕ್ಕೆ ಬಂದಿರುವ ಎಂ. ಎಂ. ಹೆಗಡೆ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ. ಯಲ್ಲಾಪುರ ಸಂಕಲ್ಪ ಅಧ್ಯಕ್ಷ ಹಾಗೂ ಜಿಲ್ಲಾ ಪರಿಷತ್‌ ಮಾಜಿ ಅಧ್ಯಕ್ಷ ಪ್ರಮೋದ ಹೆಗಡೆ ಹಾಗೂ ಮಾಜಿ ಸಚಿವ ಆರ್. ವಿ. ದೇಶಪಾಂಡೆ ಅವರ ನಿಕಟವರ್ತಿಗಳಾಗಿದ್ದರು. ಈಗ ಅವರು ಕಳೆದ ಕೆಲ ವರ್ಷಗಳಿಂದ ಬಿಜೆಯಲ್ಲಿ ಸಕ್ರಿಯಾಗಿದ್ದಾರೆ ಹಾಗೂ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

 

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement