ಕೊಲೆ ಪ್ರಕರಣ: ಘಟನೆ ನಡೆದ 24 ತಾಸಿನಲ್ಲೇ ಆರೋಪಿ ಪತ್ತೆ ಹಚ್ಚಿದ ಶ್ವಾನ…!

ಕೋಲಾರ: ಕೊಲೆ ಪ್ರಕರಣದಲ್ಲಿ ಶ್ವಾನವೊಂದು ಘಟನೆ ನಡೆದ 24 ಗಂಟೆಯಲ್ಲಿ ಆರೋಪಿಯನ್ನ ಪತ್ತೆ ಹಚ್ಚಿದೆ.
ಕೋಲಾರ ಜಿಲ್ಲೆ (Kolar) ಬೇವಳ್ಳಿ ಎಂಬಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರ ಆರೋಪಿಯನ್ನು 24 ಗಂಟೆಯಲ್ಲಿ 15 ಕಿ.ಮೀ ದೂರದಲ್ಲಿ ಅಡಗಿ ಕುಳಿತಿದ್ದ ಪತ್ತೆ ಹಚ್ಚುವ ಮೂಲಕ ಪೊಲೀಸ್ (Police) ಇಲಾಖೆಯ ಶ್ವಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಜಿಲ್ಲಾ ಅಫರಾಧ ವಿಭಾಗದ ರಕ್ಷಾ ಎಂಬ ಹೆಸರಿನ ಶ್ವಾನ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿದ ನಾಯಿ.
ಬೇವಳ್ಳಿ ಗ್ರಾಮದಲ್ಲಿ ಸುರೇಶ್ (35) ಎಂಬಾತನನ್ನ ಮಾರಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿತ್ತು. ಸ್ಥಳದಲ್ಲಿ ಯಾವುದೇ ಸುಳಿವು ಸಿಗದ ಕಾರಣ ಆರೋಪಿಯನ್ನು ಪತ್ತೆ ಹಚ್ಚಲು ಪೊಲೀಸರು ನಾಯಿಯನ್ನು ಕರೆತಂದಿದ್ದರು. ಶ್ವಾನವು ಕೊಲೆ ನಡೆದ ಬೇವಹಳ್ಳಿ ಗ್ರಾಮದ ಉತ್ತರಕ್ಕೆ ಸುಮಾರು 1.5 ಕಿ.ಮೀ ದೂರದಲ್ಲಿ ಮರ ಗಿಡಗಳ ಮಧ್ಯೆ ಅವಿತು ಕುಳಿತ್ತಿದ್ದ ಆರೋಪಿಯ ಮುಂದೆ ಹೋಗಿ ನಿಂತುಕೊಂಡಿದೆ. ಪೊಲೀಸರು ಬಳಿಕ ಆರೋಪಿಯನ್ನು ಹಿಡಿದು ವಿಚಾರಣೆ ಮಾಡಿದಾಗ ಕೊಲೆ ಕೃತ್ಯ ಎಸಗಿರುವುದು ಬಯಲಾಗಿದೆ. ಈ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸ್ ಶ್ವಾನದ ಈ ಕಾರ್ಯಕ್ಕೆ ಕೋಲಾರ ಎಸ್ಪಿ ನಾರಾಯಣ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಅಶ್ಲೀಲ‌ ವೀಡಿಯೊ ಇಟ್ಟುಕೊಳ್ಳುವುದು ಅಪರಾಧ, ಡಿಲೀಟ್‌ ಮಾಡಿ : ಎಸ್‌ಐಟಿ ಮುಖ್ಯಸ್ಥರು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement