ಅಸಮರ್ಪಕ ಮುಂಗಾರು ಮಳೆ: ಬರ ಘೋಷಣೆ ಕಠಿಣ ನಿಯಮ ಸಡಿಲಿಸುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಹಾಗೂ ಅಸಮಪರ್ಕ ಮುಂಗಾರು ಮಳೆ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಘೋಷಣೆಯ ಮಾನದಂಡ ಪರಿಷ್ಕರಣೆ ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​ ಅವರಿಗೆ ಪತ್ರ ಬರೆದ ಸಿದ್ದರಾಮಯ್ಯ, ಬರಗಾಲ ಘೋಷಣೆಗೆ ಕೇಂದ್ರದ ಈಗಿನ ಬರ ಘೋಷಣೆ ಮಾರ್ಗಸೂಚಿ ಅಡ್ಡಿ ಯಾಗಿದೆ. ಸದ್ಯದ ನಿಯಮಗಳ ಪ್ರಕಾರ ಬರ ಘೋಷಣೆ ಮಾಡಲು ಕೇಂದ್ರದ ನಿಯಾಮಾವಳಿ ಪಾಲನೆ ಕಡ್ಡಾಯವಾಗಿದ್ದು, ಕಟ್ಟುನಿಟ್ಟಿನ ನಿಯಮಾವಳಿ ಪಾಲಿಸಿದರೆ ಕೆಲವು ತಾಲೂಕುಗಳಿಗೆ ಅನ್ಯಾಯ ಆಗಲಿದೆ. ಹೀಗಾಗಿ ನಿಯಾಮಾವಳಿಗಳ ಸಡಿಲಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಮಾನ್ಸೂನ್ ಮಳೆ ಆಧರಿಸಿ ಬರ ಘೋಷಣೆ ಮಾಡಲಾಗುತ್ತದೆ. ಆದರೆ ವಿವಿಧ ರಾಜ್ಯ ಮತ್ತು ಪ್ರದೇಶದಲ್ಲಿ ಮಳೆಯ ಪ್ರಮಾಣ, ವಾತಾವರಣ ಬೇರೆ ಬೇರೆ ರೀತಿ ಇರುತ್ತದೆ. ಹೀಗಾಗಿ ಅಲ್ಲಿನ ಪ್ರದೇಶಗಳು. ಸ್ಥಳೀಯ ಪರಿಸರ ಅಂಶಗಳು, ನೀರಿನ ಲಭ್ಯತೆ ಮತ್ತು ಕೃಷಿ ಪದ್ಧತಿಗಳನ್ನು ಪರಿಗಣಿಸುವ ನಿರ್ದಿಷ್ಟ ಮಾನದಂಡಗಳನ್ನು ರೂಪಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಬರಕ್ಕೆ ಶೇ. 50 % ಹಾನಿ ಆಗಬೇಕು. ಅಲ್ಲದೇ, ಬರ ಘೋಷಣೆಗೆ ಕನಿಷ್ಠ ಶೇ.60% ಮಳೆ‌ ಕೊರತೆ ಇರಬೇಕಿದ್ದು, ಕನಿಷ್ಠ ಮೂರು ವಾರಗಳು ಕಡಿಮೆ ಇರದಂತೆ ಮಳೆ ಆಗಿರಬಾರದು ಎಂಬ ನಿಯಮವಿದೆ. ಹಾಗಾಗಿ ಮಳೆ‌ ಕೊರತೆ ಪ್ರಮಾಣವನ್ನು ಶೇ. 60% ರಿಂದ 30%ಕ್ಕೆ ಇಳಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.

ಪ್ರಮುಖ ಸುದ್ದಿ :-   ಬೆಳಗಾವಿ: ಹಾಡಹಗಲೇ ಸ್ಕ್ರೂ ಡ್ರೈವರ್​ನಿಂದ ಚುಚ್ಚಿ ಯುವಕನ ಕೊಲೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement