ಚೆನ್ನೈ: ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ಭಾರತೀಯ ಪುರುಷರ ಹಾಕಿ ತಂಡವು ಮಲೇಷ್ಯಾವನ್ನು 4-3 ಗೋಲುಗಳಿಂದ ಸೋಲಿಸಿ ದಾಖಲೆಯ ನಾಲ್ಕನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು
ಶನಿವಾರ ಸಂಜೆ ಚೆನ್ನೈನ ಮೇಯರ್ ರಾಧಾಕೃಷ್ಣನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಜುಗರಾಜ್ ಸಿಂಗ್ ಅವರ ಪೆನಾಲ್ಟಿ ಕಾರ್ನರ್‌ನ ಗೋಲ್ ಭಾರತಕ್ಕೆ ಆರಂಭಿಕ ಮುನ್ನಡೆ ನೀಡಿತು ಮತ್ತು ಮಲೇಷ್ಯಾ ಪಂದ್ಯದ ಮೊದಲಾರ್ಧಲ್ಲೇ ಅದನ್ನು ಸಮಗೊಳಿಸಿತು ಮತ್ತು ನಂತರ ಮುಕ್ತಾಯಕ್ಕೆ ಮೊದಲು ಎರಡು ಗೋಲುಗಳಿಂದ ಮುನ್ನಡೆ ಸಾಧಿಸಿತು.
ಮೂರನೇ ಕ್ವಾರ್ಟರ್‌ನ ಮುಕ್ತಾಯದ ನಿಮಿಷಗಳಲ್ಲಿ ಗುರ್ಜಂತ್ ಸಿಂಗ್ ಸಮಬಲಗೊಳಿಸಿದರು. ಆಕಾಶದೀಪ್ ಸಿಂಗ್ ನಂತರ ನಾಲ್ಕು ನಿಮಿಷಗಳು ಉಳಿದಿರುವಾಗ ಮತ್ತೊಂದು ಗೋಲು ಹೊಡೆಯುವ ಮೂಲಕ ಜಯ ಸಾಧಿಸಿತು. ನಿಧಾನಗತಿಯ ಆರಂಭದ ಹೊರತಾಗಿಯೂ, ಒಂಬತ್ತನೇ ನಿಮಿಷದಲ್ಲಿ ಪೆನಾಲ್ಟಿಯನ್ನು ಕಾರ್ನರ್ ಅನ್ನು ಯಶಸ್ವಿಯಾಗಿ ಪರಿವರ್ತಿಸಿದ ನಂತರ ಭಾರತವು ಆರಂಭಿಕ ಮುನ್ನಡೆ ಗಳಿಸಿತು.
ಆದರೆ ಮಲೇಶಿಯಾ ಆಟಗಾರರು ಭಾರತೀಯ ರಕ್ಷಣೆಯನ್ನು ಪರೀಕ್ಷಿಸುತ್ತಲೇ ಇದ್ದರು ಮತ್ತು ಅಂತಿಮವಾಗಿ 14 ನೇ ನಿಮಿಷದಲ್ಲಿ ಅಬು ಕಮಲ್ ಅಜಾರಿ ಅವರು ಅಜುವಾನ್ ಹಸನ್ ಅವರ ನೆರವಿನಿಂದ ಸಮಬಲಗೊಳಿಸಿದರು.
ಪೆನ್ಲೇಟಿ ಕಾರ್ನರ್‌ಗಳ ಸುರಿಮಳೆಗೆ ಒಳಗಾಗುವ ಮೊದಲು ಮಲೇಷ್ಯಾ ಎರಡನೇ ಕ್ವಾರ್ಟರ್ ಅನ್ನು ಅದೇ ಆವೇಗದೊಂದಿಗೆ ಪ್ರಾರಂಭಿಸಿತು. 18ನೇ ನಿಮಿಷದಲ್ಲಿ ರಝೀ ರಹೀಮ್ ಅವರ ಪ್ರಯತ್ನವು ರಶರ್ ಹಾಗೂ 28 ನೇ ನಿಮಿಷದಲ್ಲಿ ಮುಹಮ್ಮದ್ ಅಮಿನುದ್ದೀನ್ ಅವರು ಮಲೇಷ್ಯಾಗೆ ಎರಡು ಪೆನಾಲ್ಟಿ ಕಾರ್ನರ್ ಗಳನ್ನು ಗೋಲಾಗಿ ಪರವರ್ತಿಸಿದ ನಂತರ ಮಲೇಷ್ಯಾ ಎರಡು ಗೋಲುಗಳ ಮುನ್ನಡೆ ಪಡೆಯಿತು.
ಅಂತಿಮ ಕ್ವಾರ್ಟರ್ ಅವಧಿಯಲ್ಲಿ ಭಾರತದ ಅದೃಷ್ಟ ಕೇವಲ ಒಂದು ನಿಮಿಷದಲ್ಲಿ ಬದಲಾಯಿತು. ನಾಯಕ ಹರ್ಮನ್‌ಪ್ರೀತ್ 45 ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್‌ನಿಂದ ಗೋಲು ಗಳಿಸಿದರು ಮತ್ತು ನಂತರ ಗುಜ್ರಾಂತ್ ಫೀಲ್ಡ್ ಗೋಲು ಗಳಿಸಿ ಸ್ಕೋರ್ ಅನ್ನು ಸಮಗೊಳಿಸಿದರು.
ಭಾರತವು ಮಲೇಷಿಯಾದ ರಕ್ಷಣೆಯ ಮೇಲೆ ಒತ್ತಡವನ್ನು ಕಾಯ್ದುಕೊಂಡಿತು, ಸತತ ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದುಕೊಂಡಿತು, ಆದರೆ ಅವರ ಅವಕಾಶ ವ್ಯರ್ಥವಾಯಿತು. ಅಂತಿಮವಾಗಿ, ಆಕಾಶದೀಪ್ ಸಿಂಗ್ ಅವರು ಮನ್‌ದೀಪ್ ಸಿಂಗ್ ಅವರಿಂದ ಪಾಸ್ ಪಡೆದ ನಂತರ ಸ್ಲ್ಯಾಪ್ ಸ್ಟಿಕ್‌ನಿಂದ ಗೋಲು ಹೊಡೆದು ಭಾರತ ವಿಜಯ ಪತಾಕೆ ಹಾರಿಸುವಂತೆ ಮಾಡಿದರು.
ಇದೇವೇಳೆ ಜಪಾನ್ ತಂಡವು ದಕ್ಷಿಣ ಕೊರಿಯಾ ತಂಡವನ್ನು 5-3 ಗೋಲಿಗಳಿಂದ ಸೋಲಿಸುವ ಮೂಲಕ ಮೂರನೇ ಸ್ಥಾನ ಪಡೆಯಿತು.
ನಿಮ್ಮ ಕಾಮೆಂಟ್ ಬರೆಯಿರಿ